11
ಪಯಣಕೆ ನನ್ನ ಲಗೇಜು ಬಲು ಭಾರವುಂಟು
ಬಿಚ್ಚುವುದು ಸುಲಭವಲ್ಲ ಬರೀ ತಪ್ಪುಗಂಟು
ಇದ್ದರೆ ಬರೀ ಕಹಿನೆನಪುಗಳೆ, ಬೇರೆ ಏನಿಲ್ಲ
ಕದ್ದರೆ ಜವಾಬ್ದಾರರು ನೀವೇ, ಹೊರ್ತು ನಾನಲ್ಲ
12
ಕತ್ತಲಿಗೆ ಕಣ್ಣು ಒಗ್ಗಿ ಹೋಗುವಂತೆ
ದುಃಖಕ್ಕೆ ನಾನು ಹೊಂದಿಕೊಳ್ಳುತ್ತಿದ್ದೆ
ಸಹಿಸಲಾಗದ ಅವಳು ಈ ದಿನ ಮತ್ತೆ
ಪ್ರೇಮಲವಾಗಿ ನನ್ನನು ದಿಟ್ಟಿಸಿದಳು
1 comment:
ಕಹಿ ನೆನಪಿನ ಗಂಟು ತಾನೆ?? ಯಾರಾದರು ಕದಿಯಲಿ ಬಿಡಿ.
ಸವಿ ನೆನಪಿನ ಬುತ್ತಿ ಹೃದಯದಲ್ಲಿ ಜೋಪಾನವಾಗಿಡಿ.
:-) :-)
Post a Comment