Friday, April 30, 2010

ಸೃಜನಾ ಒಡಿಸ್ಸಿ ರಂಗಪ್ರವೇಶಕ್ಕೆ ಬನ್ನಿಮೇ ೭ನೇ ತಾರೀಖು ಶುಕ್ರವಾರ ಸಂಜೆ ೬.೩೦ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಜಯಂತ್‌ ಕಾಯ್ಕಿಣಿ ಮಗಳು ಸೃಜನಾ ರಂಗಪ್ರವೇಶ. ಬನ್ನಿ.

Saturday, April 24, 2010

ಅಣ್ಣನ ಹುಟ್ಟುಹಬ್ಬ- ಕಾಡುವ ನೆನಪು

ರಾಜ್‌ಕುಮಾರ್‌ ಇಲ್ಲದೆ ಇನ್ನೊಂದು ವರ್ಷ ಕಳೆದಿದೆ. ಯಾಕೋ ದಿನದಿಂದ ದಿನಕ್ಕೆ ಅವರನ್ನು ಹೆಚ್ಚೆಚ್ಚು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಎನಿಸುತ್ತದೆ. ಅವರ ನನ್ನ ಮನಸಿನ ಇಷ್ಟೊಂದು ಮುಖ್ಯ ಭಾಗವಾಗಿದ್ದರು ಎಂದು ಅರಿವಾಗುತ್ತಾ ಆಶ್ಚರ್ಯವೂ ಎನಿಸುತ್ತದೆ. ರಾಜ್‌ಕುಮಾರ್‌ ಎಂಬ ಚೇತನಕ್ಕೆ ಪ್ರೀತಿಯಿಂದ ನಮಿಸುತ್ತಾ ಇಲ್ಲಿ ಅವರ ರೇಡಿಯೊ ಸಂದರ್ಶನವೊಂದನ್ನು ಕೊಟ್ಟಿದ್ದೇನೆ. ಒಂದುಗಂಟೆ ಅವಧಿಯ ಈ ಲಿಂಕ್‌ನಲ್ಲಿ ಎರಡು ಸಂದರ್ಶನಗಳಿವೆ. ಎರಡನೇಯದರಲ್ಲಿ ರಾಜ್‌ ಗೋಕಾಕ್‌ ಚಳವಳಿಯ ನೆನಪುಗಳನ್ನು ಸ್ವಾರಸ್ಯವಾಗಿ ಹಂಚಿಕೊಂಡಿದ್ದಾರೆ. ಅವರಲ್ಲಿರುವ ಮುಗ್ದತೆಯನ್ನೂ ಈ ಮಾತುಗಳಲ್ಲಿ ಕಾಣಬಹುದು. ಜೇನುಗಳು ಕಡಿದು ಎಲ್ಲರ ಮೂತಿ ಆಂಜನೇಯನ ಥರ ಆಗಿದ್ದು, ಸಾಗರದಲ್ಲಿ ಮಳೆಯ ನಡುವೆಯೂ ಸೇರಿದ ಕೊಡೆ ಹಿಡಿದು ಸೇರಿದ್ದ ಜನಸಾಗರ.....ಕೊನೆಯಲ್ಲಿ ವಾದ್ಯಗಳ ನೆರವಿಲ್ಲದೆ ರಾಜ್‌ ಹಾಡಿರುವ ಹಾಡುಗಳನ್ನೂ ಕೇಳಿ ಆನಂದಿಸಿ.
ಕೆಲವರಿಗೆ ಕೇಳಲು ಸಾಧ್ಯವಾಗುತ್ತಿಲ್ಲವೆಂದು ಕಮೆಂಟುಗಳು ಬರುತ್ತಿವೆ. ಈ ಲಿಂಕ್‌ ಪ್ರಯತ್ನಿಸಿ ನೋಡಿ.

Thursday, April 22, 2010

ವಿಭಾ ಹೆಸರಲ್ಲೊಂದು ಪುಸ್ತಕ ಪ್ರಶಸ್ತಿ

ಅಕಾಲದಲ್ಲಿ ಅಗಲಿದ ಕವಯತ್ರಿ ವಿಭಾ ತಿರಕಪಡಿ ಹೆಸರಿನಲ್ಲಿ ಒಂದು ಒಳ್ಳೆಯ ಕೆಲಸ ಮಾಡಲು ಹೊರಟಿದ್ದಾರೆ ಸುನಂದಾ ಮೇಡಂ.
ಅವರಿಗೆ ಥ್ಯಾಂಕ್ಸ್‌. ಇಲ್ಲಿ ಅದರ ವಿವರಗಳಿವೆ.

