
ಪಾಪಿನ್ಸ್ ಎಂದರೆ ನನ್ನ ಪಾಲಿಗಂತೂ ಬರೀ ಪೆಪ್ಪರ್‌ಮಿಂಟಲ್ಲ। ಬಣ್ಣದ ನಾಸ್ಟಾಲ್ಜಿಯಾಕ್ಕೆ ಎಳೆದೊಯ್ಯುವ ಗೋಲ ಲೋಕವದು। ಹೀಗೇ ಹೊಳೆದ ಜಾಹೀರಾತು ಆಲೋಚನೆಯನ್ನು ವಿನ್ಯಾಸಗೊಳಿಸಿ ನಿಮಗೆ ತೋರಿಸೋಣವೆನಿಸಿತು। ನೋಡಿ ಹೇಳಿ। (ಚಿತ್ರದ ಮೇಲೆ ಕ್ಲಿಕ್ ಮಾಡಿದರೆ ದೊಡ್ಡದಾಗುವುದು। ಅಕ್ಷರ ಓದಲು ಸಲೀಸು।)

‘ನೂರೆಂಟು ಮಾತು ಭಾಗ ೫’ ಮತ್ತು ‘ತಲೆಬರಹ ಪತ್ರಿಕೆಯ ಹಣೆಬರಹ’ - ವಿಶ್ವೇಶ್ವರ ಭಟ್ ಬರೆದ ಎರಡು ಪುಸ್ತಕಗಳು ನಾಳೆ(೨೮ ಜೂನ್) ಬಿಡುಗಡೆಯಾಗುತ್ತಿವೆ। ಬೆಂಗಳೂರಿನ ಬಸವನಗುಡಿಯ ವರ್ಲ್ಡ್ ಕಲ್ಚರ್ ಇನ್‌ಸ್ಟಿಟ್ಯೂಟ್ ನಲ್ಲಿ ಬೆಳಗ್ಗೆ ೧೦:೩೦ಕ್ಕೆ ಕಾರ್ಯಕ್ರಮ। ಎಚ್ಚೆಸ್ವಿ, ಜಯಂತ್ ಕಾಯ್ಕಿಣಿ ಮತ್ತು ಜಿ ಎನ್ ಮೋಹನ್ ವೇದಿಕೆಯಲ್ಲಿರುತ್ತಾರೆ। ಎರಡೂ ಪುಸ್ತಕಗಳ ಮುಖಪುಟಗಳು ಇಲ್ಲಿವೆ। ಮೊದಲ ಪುಸ್ತಕದ ಪೋಟೋ ನಾನು ಕಳೆದ ವರ್ಷ ಮಹಾಬಲಿಪುರಂಗೆ ಹೋದಾಗ ತೆಗೆದದ್ದು। ಎರಡನೇ ಪುಸ್ತಕದ ಫೋಟೋ ಖಂಡಿತಾ ನಾನು ತೆಗೆದದ್ದಲ್ಲ।(ಮಹಾಬಲಿಪುರಂ ಪೋಟೋ ತೆಗೆಯೋದರಲ್ಲಿ ಮಹಾ ಏನಿಲ್ಲ; ಎರಡನೇ ಪುಸ್ತಕದ ಫೋಟೋ ತೆಗೆಯಲು ‘ಎದೆಗಾರಿಕೆ’ ಬೇಕಲ್ಲ!)