Saturday, November 28, 2009

ಆ ದಶಕಕ್ಕೆ ಸ್ವಾಗತ




ರೈತ ಚಳವಳಿ, ಲಂಕೇಶ್‌ ಪತ್ರಿಕೆ, ಚಂದ್ರಗುತ್ತಿಯ ಜಾತ್ರೆಯ ಆ ಹಳೆಯ ದಿನಗಳಿಗೆ ಮರಳುವ ಬಯಕೆಯಿದ್ದರೆ ನೀವು ಕಡಿದಾಳು ಶಾಮಣ್ಣನವರ ಈ ಪುಸ್ತಕವನ್ನು ಓದಬೇಕು. ಹಳೆಯ ಕಾಗದಗಳು, ಪತ್ರಿಕೆಗೆ ಬರೆದ ಲೇಖನಗಳು, ವರದಿಗಳು, ಸಂದರ್ಶನಗಳು ಎಲ್ಲ ಇಲ್ಲಿವೆ. ಅಹರ್ನಿಶೆ ಪ್ರಕಾಶನ ಪ್ರಕಟಿಸಿರುವ ‘ಆ ದಶಕ’ ಪುಸ್ತಕ ನಾಳೆ ಸಂಜೆ ಐದೂವರೆಗೆ ಶಿವಮೊಗ್ಗದಲ್ಲಿ ಬಿಡುಗಡೆಯಾಗುತ್ತಿದೆ. ಪುಸ್ತಕಕ್ಕೆ ರಚಿಸಿದ ಮುಖಪುಟದ ಎರಡು ಆವೃತ್ತಿಗಳು ಮತ್ತು ಆಮಂತ್ರಣ ಪತ್ರಿಕೆ ಇಟ್ಟಿದ್ದೇನೆ.

Friday, November 13, 2009

ಅತಿ ಚಿಕ್ಕ ದುರಂತ ಪ್ರೇಮಕತೆ

ಇದ್ಲು ಒಬ್ಳು.

ಒಂದು ಹೊಸ ಮುಖಪುಟ


ಈ ಶನಿವಾರ ಬೆಳಗ್ಗೆ ವರ್ಲ್ಡ್‌‌ಕಲ್ಚರ್‌ನಲ್ಲಿ ಬಿಡುಗಡೆಯಾಗುತ್ತಿರುವ ಈ ಪುಸ್ತಕದ ಪ್ರಕಾಶಕರು ಅಂಕಿತಪುಸ್ತಕ.

Tuesday, November 10, 2009

ಪ್ರಕಾಶ ಹೆಗಡೆಗೆ ಪುಸ್ತಕೋತ್ಸವ!



ಈ ಭಾನುವಾರ ಕನ್ನಡ ಸಾಹಿತ್ಯಪರಿಷತ್ತಿನಲ್ಲೊಂದು ಪುಸ್ತಕೋತ್ಸವವಿದೆ. ಇಟ್ಟಿಗೆ ಸಿಮೆಂಟು ಸೆಂಟಿಮೆಂಟು ಖ್ಯಾತಿಯ ಪ್ರಕಾಶ್‌ ಹೆಗಡೆಯವರ ಪುಸ್ತಕ ‘ಹೆಸರೇ ಬೇಡ’ ಸೇರಿದಂತೆ ಮೂರು ಪುಸ್ತಕಗಳು ಅಂದು ಬಿಡುಗಡೆಯಾಗಲಿವೆ. ಫೋಟೊಗ್ರಾಫರ್‌ ಶಿವು ಬರೆದ ‘ವೆಂಡರ್‌ ಕಣ್ಣು’ , ದಿವಾಕರ್‌ ಹೆಗಡೆಯವರ ನಾಟಕಗಳ ‘ಉದ್ಧಾರ ಮತ್ತು ಸಂತೆ’ ಕೂಡ ಅಂದು ಓದುಗರ ಕೈ ಸೇರಲಿವೆ. ಅವುಗಳಲ್ಲಿ ಎರಡು ಪುಸ್ತಕಗಳಿಗೆ ನಾನು ಮಾಡಿದ ಮುಖಪುಟಗಳು ಇಲ್ಲಿವೆ. ಅನಿಸಿಕೆ ಹೇಳಿ.

Friday, November 6, 2009

ಜಯಂತ ಕಾಯ್ಕಿಣಿ ಬರೆದ ಒಂದು ಹಳೇ ಕವಿತೆ

ಮೀನೇ ದೋಣಿ
----------------------

ಮೀನೊಂದು ಮಿಂಚಿ ಓಡಾಡಿದೆ
ಮನದ ಕಡಲಾಳಕೆ
ಅರಸುತ ಈಜಿದೆ ತೀರವ
ಹೃದಯದ ತೀರವ

ಯಾವ ನೀರ ನೀಲದಲ್ಲಿ
ಕಣ್ಣ ಬೆಂಕಿ ಉರಿಯಿತು
ಯಾವ ಸ್ವರದ ಕಂಪಿನಲ್ಲಿ
ಮಡಿಲ ಸ್ವಪ್ನ ತೆರೆಯಿತು
ತೆರೆದು ಪೂರಾ ತನಗೆ ತಾನೆ
ಅಂತರಾಳ ಅರಳಿತು
ಅಂತರ ಕಳೆಯಿತು

ರಾತ್ರಿಯಲ್ಲಿ ಯಾವ ಕಿರಣ
ಒಡಲ ಗಾಯ ನೀವಿತು
ಯಾವ ಹುರುಪು ಮೀನ ಮೈಯ
ಹೊಳಪಿನಲ್ಲಿ ಮರೆಸಿತು
ಚುಕ್ಕಿಗಾಳ ನಿಂತ ನೀರ
ಆಳವನ್ನು ಕಲಕಿತು
ಏನನು ಹಿಡಿಯಿತು?

ಧಮನಿ ಧಮನಿ ಮೀನ ದಾರಿ
ಪರವಶ ಧಾರೆ
ಮೀನೇ ದೋಣಿ ಮೀನೇ ಕಡಲು
ಆಕಾಶವೆ ಮೇರೆ
ಬೆಳದಿಂಗಳು ಎಂಥ ಜಾಲ
ಇಂಥ ಕಡೆಗೆ ಬೀಸಿತು
ಜೀವವೇ ಹೊಳೆಯಿತು

Sunday, November 1, 2009

ಕೃಷಿ ಸಂಪದ ೩ನೇ ಸಂಚಿಕೆ ಹೊರಬಂದಿದೆ

krushi.sampada.netಗೆ ಹೋಗಿ ಇ ಪತ್ರಿಕೆಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.