Thursday, May 8, 2008

ಶಪಿತನ ಹಾಡು 5

13
ಶಪಿತನಿರಬಹುದು ಕುಪಿತ ನಾನಲ್ಲ
ಬಂದು ನೋಡು ನನ್ನ ಕಮಂಡಲದ ಪಕ್ಕ
ಆ ದೇವರಿಗೂ ಕ್ಷಮೆಯಿದೆ ಇದರೊಳು
ಇನ್ನು ನಿನ್ನದ್ಯಾವ ಲೆಕ್ಕ?


14
ನನ್ನ ಹರಿದ ಬದುಕಿನ ಚೂರುಗಳಿಂದ
ನಿನ್ನ ಸುಖವ ಹೇಗೆ ಕಟ್ಟಲಿ
ಈ ಕಂಬನಿಸಿಕ್ತ ಕೈಯಿಗಳಿಂದ
ನಿನ್ನ ಮುಖವ ಹೇಗೆ ಮುಟ್ಟಲಿ

4 comments:

Unknown said...

ಅಬ್ಬ!!
ವಾರಕ್ಕೆ ಹದಿನಾಲ್ಕು ಶಪಿತ ಹನಿಗಳು. ಬರೆಯುವ ಓಘ ನೋಡಿದ್ರೆ ನಿಮ್ಗೂ ಯಾರದ್ದೋ ಶಾಪ ತಟ್ಟಿದೆ ಅನ್ನೋ ಡೌಟು!
ನೀವು ಶಪಿತರಿರಬಹುದು, ಆದ್ರೆ ಓದುವ ನಮಗೆ ಒಂದೊಂದು ಹನಿಯೂ 'ವರಬಿಂದು'.

Anonymous said...

ಅಪಾರರೇ,
ಕಾಮೆಂಟ್ರೀ ಕೇಳಿ ಬಹಳ ದಿನವಾಯ್ತು. ಯಾಕೆ? ನಿಲ್ಲಿಸಿಬಿಟ್ರಾ?
ಮಿಸ್ ಮಾಡ್ಕೊಳ್ತಿದೀನಿ ನಾನು.

ಚೇತನಾ

Vinayak Kuruveri said...

ಚೆನ್ನಾಗಿದೆ ಶಪಿತನ ಸೀರೀಸ್.. ಮುಂದುವರೀಲಿ..:-)

-ವಿನಾಯಕ ಕುರುವೇರಿ

Anonymous said...

chetana
due to election pressure, that column has been stopped in vk for the time being :)
~apara