Thursday, April 21, 2011

ಹೆಸರಿನಲ್ಲೇನಿದೆ?

ಇಟ್ಟಿಗೆ ಸಿಮೆಂಟು ಎಂಬ ವರ್ಣಮಯ ಬ್ಲಾಗಿನ ಪ್ರಕಾಶ್‌ ಹೆಗಡೆಯವರ ಎರಡನೇ ಪುಸ್ತಕ ‘ಇದೇ ಇದರ ಹೆಸರು’ ಬಿಡುಗಡೆಗೆ ಸಿದ್ಧವಾಗಿದೆ. ೨೪ನೇ ತಾರೀಖು ಭಾನುವಾರ ಬೆಳಗ್ಗೆ ೧೦.೩೦ಕ್ಕೆ ವರ್ಲ್ಡ್‌ ಕಲ್ಚರ್‌ ಸಭಾಂಗಣದಲ್ಲಿ ಕಾರ‍್ಯಕ್ರಮ. ಉಪಾಹಾರವಿದೆ. ಉಪಾಸನಾ ತಂಡದಿಂದ ಸಂಗೀತವೂ ಇದೆ. ತಪ್ಪಿಸಿಕೊಳ್ಳಬೇಡಿ...! ಮುಖಪುಟದ ಫೋಟೊ: ದಿಗ್ವಾಸ್‌ ಹೆಗಡೆ

Thursday, April 14, 2011

ಬ್ಲಾಗಿಲನು ತೆರೆದು-ವಿವೇಕ ರೈ ಹೊಸ ಪುಸ್ತಕದ ಮುಖಪುಟ



ಬಿಡುಗಡೆ ಸಮಾರಂಭ: ಸೋಮವಾರ ಸಂಜೆ ೬, ಕನ್ನಡಭವನದ ನಯನ ಸಭಾಂಗಣದಲ್ಲಿ.

Wednesday, April 13, 2011

ಮೋಹನ್,‌ ಜೋಗಿ ಬುಕ್‌ ಫೆಸ್ಟಿವಲ್!


ಅಂಕಿತ, ಈ ಭಾನುವಾರ ಮೂರು ಪುಸ್ತಕ ಬಿಡುಗಡೆ ಮಾಡುತ್ತಿದೆ. ಎರಡು ಜಿ ಎನ್‌ ಮೋಹನ್‌ ಬರೆದದ್ದು.(ಇನ್ನೊಂದರ ಮುಖಪುಟ ಕೆಳಗಿದೆ ನೋಡಿ) ಮೂರನೆಯದು ಜೋಗಿ ಅವರ ಕಾದಂಬರಿ ಊರ್ಮಿಳಾ. ಮುಖಪುಟ ಹೇಗಿವೆ ಹೇಳಿ. ಕಾರ‍್ಯಕ್ರಮಕ್ಕೆ ಬರದೆ ಇರಬೇಡಿ. ಅದೇ ಜಾಗ, ಅದೇ ರೋಡು.....

ಮೋಹನ್‌ರ ಕಪ್ಪು ಬಿಳುಪು ನೆನಪುಗಳ ಬಾಗಿಲು

ರೇಖಾಚಿತ್ರಗಳು: ಪ ಸ ಕುಮಾರ

Friday, April 1, 2011

ಈ ಭಾನುವಾರ ಸಂಜೆ ವೀಣಾ ಶಾಂತೇಶ್ವರರನ್ನು ಭೇಟಿಯಾಗಿ




ವರ್ಲ್ಡ್‌‌ಕಪ್‌ ಮುಗಿದ ಮಾರನೇ ದಿನ . ನಿಮ್ಮ ಖಾಲಿ ಭಾನುವಾರವನ್ನು ತುಂಬಿಸಿಕೊಳ್ಳಲು ಒಳ್ಳೆಯ ಅವಕಾಶ. ಸಂಜೆ ೫.೩೦ಕ್ಕೆ ಸಾಹಿತ್ಯಪರಿಷತ್‌ ಕಡೆ ಬಂದರೆ ಅಪರೂಪಕ್ಕೆ ಬೆಂಗಳೂರಿನ ಕಡೆ ತಲೆಹಾಕುವ ಹಿರಿಯ ಕತೆಗಾರ್ತಿ ವೀಣಾಶಾಂತೇಶ್ವರರನ್ನು ನೋಡಬಹುದು. ನೋಡಿ... ಯೋಚನೆ ಮಾಡಿ!

Tuesday, March 29, 2011

‘ಗರಿಗರಿ’ ಕವಿತೆಗಳು!



ಪ್ರೀತಿಯ ಕವಿ ಎಚ್‌ಎಸ್‌ವಿಯವರ ಹೊಸ ಕವಿತೆಗಳು ಅಚ್ಚಿಗೆ ರೆಡಿಯಾಗಿವೆ. ಮುಖಪುಟ ಇಲ್ಲಿದೆ. ಕವಿಯ ಭಾವಚಿತ್ರ: ಎ ಎನ್‌ ಮುಕುಂದ್. ಚಿತ್ರದ ಮೇಲೆ ಕ್ಲಿಕ್‌ ಮಾಡಿ ದೊಡ್ಡದು ಮಾಡಿಕೊಂಡು ನೋಡಿ ಚೆನ್ನಾಗಿದೆ ಅಂತ ಹೇಳಿ ಆಯ್ತಾ?!!!

Sunday, March 27, 2011

ಶಾಮಣ್ಣ ಮತ್ತು ಶಾಮಣ್ಣ!



ಕುಂವೀ ಅವರ ಶಾಮಣ್ಣ(ಮತ್ತೆ ಕುಳಿತು ಹೇಳಿದ ಕತೆ) ಹಾಗೂ ಕಡಿದಾಳು ಶಾಮಣ್ಣನವರ ಆತ್ಮಕತೆ(ನಿರೂಪಣೆ: ಅಕ್ಷತಾ). ಇಬ್ಬರು ಶಾಮಣ್ಣರ ಪುಸ್ತಕಗಳಿಗೂ ಒಟ್ಟೊಟ್ಟಿಗೇ ಮುಖಪುಟ ಮಾಡಬೇಕಾಯಿತು. ನಿಮಗಾಗಿ ಇಲ್ಲಿವೆ. ಕುಂವೀ ಶಾಮಣ್ಣದ ಫೋಟೊ ಗೋಕರ್ಣದಲ್ಲಿ ತೆಗೆದದ್ದು.

Thursday, March 17, 2011

ಐದು ಕವನಗಳು


ರಾಮಚಂದ್ರದೇವ ಅವರ ಈ ಪುಸ್ತಕದ ಮುಖಪುಟ ಹೇಗಿದೆ ಹೇಳಿ. ಇದರೊಂದಿಗೆ ಇನ್ನೂ ನಾಲ್ಕು ಪುಸ್ತಕಗಳು ಈ ಭಾನುವಾರ(೨೦ಮಾರ್ಚಿ) ಬಿಡುಗಡೆಯಾಗುತ್ತಿವೆ. ಬಸವನಗುಡಿಯ ವರ್ಲ್ಡ್‌ ಕಲ್ಚರ್‌ ಸಂಸ್ಥೆ ಸಭಾಂಗಣದಲ್ಲಿ. ಬನ್ನಿ.