ಯು ಆರ್ ಅನಂತಮೂರ್ತಿ ಅನುವಾದಿಸಿದ ಬ್ರೆಕ್ಟ್ ಕವಿತೆಗಳ ಪುಸ್ತಕ ಇಂದು ಸಂಜೆ ಶಿವಮೊಗ್ಗದಲ್ಲಿ ಬಿಡುಗಡೆಗೊಳ್ಳುತ್ತಿದೆ।ಈ ಪುಸ್ತಕವು ಅಹರ್ನಿಶಿ ಪ್ರಕಾಶನದಿಂದ ಹೊರಬರುತ್ತಿದೆ.

‘ನೂರೆಂಟು ಮಾತು ಭಾಗ ೫’ ಮತ್ತು ‘ತಲೆಬರಹ ಪತ್ರಿಕೆಯ ಹಣೆಬರಹ’ - ವಿಶ್ವೇಶ್ವರ ಭಟ್ ಬರೆದ ಎರಡು ಪುಸ್ತಕಗಳು ನಾಳೆ(೨೮ ಜೂನ್) ಬಿಡುಗಡೆಯಾಗುತ್ತಿವೆ। ಬೆಂಗಳೂರಿನ ಬಸವನಗುಡಿಯ ವರ್ಲ್ಡ್ ಕಲ್ಚರ್ ಇನ್ಸ್ಟಿಟ್ಯೂಟ್ ನಲ್ಲಿ ಬೆಳಗ್ಗೆ ೧೦:೩೦ಕ್ಕೆ ಕಾರ್ಯಕ್ರಮ। ಎಚ್ಚೆಸ್ವಿ, ಜಯಂತ್ ಕಾಯ್ಕಿಣಿ ಮತ್ತು ಜಿ ಎನ್ ಮೋಹನ್ ವೇದಿಕೆಯಲ್ಲಿರುತ್ತಾರೆ। ಎರಡೂ ಪುಸ್ತಕಗಳ ಮುಖಪುಟಗಳು ಇಲ್ಲಿವೆ। ಮೊದಲ ಪುಸ್ತಕದ ಪೋಟೋ ನಾನು ಕಳೆದ ವರ್ಷ ಮಹಾಬಲಿಪುರಂಗೆ ಹೋದಾಗ ತೆಗೆದದ್ದು। ಎರಡನೇ ಪುಸ್ತಕದ ಫೋಟೋ ಖಂಡಿತಾ ನಾನು ತೆಗೆದದ್ದಲ್ಲ।(ಮಹಾಬಲಿಪುರಂ ಪೋಟೋ ತೆಗೆಯೋದರಲ್ಲಿ ಮಹಾ ಏನಿಲ್ಲ; ಎರಡನೇ ಪುಸ್ತಕದ ಫೋಟೋ ತೆಗೆಯಲು ‘ಎದೆಗಾರಿಕೆ’ ಬೇಕಲ್ಲ!)
ಮುಂಗೈವರೆಗೆ ಬಿಳಿಯ ಉಡುಪು ತೊಟ್ಟ ಅನಾರ್ಕಲಿ ತುಂಬಿದ ದರ್ಬಾರಿನಲ್ಲಿ ಸಿಂಗಾರಗೊಂಡು ನಿಂತಿದ್ದಾಳೆ. ಚರ್ಕವರ್ತಿ ಅಕ್ಬರನ ಮಗನನ್ನು ಪ್ರೇಮಿಸಿದ ನರ್ತಕಿ ಅವಳು. ಆ ತಪ್ಪಿಗಾಗಿ ಸಂಕೋಲೆಗಳಲ್ಲಿ ಬಂದಿಯಾಗಿ ‘ಮೊಹಬ್ಬತ್ ಕೀ ಝೂಟಿ ಕಹಾನಿ ಪೆ ರೋಯೆ’ ಎಂದು ಸ್ಪಲ್ಪ ಹೊತ್ತಿನ ಹಿಂದೆ ಕಣ್ಣೀರು ಹಾಕುತ್ತಿದ್ದಾಕೆ ಅವಳೇನೆ? ಈ ನೃತ್ಯದ ನಂತರ ಅವಳು ಮತ್ತೆಲ್ಲೂ ಯಾರಿಗೂ ಕಾಣಿಸಿಕೊಳ್ಳದಂತೆ ಮರೆಯಾಗಬೇಕಿದೆ. ಹಾಗೆಂದು ಒತ್ತಡ ಹೇರಿ ಈಗ ಸಿಂಹಾಸನದ ಮೇಲೆ ನರ್ತನ ಆಸ್ವಾದಿಸುತ್ತಾ ಕೂತಿರುವ ಅಕ್ಬರನ ತುಟಿಯಲ್ಲಿ ಕಿರುನಗೆ. ಅವನಿಗೆ ಗೊತ್ತಿಲ್ಲ, ಆ ಒಂದು ಗಳಿಗೆಯಲ್ಲಿ ಅನಾರ್ಕಲಿ ತನ್ನೆಲ್ಲ ಭಯಗಳನ್ನು ದೂರಗೊಳಿಸಲು ನಿರ್ಧರಿಸಿದ್ದಾಳೆಂದು!
