8
ಸುಖದ ಶಿಖರ ಏರುತಿರುವಾಗಲೂ
ನನಗೆ ಮುಂಬರುವ ದುಃಖದ ಚಿಂತೆ
ಹೆಚ್ಚುತಿರಲು ಕ್ಷಣಕ್ಷಣ ಪ್ರಪಾತದ ಆಳ
ಬೆಚ್ಚುತಿಹೆ ನಾನು ಕಡುಪಾಪಿಯಂತೆ
9
ನಿರ್ಲಿಪ್ತಿಯಿಂದ ಮನಸನೊಡ್ಡುವೆ
ಕಡೆಗೊಮ್ಮೆ ದುಃಖ ಶರಣಾಗುವುದು
ಅತ್ತೂ ಅತ್ತೂ ಅತ್ತೂ ಅತ್ತೂ
ನಿದ್ರೆ ಹೋಗುವ ತೊಟ್ಟಿಲ ಮಗುವಿನಂತೆ
10
ಮೊನ್ನೆ ಬಸವನಗುಡಿಯಲ್ಲಿ ದೇವರು ಸಿಕ್ಕ
ಕಣ್ಣು ತಪ್ಪಿಸ ನೋಡಿ ಪೆಕರು ನಗೆ ನಕ್ಕ
ಸಿಕ್ತೀನಿ ಅರ್ಜೆಂಟಲಿರುವೆ ಎಂದು ಹೊರಟವನು
ಕಲ್ಲಾಗುವ ಭಯಕೆ ತಿರುಗಿ ನೋಡಲೇ ಇಲ್ಲ
3 comments:
ಶಪಿತನ ಹಾಡು ಪೂರ್ತಿ ಸಖತ್ತಾಗಿದೆ, ಸರಳವಾಗಿಯೇ ಹೇಳುತ್ತ ಎಲ್ಲೋ ಕರೆದುಕೊಂಡುಹೋಗಿಬಿಡತ್ವೆ! ನಿಮ್ಮ ದೇವ್ರು ಸಖತ್ ಕ್ಯೂಟಾಗಿ ಚಿತ್ರಿತವಾಗಿದ್ದಾನೆ!:))
ಅಪಾರ,
ಅವಧಿಯಿಂದ ಇಲ್ಲಿ ಓದನ್ನ ಮುಂದುವರೆಸುತ್ತಿದೇನೆ.
ಹ್ಯಾಟ್ಸಾಫ್, ನಿಮ್ಮ ಕವಿತಾ ಪ್ರವಾಹಕ್ಕೆ!!
ಮುಂದಿನ ಸಂಕಲನ ಇನ್ನೊಂದೆರಡು ತಿಂಗಳಲ್ಲಿ ಗ್ಯಾರಂಟಿ ಹಾಗಾದರೆ!!
-ಟೀನಾ.
ಪದಗಳು ಬಹಳ ಸರಳ, ಅರ್ಥ ಮಾತ್ರ ತುಂಬಾ ಆಳ.
ನಾಲ್ಕು ಸಾಲುಗಳಲ್ಲಿ ’ಬದುಕ’ನ್ನ ತೆರೆದಿಡುತ್ತೀರಾ.
ಓದಿ ಮೆಚ್ಚುಗೆ ಪಡದೇ ಸುಮ್ಮನಿರಲು ಸಾಧ್ಯವಾಗುವುದಿಲ್ಲ.
ಧನ್ಯವಾದಗಳೊಂದಿಗೆ,
ಮೋಹನ ಬಿಸಲೇಹಳ್ಳಿ
Post a Comment