Wednesday, December 29, 2010

ಈಚಿನ ಮುಖಪುಟಗಳು






ಅನಂತಮೂರ್ತಿಯವರ ಫೋಟೊ: ಕೆ ಎಸ್‌ ರಾಜಾರಾಂ ಅವರದು. ಕೃಷ್ಣನ ಕಲಾಕೃತಿ: ಇಂಟರ್‌ನೆಟ್‌

Monday, November 29, 2010

ಆರು ಹೊಸ ನುಡಿ ಪುಸ್ತಕಗಳು- ಈ ಭಾನುವಾರ






ಡಿಸೆಂಬರ್‌ ೫ನೇ ತಾರೀಖು ಬೆಳಗ್ಗೆ ೧೦.೧೫ಕ್ಕೆ ಬಸವನಗುಡಿಯ ವರ್ಲ್ಡ್‌ ಕಲ್ಚರ್‌ ಇನ್ಸ್‌ಟಿಟ್ಯೂಟ್‌ನಲ್ಲಿ ನುಡಿ ಪುಸ್ತಕ ಪ್ರಕಾಶನ ಸಂಸ್ಥೆಯ ಆರು ಪುಸ್ತಕಗಳು ಬಿಡುಗಡೆಯಾಗುತ್ತಿವೆ. ಅದರಲ್ಲಿ ಕೆಲವು ಮುಖಪುಟಗಳು ಇಲ್ಲಿವೆ.

Tuesday, November 23, 2010

ಮತ್ತೆ ಮತ್ತೆ ಮುಖಪುಟಗಳು



ಅಹರ್ನಿಶಿ ಪ್ರಕಾಶನದಿಂದ ಮತ್ತೆರಡು ಪುಸ್ತಕ ಈ ಭಾನುವಾರ ಹೊರಬರುತ್ತಿವೆ. ಮತ್ತೆ ಮತ್ತೆ ಬೇಂದ್ರೆ ಎಂಬ ಮೊದಲ ಪುಸ್ತಕದಲ್ಲಿ ಬೇಂದ್ರೆ ಕುರಿತು ಕಿರಂ ಮಾಡಿದ ಹಲವು ಉಪನ್ಯಾಸಗಳಿವೆ. ಕಾವ್ಯಾಸಕ್ತರಿಗೆ ನಿಜಕ್ಕೂ ಇದೊಂದು ಉಡುಗೊರೆಯಂಥ ಪುಸ್ತಕ. ಹಲವರನ್ನು ಬೇಡಿ ಭಾಷಣದ ಆಡಿಯೋಗಳನ್ನು ಸಂಪಾದಿಸಿ, ಗಂಟೆಗಟ್ಟಲೆ ಕೂತು ಕೇಳಿ, ಹಿಂದೆ ಮುಂದೆ ಓಡಿಸಿ, ಹಾಳೆಗಿಳಿಸಿದ್ದಲ್ಲದೆ ಪುಸ್ತಕವನ್ನು ಪ್ರಕಾಶಿಸುತ್ತಿರುವ ಅಕ್ಷತಾಗೆ ಅಭಿನಂದನೆಗಿಂತ ಹೆಚ್ಚಾಗಿ ಧನ್ಯವಾದವನ್ನೇ ಹೇಳಬೇಕು.
ಎರಡನೇ ಪುಸ್ತಕ ನೀಷೆ ಕುರಿತದ್ದು. ಬಿಡುಗಡೆ ಕಾರ್ಯಕ್ರಮ ಶಿವಮೊಗ್ಗದಲ್ಲಿ.

Friday, November 19, 2010

ನರಿಗಳಿಗೇಕೆ ಕೋಡಿಲ್ಲ: ಒಂದು ನಾಟಕದ ಕರಪತ್ರ


‘ಸಂಚಾರಿ ಥಿಯೇಟ್ರು’ ತಂಡ ಈ ವಾರಾಂತ್ಯದಲ್ಲಿ ಅಭಿನಯಿಸಲಿರುವ ಕುವೆಂಪು ವಿರಚಿತ ನಾಟಕದ ಕರಪತ್ರದ ವಿನ್ಯಾಸ. ಎಲ್ಲಿ? ಎಷ್ಟು ಹೊತ್ತಿಗೆ? ಸಂಪೂರ್ಣ ವಿವರಗಳಿಗೆ ‘ಅವಧಿ’ ನೋಡಿ.