ವಿಭಾ ಸಾಹಿತ್ಯ ಪ್ರಶಸ್ತಿ
ಕನ್ನಡದ ಪ್ರತಿಭಾನ್ವಿತ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ `ವಿಭಾ ಸಾಹಿತ್ಯ ಪ್ರಶಸ್ತಿ'ಯನ್ನು ಈ ವರ್ಷದಿಂದ ಆರಂಭಿಸಲಾಗಿದೆ. ಇದಕ್ಕಾಗಿ ಯಾವುದೇ ವಯಸ್ಸಿನ ನಿರ್ಬಂಧವಿಲ್ಲದೇ ಕನ್ನಡದ ಕವಿ/ಕವಯಿತ್ರಿಯರ ಕವಿತೆಗಳ ಹಸ್ತಪ್ರತಿಯನ್ನು ಆಹ್ವಾನಿಸಲಾಗಿದೆ. ಹಸ್ತಪ್ರತಿಯಲ್ಲಿ ಕನಿಷ್ಟ ೩೦ ಕವಿತೆಗಳಿರಬೇಕು.
ಪ್ರಶಸ್ತಿಯು ರೂ. ೫೦೦೦/- ನಗದು ಬಹುಮಾನವನ್ನು ಒಳಗೊಂಡಿರುತ್ತದೆ.
ಪ್ರಶಸ್ತಿ ವಿಜೇತ ಹಸ್ತಪ್ರತಿಯನ್ನು ಗದುಗಿನ ಲಡಾಯಿ ಪ್ರಕಾಶನದಿಂದ ಪ್ರಕಟಿಸಿ, ೨೭-೯-೨೦೧೦ ರಂದು ವಿಭಾ ಹುಟ್ಟಿದ ದಿನವೇ ಬಿಡುಗಡೆಗೊಳಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭ ಕೂಡ ಆಯೋಜಿಸಲಾಗುವುದು.
ಹಸ್ತಪ್ರತಿ ಕಳುಹಿಸಲು ಕೊನೆಯ ದಿನಾಂಕ: ೧೫ ಜುಲೈ ೨೦೧೦.

ಹಸ್ತಪ್ರತಿಯನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡಬೇಕಾಗಿ ವಿನಂತಿ.
ಪ್ರಕಾಶ ಮತ್ತು ಸುನಂದಾ ಕಡಮೆ,
ಸಂಚಾಲಕರು, `ವಿಭಾ ಸಾಹಿತ್ಯ ಪ್ರಶಸ್ತಿ'
ನಂ. ೯೦, ನಾಗಸುಧೆ, ಕಾಳಿದಾಸನಗರ,
ವಿದ್ಯಾನಗರ ವಿಸ್ತರಣೆ, ಹುಬ್ಬಳ್ಳಿ-೫೮೦೦೩೧.
ದೂರವಾಣಿ:೦೮೩೬-೨೩೭೬೮೨೬, ೯೮೪೫೭೭೯೩೮೭.

Thursday, April 15, 2010

ಎಲ್ಲರಿಗೂ ಇಷ್ಟವಾಗುವಂಥ ಒಂದು ಪುಸ್ತಕ

ನಮ್ಮಮ್ಮ ಅಂದ್ರೆ ಈಗ ತುಂಬಾ ಇಷ್ಟ: ವಿಶೇಷ ಸಂಪುಟದ ಇಣುಕುನೋಟ

ನಿಮಗೆಲ್ಲ ಇಷ್ಟವಾದ ಈ ಪುಸ್ತಕದ ಏಳನೇಯ ಮುದ್ರಣ ವಿಶೇಷ ಸಂಪುಟದ ರೂಪದಲ್ಲಿ ಹೊರಬರುತ್ತಿದೆ. ಅದರೊಂದಿಗೆ ಆಡಿಯೋ ಸಿಡಿ ಕೂಡ ಇರುತ್ತದೆ. ಅಮ್ಮನ ದಿನ ಹತ್ತಿರವಾಗುತ್ತಿರುವಂತೆ, ಒಂದು ಉತ್ತಮ ಉಡುಗೊರೆಯಾಗಬಲ್ಲಂತೆ ರೂಪುಗೊಳ್ಳುತ್ತಿರುವ ಈ ಪುಸ್ತಕದ ಇಣುಕು ನೋಟ ಇಲ್ಲಿದೆ. ಕೆಳಗಡೆ ಸ್ಕ್ರಾಲ್‌ ಎಂದಿರುವಲ್ಲಿ ಸ್ಲೈಡ್‌ ಎಂಬ ಆಪ್ಷನ್‌ ಆರಿಸಿಕೊಂಡು ಮೇಲೆ ಫುಲ್ ಸ್ಕ್ರೀನ್‌ ಎಂಬುದನ್ನು ಕ್ಲಿಕ್‌ ಮಾಡಿದರೆ ಚೆನ್ನಾಗಿ ಕಾಣುತ್ತದೆ. ನೋಡಿ ಹೇಳಿ.