ಇದು ಕವಿ ಜಯಂತ್ ಕಾಯ್ಕಿಣಿ ಬರೆದ ಮೊದಲ ಗೀತೆ ಎನ್ನಬಹುದು।
`ಅನುರಾಗ' ಎಂಬ ಭಾವಗೀತೆಗಳ ಕ್ಯಾಸೆಟ್ ಒಂದಿದೆ। ಸಿ ಅಶ್ವಥ್ ಸಂಗೀತ ನೀಡಿದ್ದ ಆ ಕ್ಯಾಸೆಟ್ನಲ್ಲಿ ಹಲವು ತರುಣ ಕವಿಗಳು ಬರೆದ ಗೀತೆಗಳಿದ್ದವು। ಅದರಲ್ಲಿದ್ದ ಎಲ್ಲ ಗೀತೆಗಳನ್ನು ಹಾಡಿದ್ದವರು ನಮ್ಮ ಪ್ರೀತಿಯ ರಾಜ್ಕುಮಾರ್! `ಅನಿಸುತಿದೆ'ಗಿಂತ ಬಹಳ ಹಿಂದೆ ಜಯಂತ್ ಬರೆದ ಈ ಚೆನ್ನಾದ ಕವಿತೆಯನ್ನು ಓದಿ ಆನಂದಿಸಿ, ಇದರಲ್ಲಿ ನಿಮಗೆ ಬಹು ಇಷ್ಟವಾದ ಸಾಲು ಯಾವುದು ಅಂತ ಹೇಳಿ। ಹಾಡನ್ನು ಕೇಳಬೇಕೆಂದಿದ್ದರೆ ಕನ್ನಡ ಆಡಿಯೋ ಡಾಟ್ ಕಾಮ್ಗೆ ಹೋಗಿ .ಕಣ್ಣಿಗೆ ಬಂದವಳು
ಕನಸಿಗೆ ಬಾರದಿರುವೆಯಾ
ಮಾತಿಗೆ ಬಂದವಳು
ಮನಸಿಗೆ ಬಾರದಿರುವೆಯಾ
*
ಗಾಯವೆಲ್ಲ ಮಾಯುವಂಥ
ರಾತ್ರಿಯೊಂದು ಕನಸೇ
ದಳದಳಗಳ ನೋವಿನಲ್ಲಿ
ಅರಳಿನಿಂತ ಮನಸೇ
ತಂಗಾಳಿಯ ಕರೆಯೇ
ಹೊಸಲೋಕವ ತೆರೆಯೇ
ಕೊನೆಗೂ ಬಂದವಳು
ಬೆಳಗು ತಾರದಿರುವೆಯಾ
*
ಬಾಯಾರಿದ ಬಿಸಿಲಿನಲ್ಲಿ
ಹೊಸ ಹಗಲ ತೇರು
ಎಳೆಯದೇ ದಾರಿಯಲ್ಲಿ
ಬಿಟ್ಟು ಹೋದವರಾರು?
ಹುಚ್ಚು ನೂರು ಸಂತೆ
ನೆಚ್ಚಿ ಕಾದು ನಿಂತೆ
ಸಖ ಎಂದವಳು
ಮುಖ ತೋರದಿರುವೆಯಾ?
*
ಕಣ್ಣಿಗೆ ಬಂದವಳು
ಕನಸಿಗೆ ಬಾರದಿರುವೆಯಾ
ಮಾತಿಗೆ ಬಂದವಳು
ಮನಸಿಗೆ ಬಾರದಿರುವೆಯಾ?