Friday, October 23, 2009

ಪುಸ್ತಕ ಬಿಡುಗಡೆ-ಹಾಡಿನ ಹಬ್ಬ

ಲತಾ ಮಂಗೇಶ್ಕರ್‌ ಜೀವನವನ್ನು ಕುರಿತ ಪುಸ್ತಕ ‘ಹಾಡುಹಕ್ಕಿಯ ಹೃದಯಗೀತೆ ’ ಬರುವ ಮಂಗಳವಾರ(೨೭ನೇ ತಾರೀಖು) ಸಂಜೆ ೬ ಗಂಟೆಗೆ ಅನಾವರಣಗೊಳ್ಳುತ್ತಿದೆ. ವಿಜಯ ಕರ್ನಾಟಕದ ಸುದ್ದಿ ಸಂಪಾದಕರಾದ ವಸಂತ ನಾಡಿಗೇರ ಬರೆದಿರುವ ಈ ಪುಸ್ತಕದ ಬಿಡುಗಡೆಗೆ ಎಸ್‌ ಪಿ ಬಾಲಸುಬ್ರಹ್ಮಣ್ಯಂ ಬರುತ್ತಿರುವುದು ವಿಶೇಷ. ಐದುಗಂಟೆಗೇ ಬಂದರೆ ಉಪಾಹಾರವೂ, ಚಂದ್ರಿಕಾ ಗುರುರಾಜ್‌ ಅವರ ಕಂಠದಲ್ಲಿ ಲತಾ ಹಾಡಿದ ಹಾಡುಗಳನ್ನು ಕೇಳುವ ಭಾಗ್ಯವೂ ಸಿಕ್ಕುತ್ತದೆ. ಮರೆಯದೆ ಬನ್ನಿ. ಸ್ಥಳ: ಆನಂದರಾವ್‌ ಸರ್ಕಲ್‌ ಬಳಿ ಇರುವ ಕೆಇಬಿ ಇಂಜಿನಿಯರುಗಳ ಸಂಘದ ರಜತ ಮಹೋತ್ಸವ ಭವನ.(ರೇಸ್‌ಕೋರ್ಸ್‌ ಅಡ್ಡರಸ್ತೆ).

Sunday, October 11, 2009

ವಿವೇಕ ರೈ ಪುಸ್ತಕಗಳು



ಜರ್ಮನಿಗೆ ಅತಿಥಿ ಪ್ರಾಧ್ಯಾಪಕರಾಗಿ ತೆರಳುತ್ತಿರುವ ಬಿ ಎ ವಿವೇಕ ರೈ ಅವರನ್ನು ಅಭಿನಂದಿಸಲು ಪುಟ್ಟ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿದೆ. ಬೆಂಗಳೂರಿನ ನಯನ ಸಭಾಂಗಣದಲ್ಲಿ ಸೋಮವಾರ ಸಂಜೆ ೫.೩೦ಕ್ಕೆ ನಡೆಯುವ ಈ ಸಮಾರಂಭದಲ್ಲಿ ರೈ ಅವರ ಮೂರು ಪುಸ್ತಕಗಳೂ ಬಿಡುಗಡೆಯಾಗಲಿವೆ. ಆ ಪೈಕಿ ಎರಡರ ಮುಖಪುಟಗಳನ್ನು ಇಲ್ಲಿ ಕಾಣಬಹುದು.

Thursday, October 8, 2009

ಸ್ವಪ್ನ ಸಾರಸ್ವತ ಲೋಕಕ್ಕೆ ಬನ್ನಿ


ಕತೆಗಾರ ಗೋಪಾಲಕೃಷ್ಣ ಪೈ ಅವರ ಚೊಚ್ಚಲ ಕಾದಂಬರಿ ‘ಸ್ವಪ್ನ ಸಾರಸ್ವತ’ ಈ ಶನಿವಾರ ಬಿಡುಗಡೆಯಾಗುತ್ತಿದೆ. ಹಸ್ತಪ್ರತಿಯಲ್ಲೇ ಕಾದಂಬರಿಯನ್ನು ಓದಿದವರು ಇನ್ನಿಲ್ಲದಂತೆ ಮೆಚ್ಚಿದ್ದಾರೆ. (ಬೆನ್ನುಡಿಯನ್ನು ಓದಿರಿ). ಬೆಂಗಳೂರಿನ ವರ್ಲ್ಡ್‌ ಕಲ್ಚರ್‌ ಇನ್ಸ್‌ಟಿಟ್ಯೂಟ್‌ನಲ್ಲಿ ಬೆಳಗ್ಗೆ ೧೦ ಗಂಟೆಗೆ ಆರಂಭವಾಗುವ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ತಪ್ಪದೆ ಬನ್ನಿ. ಮುಖಪುಟ ಹೇಗಿದೆ ತಿಳಿಸಿ.