Thursday, April 8, 2010

ಪುಸ್ತಕಕಾರರಾಗಿ ಭಡ್ತಿ!

ವಿಜಯಕರ್ನಾಟಕದ ಪರ್ತಕರ್ತ, ಗೆಳೆಯ ರಾಧಾಕೃಷ್ಣ ಭಡ್ತಿ ಈ ಭಾನುವಾರ ತಮ್ಮ ಐದು ಪುಸ್ತಕಗಳನ್ನು ಹೊರತರುತ್ತಿದ್ದಾರೆ. ‘ನೀರು-ನೆರಳು’ ಎಂಬ ಹೆಸರಿನ ಅವರ ಅಂಕಣ ಬರಹಗಳೇ ಈಗ ಪುಸ್ತಕರೂಪದಲ್ಲಿ ಬರುತ್ತಿವೆ. ಅಂಕಣಕಾರರಾಗಿದ್ದ ಭಡ್ತಿ ಈಗ ಪುಸ್ತಕಕಾರರಾಗಿ ಭಡ್ತಿ ಹೊಂದಿದ್ದಾರೆ. ಜಗತ್ತನ್ನು ಹೊತ್ತಿ ಉರಿಸಬಲ್ಲ ಜನಪ್ರಿಯ ಸಂಗತಿಗಳನ್ನೆಲ್ಲ ಕೈಬಿಟ್ಟು ತಣ್ಣಗೆ ನೀರಿನ ಬಗ್ಗೆ ಬರೆಯುತ್ತಾ ಆರು ವರ್ಷ ಪೂರೈಸಿರುವ ಅವರ ಏಕಾಗ್ರತೆ ಮೆಚ್ಚುವಂಥದ್ದು. ಭಾನುವಾರ ಬೆಳಗ್ಗೆ ಗಾಯನ ಸಮಾಜದ ಎದುರಿರುವ ಕುವೆಂಪುಕಲಾಕ್ಷೇತ್ರದಲ್ಲಿ ಈ ಕಾರ್ಯಕ್ರಮ. ಬನ್ನಿ.

ಈ ಮುಖಪುಟಗಳಲ್ಲಿ ಮೇಘಮೇದಿನಿ ಪುಸ್ತಕದ ಕಲಾಕೃತಿ ಬಿಕೆಎಸ್‌ ವರ್ಮಾ ಅವರದು. ಇತರ ಪುಸ್ತಕಗಳಿಗೆ ಬಳಸಿರುವ ಫೋಟೊಗಳು ಸಂಗ್ರಹಚಿತ್ರಗಳು.

ಸರಳ ವಿಜ್ಞಾನ ಮಾಲಿಕೆಗೆ ಮಾಡಿದ ಮುಖಪುಟಗಳು

ನವಕರ್ನಾಟಕ ಸಂಸ್ಥೆಯು ವಿದ್ಯಾರ್ಥಿಗಳಿಗೆಂದು ಪ್ರಕಟಿಸಿರುವ ಈ ಸರಳ ವಿಜ್ಞಾನ ಮಾಲಿಕೆಯ ಪುಸ್ತಕಗಳಲ್ಲಿ ಮೊದಲ ಹದಿನಾಲ್ಕು ಈ ಭಾನುವಾರ ವರ್ಲ್ಡ್‌‌ಕಲ್ಚರ್‌ ಇನ್ಸ್‌ಟಿಟ್ಯೂಟ್‌ನಲ್ಲಿ ಬಿಡುಗಡೆಗೊಳ್ಳುತ್ತಿವೆ. ನಾಲ್ಕು ಮುಖಪುಟಗಳನ್ನು ಇಲ್ಲಿ ಕಾಣಬಹುದು.