Wednesday, May 14, 2008

ಶಪಿತನ ಹಾಡು 6

೧೫
ಅತ್ತೂ ಅತ್ತೂ ನಾ ಕಣ್ಣು ಕೆಂಪು ಮಾಡಿಕೊಳ್ಳಲಿಲ್ಲ
ಕುಡಿದೂ ಕುಡಿದು ನಾ ಕಣ್ಣು ಕೆಂಪು ಮಾಡಿಕೊಳ್ಳಲಿಲ್ಲ
ನೋವ ಅಡಗಿಸಿ ನಗುವ ನನ್ನ ಕಣ್ಣ ತಂಪಿಗೆ
ಉರಿದ ಜಗ ಕಣ್ಣು ಕೆಂಪು ಮಾಡಿಕೊಂಡಿತು


೧೬
ಬಿಗಿಯಾಗಿ ತಬ್ಬಿಕೊಂಡು ಅಳುವುದೆ
ಎಲ್ಲ ಸರಿಹೋಗತ್ತೆ ಅಂತ ಸುಳ್ಳಾಡುವುದೆ
ಪರಸ್ಪರರ ನೋಡಿಕೊಂಡು ನಗುವುದೆ
ಮಾಡುವುದೇನು ಶಪಿತರಿಬ್ಬರು ಕೂಡಿದಾಗ

1 comment:

Anonymous said...

ಅದ್ಭುತ! ಅಪಾರರೇ.
ಓದಿದ ನಂತರ ಎದೆಯಲ್ಲಿ ನಾನೂರು ತರಂಗಗಳನ್ನ ಮೂಡಿಸುವ ಶಕ್ತಿ ನಿಮ್ಮ ನಾಲ್ಕು ಸಾಲುಗಳಿರುತ್ತದೆ.

ಹಾರೈಕೆಗಳೊಂದಿಗೆ,
ಮೋಹನ ಬಿಸಲೇಹಳ್ಳಿ