Friday, May 2, 2008

ಶಪಿತನ ಹಾಡು

5
ಇದೇ ಈ ಬೀದಿಯಿಂದ ಒಂದು ದಿನ ಎದ್ದು
ಬಿದ್ದು ಕುದ್ದು, ರಾತ್ರಿಗೂ ಅದನೆ ಹೊದ್ದು
ಅರಳಿದರೂ ಬೆನ್ನ ತುಂಬ ಬೀದಿಹೋಕರ ಗುದ್ದು
ಈ ಹಾಳು ಬೀದಿ ಮೇಲೇಕೊ ನಂಗೆ ಮುದ್ದು

6
ನೀನೊಂದು ನೆಪಮಾತ್ರ
ನನ್ನ ಹಣೆಯಲೆ ಇದೆ ಶಾಪ
ನೀನಲ್ಲದಿದ್ದರೆ ಇನ್ನೊಬ್ಬರು ಅಳಿಸುತಿದ್ದರು
ನಿನ್ನ ಮೇಲೇಕೆ ನನಗೆ ಕೋಪ

7
ಸೋಲೇ ನನ್ನ ಹಣೆಬರಹವೇನಲ್ಲ
ಒಮ್ಮೊಮ್ಮೆ ನಾನೂ ಗೆಲ್ಲುವುದುಂಟು
ಇವತ್ತು ಮತ್ತೆ ಪಿಕ್ ಪಾಕೆಟ್‌ ಆಯ್ತು ಬಸ್ಸಲ್ಲಿ
ಒಂದು ಬಿಡಿಗಾಸೂ ಇರಲಿಲ್ಲ ಪರ್ಸಲ್ಲಿ

1 comment:

Anonymous said...

ಅಪಾರ,
No comments...
ಬಹಳ ಸಹಜವಾಗಿ ಸರಳವಾಗಿ ಚೆನ್ನಾಗಿ ಬರೀತೀರ ಅಂತೇನೂ ಮತ್ತೆ ಹೇಳಬೇಕಿಲ್ಲ ಅಲ್ಲವೇ?
-ಚೇತನಾ