Sunday, January 17, 2010

ವಿಜೇತನ ಹೆಸರು ವಿನಯ ಕುಮಾರ ಸಾಯ

ಮಂಗಳೂರಿನ ಯುವಕ ವಿನಯ ಕುಮಾರ ಸಾಯ ರಚಿಸಿದ ಮುಖಪುಟ ಈ ಸಲದ ಛಂದ ವಿನ್ಯಾಸ ಬಹುಮಾನ ಗಳಿಸಿದೆ. ಅಂತಿಮ ಸುತ್ತಿನಲ್ಲಿದ್ದ ಮೂವತ್ತು ಮುಖಪುಟಗಳ ಪಟ್ಟಿಯನ್ನು ಮೂರಕ್ಕಿಳಿಸಿದಾಗ ಬಹುಮಾನ ಪಡೆದ ಈ ಮುಖಪುಟದೊಂದಿಗೆ ಕಣದಲ್ಲಿ ಇನ್ನೆರಡು ಮುಖಪುಟಗಳು ಉಳಿದಿದ್ದವು. ಅವು ಕಾಶಿ ಸುಬ್ರಮಣ್ಯ(25) ಮತ್ತು ರಾಮಕೃಷ್ಣ ಸಿದ್ರಪಾಲ(27) ಅವರದು. ಬಹುಮಾನಕ್ಕೆ ಮುಖಪುಟವನ್ನು ಆರಿಸಿಕೊಟ್ಟ ಜಯಂತಕಾಯ್ಕಿಣಿ ಅವರಿಗೆ ಕೃತಜ್ಞತೆಗಳು.
ಇಪ್ಪತ್ತೈದು ವರ್ಷದ ವಿನಯಕುಮಾರ ದಾವಣಗೆರೆಯ ಲಲಿತ ಕಲಾ
ಮಹಾವಿದ್ಯಾಲಯದಲ್ಲಿ ಓದಿ ವಿಷುಯಲ್‌ ಆರ್ಟ್ಸ್‌ ಪದವಿ ಪಡೆದಿದ್ದಾರೆ. ಈಗ ಮಂಗಳೂರಿನ ‘ಆರೆಂಜ್‌ ಆಂಗಲ್‌ ಸಂಸ್ಥೆಯಲ್ಲಿ ಕ್ರಿಯೇಟಿವ್‌ ಡೈರೆಕ್ಟರ್‌ ಆಗಿ ಕೆಲಸಮಾಡುತ್ತಿದ್ದಾರೆ. ಹಲವು ಪ್ರಮುಖ ಪತ್ರಿಕೆಗಳಲ್ಲಿ ಕತೆ-ಕವನ-ಮಕ್ಕಳ ಪದ್ಯಗಳನ್ನು ಪ್ರಕಟಿಸಿರುವ ವಿನಯ್ ಅವರಿಗೆ ಜಾಹೀರಾತು ಕಲೆಯಲ್ಲಿ ಆಸಕ್ತಿ. ಕೆಲ ಪುಸ್ತಕಗಳಿಗೆ ಮುಖಪುಟ ರಚಿಸಿದ್ದಾರೆ. ಏಡ್ಸ್‌ ಜಾಗೃತಿ ಸಂದೇಶದ ಅವರ ಭಿತ್ತಿಚಿತ್ರವೊಂದಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿ ಬಂದಿತ್ತು. ಪ್ರಸ್ತುತ ಸ್ಪರ್ಧೆಯ ಅಂತಿಮ ಮೂವತ್ತರಲ್ಲಿ ಅವರ 6 ಪ್ರವೇಶಗಳಿದ್ದವು.
ಅಂತಿಮ ೩೦ರ ಪಟ್ಟಿಯಲ್ಲಿದ್ದ ಎಲ್ಲ ಮುಖಪುಟಗಳೂ
ಸೊಗಸಾಗಿದ್ದವು. ಆ ಕಲಾವಿದರುಗಳ ಹೆಸರುಗಳು ಇಂತಿವೆ.(ಆವರಣದಲ್ಲಿ ಅವರ ಮುಖಪುಟ ಸಂಖ್ಯೆ ಇದೆ). ರವಿಕುಮಾರ ಅಬ್ಬಿಗೇರಿ(1, 2), ವಿನಯಕುಮಾರ ಸಾಯ(3, 5, 7,15,16, 22), ಕಾಶಿ ಸುಬ್ರಮಣ್ಯ(4, 25), ಸೌಮ್ಯ ಕಲ್ಯಾಣ್‌ಕರ‍್(6,8, 14, 21, 30), ಮಂಜುನಾಥ್ ಲತಾ(9, 10, 28) ಪ್ರಮೋದ್‌ ಪಿ ಟಿ (11), ವಿನಿಶಾ ತೀರ್ಥಹಳ್ಳಿ(12), ನೀಲಾಂಜಲ(13), ನಯನಾ ಜೋಶಿ(17, 26), ಸುಧನ್ವಾ ದೇರಾಜೆ(18), ನಿಹಾರಿಕಾ ಶೆಣೈ(19), ಇಂದು ಹರಿಕುಮಾರ‍್(20), ಶ್ರೀನಿಧಿ ಟಿಜಿ(23), ಅಜಿತ್‌ ಕೌಂಡಿನ್ಯ(24), ರಾಮಕೃಷ್ಣ ಸಿದ್ರಪಾಲ(27), ಸುನಿಲ್‌ ಕುಲಕರ್ಣಿ(29)
ಸರಿ ಉತ್ತರ ಸಂಖ್ಯೆ 3 ಎಂದು ಗುರುತಿಸಿ ಕಾಮೆಂಟ್‌ ಹಾಕಿದವರು ೮ ಜನ. ಸಾವಿರ ರೂ ಬಹುಮಾನವನ್ನು 2000 ರೂಗಳಿಗೆ ಹೆಚ್ಚಿಸಿ ಈ ಎಂಟೂ ಜನರಿಗೆ ತಲಾ 250 ರೂ ಮೌಲ್ಯದ ಪುಸ್ತಕಗಳನ್ನು ಛಂದಪುಸ್ತಕ ಮತ್ತು ಮೇಫ್ಲವರ್‌ ಮೀಡಿಯಾ ಹೌಸ್‌ ವತಿಯಿಂದ ನೀಡಲಾಗುವುದು. ಪುಸ್ತಕ ಬಿಡುಗಡೆಯ ದಿನ ಈ ಬಹುಮಾನ ವಿತರಣೆ ಇರುತ್ತದೆ. ಗೆದ್ದವರಿಗೆ ಅಭಿನಂದನೆಗಳು. ಭಾಗವಹಿಸಿದ ಎಲ್ಲರಿಗೂ, ಕಮೆಂಟು ಹಾಕಿದವರಿಗೂ ಛಂದಪುಸ್ತಕ ಕೃತಜ್ಞತೆ ಹೇಳುತ್ತದೆ. ಒಟ್ಟಾರೆ ಯಾವ ಮುಖಪುಟಕ್ಕೆ ಎಷ್ಟು ಓದುಗರ ಕಾಮೆಂಟುಗಳು ಬಂದವು ಎಂಬ ಕುತೂಹಲಕ್ಕೆ ಇಲ್ಲೊಂದು ಗ್ರಾಫ್‌ ತಯಾರಿಸಿದ್ದೇವೆ. ಕ್ಲಿಕ್‌ ಮಾಡಿ ನೋಡಿ.