Wednesday, August 18, 2010

ಬಾಪೂ ನಂತರದ ಭಾರತ

ಹೆಸರಾಂತ ಲೇಖಕ ರಾಮಚಂದ್ರ ಗುಹ ಬರೆದ ‘ಇಂಡಿಯಾ ಆಫ್ಟರ್‌ ಗಾಂಧಿ’ ಯನ್ನು ವಸಂತ ಪ್ರಕಾಶನ ಕನ್ನಡಕ್ಕೆ ತರುತ್ತಿದೆ. ಜಿ ಎನ್‌ ರಂಗನಾಥರಾವ್‌ ಅನುವಾದಿಸಿರುವ ಈ ಪುಸ್ತಕದ ಎರಡು ಸಂಪುಟಗಳು ಈ ಭಾನುವಾರ(೨೨ ಆಗಸ್ಟ್‌) ಬಿಡುಗಡೆಯಾಗಲಿವೆ. ಬೆಳಗ್ಗೆ ೧೦.೩೦ಕ್ಕೆ ನೃಪತುಂಗಾ ರಸ್ತೆಯ ಯವನಿಕಾ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಆರಂಭಕ್ಕೂ ಮುನ್ನ ಲಘು ಉಪಾಹಾರವಿದೆ.


ಹೊಸ ಮುಖಪುಟ ವಿನ್ಯಾಸಗಳು






Thursday, July 29, 2010

ಮೂರು ಹೊಸ ಛಂದ ಪುಸ್ತಕಗಳು



ಕಟ್ಟು ಕಥೆಗಳು ಪುಸ್ತಕದ ಮುಖಪುಟ ವಿನ್ಯಾಸ: ವಿನಯ ಕುಮಾರ ಸಾಯ.
ಇನ್ನೆರಡು ನನ್ನವು. ಗುಣ ಮುಖಪುಟದ ಫೋಟೊ ಜೆನ್ನಿ ಸಾಲಿಸ್‌.
ಈ ಮೂರೂ ಪುಸ್ತಕಗಳು ಸೋಮವಾರದಿಂದ ಅಂಗಡಿಗಳಲ್ಲಿ ಸಿಗುತ್ತವೆ.

Tuesday, July 20, 2010

ಆತ್ಮಚರಿತ್ರೆಗಳ ಕಾಲ


ಕುಂವೀ ಆತ್ಮಕಥನ ಸಪ್ನದಿಂದ ಇನ್ನೆರಡು ವಾರಗಳಲ್ಲಿ ಬಿಡುಗಡೆಯಾಗಲಿದೆ. ತಾರಾನಾಥರ ಪುಸ್ತಕ ಬರುವ ಭಾನುವಾರವೇ ಅಂಕಿತಪುಸ್ತಕದಿಂದ ಹೊರಬರುತ್ತಿದೆ. ಪ್ರೇಮಾ ಕಾರಂತರ ಆತ್ಮಕತೆಯೂ ಸದ್ಯದಲ್ಲಿಯೇ ಹೊರಬರಲಿದೆ. ಅದರ ಮುಖಪುಟ ನೋಡಲು ಈ ಬ್ಲಾಗಿಗೆ ಮತ್ತೊಮ್ಮೆ ಬನ್ನಿ!

Thursday, July 8, 2010

ಅರುಣನ ಹೊಸ ಪದ್ಯಗಳು

ಗೆಳೆಯ ಅರುಣ್ ಜೋಳದ ಕೂಡ್ಲಿಗಿಯ ಹೊಸ ಕವನಗಳ ಪುಸ್ತಕವಿದು. ಅಹರ್ನಿಶಿ ಮತ್ತು ಕೊಟ್ಟೂರಿನ ‘ನಾವು ನಮ್ಮಲ್ಲಿ’ ಬಳಗ ಕೂಡಿ ಹೊರತರುತ್ತಿರುವ ಈ ಹೊತ್ತಗೆಯ ಬಿಡುಗಡೆ ಮೈಸೂರಿನಲ್ಲಿ- ನಾಡಿದ್ದು ಶನಿವಾರ. ಸಂಜೆ ೬.೩೦ಕ್ಕೆ ಅಂಗನವಾಡಿ ಕಾರ್ಯಕರ್ತೆ ಕಲಾ ಇದನ್ನು ಬಿಡುಗಡೆ ಮಾಡಲಿದ್ದಾರೆ. ಬಂಜಗೆರೆ ಜಯಪ್ರಕಾಶ್‌ ಪುಸ್ತಕ ಕುರಿತು ಮಾತಾಡುತ್ತಾರೆ. ಮಂಜುನಾಥ್ ಲತಾ ಮತ್ತು ಉಷಾರಾಣಿ ಕೆಲವು ಪದ್ಯಗಳನ್ನು ಓದಲಿದ್ದಾರೆ.
ಶನಿವಾರ ಮತ್ತು ಭಾನುವಾರ ನಡೆಯಲಿರುವ ‘ಕರ್ನಾಟಕದ ವರ್ತಮಾನ’ ಎಂಬ ಮುಕ್ತಸಂವಾದದ ಹಲವು ಕಾರ್ಯಕ್ರಮಗಳಲ್ಲಿ ಈ ಪುಸ್ತಕ ಬಿಡುಗಡೆ ಒಂದು. ಉಳಿದ ಕಾರ್ಯಕ್ರಮಗಳ ವಿವರಕ್ಕೆ ಅವಧಿ ನೋಡಿ. ಹಲವು ಆಸಕ್ತಿಕರ ಗೋಷ್ಠಿಗಳು ನಡೆಯುತ್ತಿವೆ.
ಅಂದಹಾಗೆ ಸ್ಥಳ: ವನರಂಗ(ರಂಗಾಯಣದ ಆವರಣ)

