ಮೀನೇ ದೋಣಿ
----------------------
ಮೀನೊಂದು ಮಿಂಚಿ ಓಡಾಡಿದೆ
ಮನದ ಕಡಲಾಳಕೆ
ಅರಸುತ ಈಜಿದೆ ತೀರವ
ಹೃದಯದ ತೀರವ
ಯಾವ ನೀರ ನೀಲದಲ್ಲಿ
ಕಣ್ಣ ಬೆಂಕಿ ಉರಿಯಿತು
ಯಾವ ಸ್ವರದ ಕಂಪಿನಲ್ಲಿ
ಮಡಿಲ ಸ್ವಪ್ನ ತೆರೆಯಿತು
ತೆರೆದು ಪೂರಾ ತನಗೆ ತಾನೆ
ಅಂತರಾಳ ಅರಳಿತು
ಅಂತರ ಕಳೆಯಿತು
ರಾತ್ರಿಯಲ್ಲಿ ಯಾವ ಕಿರಣ
ಒಡಲ ಗಾಯ ನೀವಿತು
ಯಾವ ಹುರುಪು ಮೀನ ಮೈಯ
ಹೊಳಪಿನಲ್ಲಿ ಮರೆಸಿತು
ಚುಕ್ಕಿಗಾಳ ನಿಂತ ನೀರ
ಆಳವನ್ನು ಕಲಕಿತು
ಏನನು ಹಿಡಿಯಿತು?
ಧಮನಿ ಧಮನಿ ಮೀನ ದಾರಿ
ಪರವಶ ಧಾರೆ
ಮೀನೇ ದೋಣಿ ಮೀನೇ ಕಡಲು
ಆಕಾಶವೆ ಮೇರೆ
ಬೆಳದಿಂಗಳು ಎಂಥ ಜಾಲ
ಇಂಥ ಕಡೆಗೆ ಬೀಸಿತು
ಜೀವವೇ ಹೊಳೆಯಿತು
4 comments:
ಚಂದದ ಕವಿತೆ ಓದಿಗೆ ಸಿಗುವಂತೆ ಮಾಡಿದ್ದಕ್ಕೆ ಧನ್ಯವಾದಗಳು...ಈ ಕವಿತೆ ಯಾವ ಸಂಕಲನದಲ್ಲಿದೆ ಎಂಬ ವಿವರ ನೀಡಿದರೆ ಚೆನ್ನಿತ್ತು
Nice poem.
when will YOU write though??
:-)
malathi S
ಈ ಕವಿತೆ ಜಯಂತರ ಕವಿತೆ ಪುಸ್ತಕಗಳಲ್ಲಿಲ್ಲ. ಜಯಂತ್ ಬರೆದಿರುವ ಈ ಕವಿತೆಯನ್ನು ಬಿ ಆರ್ ಛಾಯಾ ಹಾಡಿದ್ದಾರೆ. ಅದನ್ನು ಕೇಳಿ ಇಷ್ಟವಾಯಿತೆಂದು ಇಲ್ಲಿ ಹಾಕಿದೆ.
~ಅಪಾರ
ಹಾಡಿನ ಲಿಂಕ್ ಇದ್ದರೆ ತಿಳಿಸುತ್ತೀರಾ?
Post a Comment