15 comments:

Anonymous said...

Congrats to Vinay Kumar
:-)
ms

Ananda said...

Congradulations.

But it is better to let us know how and why this design is selected. That will be a fair deal.

-Ananda

Unknown said...

ಅಭಿನಂದನೆಗಳು ವಿನಯಕುಮಾರ್ :-)

ಸಂದೀಪ್ ಕಾಮತ್ said...

ಅಭಿನಂದನೆಗಳು ವಿನಯ ಕುಮಾರ!

ಶ್ವೇತಾ ಹೆಗಡೆ said...

Congrats Vinay..................

ಜಿ ಎನ್ ಮೋಹನ್ said...

congrats vinay
i liked yours and manjunath lata's designs
all ur designs sent to competition are good
keep it up

Pramod P T said...

congrats Vinay,

All of your works are too good.
Keep up good work.

Pramod

mukhaputa said...

congrats vinay

ಸುಘೋಷ್ ಎಸ್. ನಿಗಳೆ said...

ಹೃತ್ಪೂರ್ವಕ ಅಭಿನಂದನೆಗಳು ವಿನಯ್. ನಿಮ್ಮ ಸೃಜನಶೀಲತೆ ಮತ್ತಷ್ಟು ಬೆಳೆಯಲಿ ಎಂದು ಹಾರೈಸುವೆ. ಅಭಿನಂದನೆಗಳು.

Gururaja Narayana said...

Congratulations Vinay for your excellent work (6 entries in the final 30!!) and kudos to Chanda Team for your encouragement to young talent (both author, cover page artist). Way to go..

Datta3 said...

congrats vinay...

ತೇಜಸ್ವಿನಿ ಹೆಗಡೆ said...

ವಿನಯ್ ಅವರಿಗೆ ಹಾರ್ದಿಕ ಅಭಿನಂದನೆಗಳು. ನಿಜಕ್ಕೂ ನಿಮ್ಮ ಡಿಸೈನ್ ತುಂಬಾ ಚೆನ್ನಾಗಿದೆ.

Chitra Kashi said...

ವಿಜೇತ ವಿನಯನಿಗೆ ಜೈ ಅನ್ನೋಣ. ಎಷ್ಟೊಂದು ಪ್ರವೇಶ, ಅಷ್ಟಕ್ಕೆ ಅರ್ಹತೆ, ಕೊನೆಗೆ ವಿನಯನ ವಿಜಯ. ನಿಜಕ್ಕೂ ಸೃಜನಶೀಲತೆಗೆ ಪಟ್ಟಾಭಿಷೇಕ. ತೀರ್ಪುಗಾರರಿಗೂ ಅಭಿನಂದನೆಗಳು. ನನಗೆ ಅಂತಿಮ ಹಂತದವರೆಗೂ ತಲುಪಿದ್ದೇ ಅತೀವ ಸಂತೋಷವಾಗಿದೆ. ಎಲ್ಲರಿಗೂ ಸ್ಪರ್ಧಿಗಳಾಗಿದ್ದ ನಾನೂ ಮತ್ತು ನನ್ನ ಮಗ ಕಾರ್ತೀಕ ಅಭಿನಂದಿಸುತ್ತೇವೆ.
ಕಾಶೀ ಸುಬ್ರಮಣ್ಯಂ ಹಾಗೂ ಕಾಶೀ ಕಾರ್ತೀಕ್

Sowmya said...

Congrats Vinay!!!!!

B said...

nice work. Reminds me of the artwork in this book.
http://www.amazon.com/Day-Babies-Crawled-Away/dp/039923196X/ref=sr_1_fkmr1_1?ie=UTF8&qid=1264009895&sr=1-1-fkmr1#noop

and I did a cake inspired by one of the cover art work
http://greenismyvalley.blogspot.com/2010/01/first-birthday-celebration.html