Wednesday, December 26, 2007

ಮದ್ಯಸಾರ~ ಹತ್ತನೇ ರೌಂಡು

*
ಕೊನೆಯ ಬಸ್ಸು ನಮಗೆಂದೇ ಇರೋದು
ನೆಟ್ಟಗೆ ನಿಲ್ಲಿ ಎಂದು ಗದರದಿರಿ
ಮನೆಯ ಸ್ಟಾಪಿನಲ್ಲಿ ಇಳಿದು ಹೋಗುವೆವು
ಕುಡುಕರ ಸಹವಾಸ ಎಂದು ಹೆದರದಿರಿ


*
ಬಾರಿನ ದೀಪವೇಕೆ ಸದಾ ಮಂಕು
ಪಬ್ಬು ಯಾಕಿರುತ್ತೆ ಹಾಗೆ ಮಬ್ಬು
ಬಂದೋರೆಲ್ಲ ಚಿಯರ್ಸ್ ಎಂದು ಚೀರಿದರೂ
ಗೆಲುವಾಗದಂಥ ನೋವೇನು ಅವಕ್ಕೆ!

*
ಪ್ರೇಮದಲಿ ಸೋತಿಲ್ಲ, ದುಃಖದ ಮಾತಿಲ್ಲ
ನಾನು ಕುಡಿಯುವುದು ಹೀಗೇ ಸುಮ್ಮನೆ
ತೀರದ ದಾಹ ನನಗೆ, ಕುಡಿತವೊಂದು ಚಟ
ನಿಮಗೇಕೆ ಕಾರಣ ಬೇಕೇಬೇಕೆಂಬ ಹಟ?

*
ಕುಂಟು ನೆಪ ಹೇಳಬೇಡ
ಮನೆಗೆ ಹೋಗಲಿನ್ನೂ ಹೊತ್ತಿದೆ
ಬರಲ್ಲ ಅಂದ್ರೆ ಬರಲ್ಲ ಅನ್ನು
ಬಾರಿನ ದಾರಿ ನನಗೂ ಗೊತ್ತಿದೆ

*
ನನ್ನ ನಶೆಗೆ ನಾನು ಬರೆವೆ
ಬೇಡ ಹಾರ ತುರಾಯಿ
ನಿಮ್ಮ ಖುಷಿಗೆ ಕುಡಿಸೆ ಕುಡಿವೆ
ಬಾಟಲಿ ಪೂರ ಸಾರಾಯಿ

3 comments:

ಜಿ ಎನ್ ಮೋಹನ್ said...

ಬೇಡ ಹಾರ ತುರಾಯಿ ಎಂದರೂ ಬಿಡೆವು
ಸಾರಾಯಿಯಾದರೂ ತರುವೆವು...
-ಜಿ ಎನ್ ಮೋಹನ್

Anonymous said...

ಮದ್ಯಸಾರ ಒಂದರಿಂದ ಹತ್ತು ಹೇಗಿತ್ತು?
ಮದ್ಯದ ಮದವು ಏರಿತ್ತು.
Hope u treat us with a few more rounds of gundu.......
Wishing u a gr8 2008.

malathi & Srikanth

Anonymous said...

why rounds why not squares?