


ವರ್ಲ್ಡ್‌ಕಪ್ ಮುಗಿದ ಮಾರನೇ ದಿನ . ನಿಮ್ಮ ಖಾಲಿ ಭಾನುವಾರವನ್ನು ತುಂಬಿಸಿಕೊಳ್ಳಲು ಒಳ್ಳೆಯ ಅವಕಾಶ. ಸಂಜೆ ೫.೩೦ಕ್ಕೆ ಸಾಹಿತ್ಯಪರಿಷತ್ ಕಡೆ ಬಂದರೆ ಅಪರೂಪಕ್ಕೆ ಬೆಂಗಳೂರಿನ ಕಡೆ ತಲೆಹಾಕುವ ಹಿರಿಯ ಕತೆಗಾರ್ತಿ ವೀಣಾಶಾಂತೇಶ್ವರರನ್ನು ನೋಡಬಹುದು. ನೋಡಿ... ಯೋಚನೆ ಮಾಡಿ!
ಒಲವಿನ ಪೂಜೆಗೆ ಒಲವೆ ಮಂದಾರ
ಒಲವೆ ಬದುಕಿನ ಬಂಗಾರ
ಒಲವಿನ ನೆನಪೆ ಹೃದಯಕೆ ಮಧುರ
ಒಲವೆ ದೈವದ ಸಾಕ್ಷಾತ್ಕಾರ


ಜೋಗಿಯವರ ಹೊಸ ಕಾದಂಬರಿ ಬರುತ್ತಿದೆ. ಹೆಸರು: ಮಾಯಾಕಿನ್ನರಿ. ಬಿಡುಗಡೆ ಈ ಭಾನುವಾರ. ಮುಖಪುಟ ಇವತ್ತು ರೆಡಿಯಾಯಿತು. ಮುಖಪುಟ ರೆಡಿಯಾದ ನೆಮ್ಮದಿಯಲ್ಲಿ ಈಗ ಜೋಗಿ ಕಾದಂಬರಿ ಬರೆಯಲು ಕೂತಿದ್ದಾರೆ! ಬಿಸಿಬಿಸಿ ಕಾದಂಬರಿಯ ಜತೆಗೆ ಅವರ ಇನ್ನೆರಡು ಪುಸ್ತಕಗಳೂ ಅಂದು ಪ್ರಕಟಗೊಳ್ಳುತ್ತಿವೆ. ಪ್ರಕಾಶಕರು ಅಂಕಿತ. ಅಂದಮೇಲೆ ವಾಡಿಯಾ... ಬೆಳಗ್ಗೆ ೧೦.೩೦...ಇತ್ಯಾದಿ ವಿವರ ನಿಮಗೆ ಗೊತ್ತೇ ಇದೆ ಬಿಡಿ!