Tuesday, June 22, 2010

ರಾಮ ಕೃಷ್ಣ ಪ್ರೇಮಾಂತರ


ಎಚ್ಚೆಸ್ವಿ ಮತ್ತು ಲಕ್ಷ್ಮಣರಾವ್‌ ಅವರ ಈ ಎರಡೂ ಕವನ ಸಂಕಲನಗಳ ಪ್ರಕಾಶಕರು: ವಸಂತ ಪ್ರಕಾಶನ

Tuesday, June 15, 2010

ನನ್ನಯ ಹಕ್ಕಿ ಬಿಟ್ಟೇಬಿಟ್ಟೆ

ಇದು ಸ್ನೇಹಿತ, ಛಾಯಾಚಿತ್ರಕಾರ ಡಿ ಜಿ ಮಲ್ಲಿಕಾರ್ಜುನರ ಬರಲಿರುವ ಪುಸ್ತಕದ ಮುಖಪುಟ. ಅವರ ಹಕ್ಕಿ, ಚಿಟ್ಟೆ, ಕೀಟಗಳ ಬಣ್ಣದ ಲೋಕವೇ ಅದರಲ್ಲಿರುತ್ತೆ. ಕಾಯುವಂಥ ಪುಸ್ತಕ. ಬಿಡುಗಡೆ ಹೊತ್ತಲ್ಲಿ ಹಾಕಬೇಕಿತ್ತು. ಆದ್ರೆ ಬ್ಲಾಗ್‌ ಅಪ್‌ಡೇಟಾಗಿ ಬಹಳ ದಿನ ಆಗಿತ್ತಲ್ಲ ಅದಕ್ಕೆ ಈಗಲೇ ಹಾಕಿದೆ! ನಿಮಗೆ ಇಷ್ಟವಾದರೂ ಆಗದಿದ್ದರೂ ನಿಮ್ಮ ಕಮೆಂಟಿಂದಲೇ ನನಗೆ ಗೊತ್ತಾಗಬೇಕು!!

Thursday, June 3, 2010

ಜೋಗಿಯ ಸಿರಿಬೆಳಕಿನಲ್ಲಿ...

ಜೋಗಿಗೆ ಬರವಣಿಗೆಯೊಂದು ನಿತ್ಯೋತ್ಸವ. ದಾರಿ ಸವೆಯುವ ತನಕ ಮೆರವಣಿಗೆ; ಬೆರಳು ಸವೆಯುವ ತನಕ ಬರವಣಿಗೆ ಅಂತ ತಮ್ಮ ಹೊಸ ಪುಸ್ತಕದ ಬೆನ್ನುಡಿಯಲ್ಲಿ ಅವರೇ ಘೋಷಿಸಿದ್ದಾರೆ ಕೂಡ. ಹೌದು, ಜೋಗಿ ಮತ್ತೆ ಮೂರು ಪುಸ್ತಕಗಳೊಂದಿಗೆ ನಿಂತಿದ್ದಾರೆ. ಬಸವನಗುಡಿಯ ವರ್ಲ್ಡ್‌‌ಕಲ್ಚರ್‌ ಸಂಸ್ಥೆಯ ಆವರಣದಲ್ಲಿ ಈ ಭಾನುವಾರ ಬೆಳಗ್ಗೆ ಸಿಗೋಣ ಬನ್ನಿ ಎನ್ನುತ್ತಿದ್ದಾರೆ. ಮೂರೂ ಪುಸ್ತಕಗಳ ಮುಖಪುಟಗಳು ಇಲ್ಲಿವೆ. ಹೇಳಿ ಹೇಗಿವೆ?



Tuesday, May 4, 2010

ಈ ಸಲದ ಛಂದ ಮುಖಪುಟಗಳು ಹೀಗಿವೆ




ಹಲೋಹಲೋ ಚಂದಮಾಮದ ಮುಖಪುಟ ವಿನಯ ಕುಮಾರ ಸಾಯ
ಹುಲಿರಾಯ ಮುಖಪುಟ: ಇಂದು ಹರಿಕುಮಾರ್
ಉಳಿದೆರಡು ಪುಸ್ತಕಗಳ ಮುಖಪುಟ ವಿನ್ಯಾಸ ನನ್ನದು.