Saturday, January 26, 2008

ಹೊಸ ಮುಖಪುಟ






ವಿಶ್ವೇಶ್ವರ ಭಟ್‌ ಬರೆದ ನಾಲ್ಕು ಪುಸ್ತಕಗಳು ಈ ಭಾನುವಾರ ಬಿಡುಗಡೆಯಾಗುತ್ತಿವೆ. ಅವುಗಳಲ್ಲಿ ಈ ಎರಡರ ಮುಖಪುಟ ವಿನ್ಯಾಸ ನನ್ನದು. "ಆಗಾಗ ಬಿದ್ದ ಮಳೆ " ಪುಸ್ತಕಕ್ಕೆ ಬಳಸಿರುವ ಫೋಟೊ ಮಳೆಗಾಲದ ಒಂದು ಸಂಜೆ ಕಾರಿನ ವಿಂಡೋ ಗಾಜಿನ ಮೇಲೆ ಬಿದ್ದ ಮಳೆ ಹನಿಗಳನ್ನು ಅದರೊಳಗಿನಿಂದ ಮೊಬೈಲ್‌ ಕ್ಯಾಮೆರಾದಲ್ಲಿ ತೆಗೆದದ್ದು. ಹಿನ್ನೆಲೆಗಿರುವ ನೀಲಿ ಹೊರಗಿದ್ದ ಸಿಟಿಬಸ್‌ನದು. ಕೆಳಗಿನ ಪುಸ್ತಕಕ್ಕೆ ಬಳಸಲಾಗಿರುವ ಚಿತ್ರ ದಿಲ್ಲಿಯ ಫುಟ್‌ಪಾತ್‌‌ನಲ್ಲಿ ಕಾಣಸಿಕ್ಕಿದ್ದು. ಗಡಿಯಾರಗಳು ವಾಟರ್‌ ಪ್ರೂಫ್‌ ಎಂದು ನಂಬಿಸಲು ರಸ್ತೆ ವ್ಯಾಪಾರಿಗಳು ಅವನ್ನು ನೀರಿನ ಟಬ್‌ನೊಳಗೆ ಹಾಕಿಯೇ ಮಾರುತ್ತಿದ್ದರು!
ನಿಮ್ಮ ಪ್ರತಿಕ್ರಿಯೆಗಾಗಿ ಕಾಯುವೆ.

10 comments:

Anonymous said...

the first mukhapuTaa is excellent.

MS

Anonymous said...

By first mukhapaTa i meant was 'aagaaga bidda maLe.

:-)

MS

Anonymous said...

First mukha puTada bagge eraDaneya mAtE illa.

eraDaneyadara colouring swalpa galeejaagide ;) page setting chennAgE ide.

Vasanth.

Srinidhi said...

ಆಗಾಗ ಬಿದ್ದ ಮಳೆ ಸಕತ್ತಾಗೇ ಬಿದ್ದಿದೆ ಸಾರ್! ದಟ್ಸ್ ಕನ್ನಡದಲ್ಲಿ ಮೊದಲ ಬಾರಿಗೆ ಈ ಮುಖಪುಟ ನೋಡಿದಾಗ್ಲೇ ಅಂದ್ಕೊಂಡೆ ನಿಮ್ಮದೇ ವಿನ್ಯಾಸ ಅಂತ. ಹಿನ್ನೆಲೆ ಬೀಎಂಟೀಸಿ ಬಸ್ಸಾ... ಸೂಪರ್ ಸೂಪರ್! :-)

ನೂರೆಂಟು ಮಾತು ಒಂಥರಾ ಡಿಫರೆಂಟಾಗಿದೆ, ಆದ್ರೆ ಕಪ್ಪು ಹಳದಿ ಯಾಕೋ ಸ್ವಲ್ಪ ಜಾಸ್ತಿನೇ bright ಆಯ್ತು ಅನ್ಸತ್ತೆ. ಪುಸ್ತಕ ಇನ್ನೂ ನೋಡಿಲ್ಲ, ನೋಡಿದ್ಮೇಲೆ ಹೇಳ್ತೀನಿ!

Anonymous said...

ಅಪಾರ
ಎರಡು ಮುಖಪುಟಗಳೂ ಚೆನ್ನಾಗಿವೆ. ವಾಚನ್ನು ನೀರಿನಲ್ಲಿ ನೆನೆಸಿಟ್ಟ ಮುಖಪುಟವೂ ಇಷ್ಟವಾಯಿತು. ಅದರ ವರ್ಣಸಂಯೋಜನೆಯಲ್ಲಿ ಒಂದು ಅನಿರೀಕ್ಷಿತತೆ ಇದೆ. ಒಂದು ಇರಾನಿ ಸಿನಿಮಾದಲ್ಲಿ ಹಸಿರು ರಸ್ತೆಯಲ್ಲಿ ಹಳದಿ ಕೊಡೆ ಹಿಡಿದ ಮಕ್ಕಳು ಸೈಕಲ್ಲಿನಲ್ಲಿ ಹೋಗುವ ದೃಶ್ಯವಿತ್ತು. ಆ ಇಡೀ ಸಿನಿಮಾದಲ್ಲಿ ಹಳದಿ ಬಣ್ಣವನ್ನು ಆತ ಉದ್ದೇಶಪೂರ್ವಕ ಬಳಸಿದ್ದ. ಅದು ನನೆಪಾಯಿತು.
-ಜೋಗಿ

dinesh said...

ಮೊದಲನೆ ಮುಖಪುಟ ಸೂಪರ್,ಎರಡನೆ ಮುಖಪುಟ ಕೂಡ. ಮೊದಲು ಅದನ್ನು(2ನೇ)ನೋಡಿದಾಗ ಟಬ್ ನಲ್ಲಿ ಇರುವುದು ವಾಚ್ ಅಂತ ತಿಳಿಲಿಲ್ಲಾ...ತಿಳಿದಮೇಲೆ ....ವಂಡರ್ ಅನಿಸ್ತು....

Tina said...

ಅಪಾರ,
Excellent coverpages. Loved the colourplay and the sense of space. ಮದ್ಯಸಾರದ ಚುಟುಕುಗಳನ್ನ ಬಹಳ ಎಂಜಾಯ್ ಮಾಡಿದೆ.
ಖುಶಿ ಕೊಟ್ಟ ಬ್ಲಾಗ್!
-ಟೀನಾ

ತೇಜಸ್ವಿನಿ ಹೆಗಡೆ said...

ಮುಖಪುಟ ವಿನ್ಯಾಸ ನಿಮ್ಮ ಹವ್ಯಾಸನ? ಇಲ್ಲಾ ವೃತ್ತಿಯಾ? ತುಂಬಾ ಇಷ್ಟವಾಯಿತು. ನನ್ನ ಗೆಳತಿಯೊಬ್ಬಳು ಪುಸ್ತಕಕ್ಕೆ ಮುಖ ಪುಟ ವಿನ್ಯಾಸಗರನ ಹುಡುಕುತ್ತಿರುವಳು.. ತಮ್ಮ ಹೆಸರು ಹೇಳಬಹುದೇ? ತುಂಬಾ ಚೆನ್ನಾಗಿದೆ ಮೊದಲನೆಯ ವಿನ್ಯಾಸ.

SoShe said...

Thumbane adbutha ansuthe Hats of to the creative mind Happy and feeling proud there are Hidden talents Keep Up the spirit:)

Anonymous said...

nimma hesarinaste chanda ive. nimma ittechina "mukha"putagalanna hage nodabekanisutte...

TG Srinidhi avara mukhaputa astu samadana taralilla..


Best of luck gurugale