Thursday, December 31, 2009

ಅಂತಿಮ ದಿನಾಂಕ ಜನವರಿ ೫!

ಈಗ ಇಲ್ಲಿ ಹಾಕಿರುವ ಐದು ವಿನ್ಯಾಸಗಳೂ ಸೇರಿದರೆ ಇದುವರೆಗೆ ಒಟ್ಟು ೪೫ ಮುಖಪುಟಗಳನ್ನು ನೋಡಿದ್ದೀರಿ. ಛಂದ ಪುಸ್ತಕದ ಇನ್‌ಬಾಕ್ಸ್‌ನಲ್ಲಿ ಇನ್ನೂ ಮೂವತ್ತು ಕಾದುಕೂತಿವೆ. ಸಂತಸದ ಸುದ್ದಿಯೇನೆಂದರೆ ಇಂದು ಮುಗಿಯಬೇಕಿದ್ದ ಗಡುವನ್ನು ವಿಸ್ತರಿಸಲಾಗಿದೆ. ಯಾವುದೇ ಕಾರಣಕ್ಕೆ ನೀವು ನಿಮ್ಮ ವಿನ್ಯಾಸವನ್ನು ಪೂರ್ಣಗೊಳಿಸಲಾಗದಿದ್ದಲ್ಲಿ, ಚಿಂತಿಸಬೇಕಿಲ್ಲ. ಮುಂದಿನ ಐದು ದಿನ ನಿಮಗೆ ಅವಕಾಶವಿದೆ. ಮಾಡಿ ಕಳಿಸಿ. ಜನವರಿ ೫ನೇ ತಾರೀಖಿನೊಳಗೆ ನಮ್ಮನ್ನು ತಲುಪುವ ಎಲ್ಲ ವಿನ್ಯಾಸಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದು. ಹೊಸ ವರ್ಷದ ಶುಭಾಶಯಗಳು.
~ಛಂದಪುಸ್ತಕ






Tuesday, December 22, 2009

Thursday, December 17, 2009

ಮೊದಲ ಕಂತು ಇಲ್ಲಿದೆ(೨ನೇಯದು ರೆಡಿ ಇದೆ)

ಆದರೆ ನಿಮ್ಮದು ಇನ್ನೂ ಬಂದಿಲ್ಲ!!!







Saturday, December 12, 2009

ನಿಮ್ಮ ಸ್ಫೂರ್ತಿಗೆ ಎರಡು ಪದ್ಯಗಳು


ಗೆಳೆಯರೆ, ಕೆಲಸ ಶುರು ಮಾಡಿದ್ರಾ?
ನಿಮ್ಮ ಸ್ಪೂರ್ತಿಗೆಂದು ಪುಸ್ತಕದಲ್ಲಿನ ಎರಡು ಪದ್ಯಗಳನ್ನು ಇಲ್ಲಿ ಕೊಡಲಾಗಿದೆ. (ಕ್ಲಿಕ್‌ ಮಾಡಿದರೆ ಚಿತ್ರ ದೊಡ್ಡದಾಗುವುದು). ಓದಿ ಹೊಸ ರೀತಿಯ ವಿನ್ಯಾಸ ಮಾಡಿ.
ಮತ್ಮೊಮ್ಮೆ ನೆನಪು ಮಾಡುವುದೇನೆಂದರೆ: ಈ ಪದ್ಯಗಳು ನಿಮ್ಮ ಸ್ಫೂರ್ತಿಗೆ ಮಾತ್ರ. ಅವಕ್ಕೇ ಚಿತ್ರ ಬರೆಯಬೇಕು ಎಂಬ ಕಟ್ಟುನಿಟ್ಟಿನ ನಿಯಮವೇನಿಲ್ಲ. ಒಟ್ಟಾರೆ ನಿಮ್ಮ ವಿನ್ಯಾಸ ಪುಸ್ತಕಕ್ಕೆ ಸೂಕ್ತ ಎನಿಸುವಂತಿದ್ದರೆ ಸಾಕು. ನವಿರಾದ ಮಕ್ಕಳ ಪದ್ಯಗಳಿರುವ ಪುಸ್ತಕವೊಂದಕ್ಕೆ ಮುಖಪುಟ ಹೇಗಿದ್ದರೆ ಚೆಂದ ಎಂದು ಆಲೋಚಿಸಿ ಅಷ್ಟೇ. ಅಲ್ಲಿ ಚಂದ್ರ ಇಲ್ಲದಿದ್ದರೂ ಚಿಂತೆ ಇಲ್ಲ.

ಇದು ಸ್ಪರ್ಧೆ ಎಂಬುದು ನೆನಪಿರಲಿ. ಹಾಗಾಗಿ ನಿಮ್ಮದು ಬರೀ ಸುಂದರ ಮುಖಪುಟವಾದರೆ ಸಾಲದು. ಇತರರಿಗಿಂತ ಎಷ್ಟು ಹೊಸ ರೀತಿಯ ಆಲೋಚನೆ ಎಂಬುದಕ್ಕೂ ಅಂಕವಿರುತ್ತದೆ.
ಅಂದಮೇಲೆ ಹರಿಯಗೊಡಿ ನಿಮ್ಮ ಸೃಜನಶೀಲತೆಯನ್ನು ಮನಬಂದಂತೆ. ಒಂದು ಅನನ್ಯ ಮುಖಪುಟ ಮಾಡಿ ಕಳಿಸಿ.
ಕಾಯುತ್ತಿದ್ದೇವೆ....

Friday, December 11, 2009

ನಿಮ್ಮ ಸಮಯ ಈಗ ಶುರು...



ಚಿತ್ರದ ಮೇಲೆ ಕ್ಲಿಕ್‌ ಮಾಡಿದರೆ ದೊಡ್ಡದಾಗಿ ಕಾಣುವುದು.
‘ಹಲೋ ಹಲೋ ಚಂದಮಾಮ’ ಪದ್ಯ ಓದಿದರೆ ಮುಖಪುಟ ವಿನ್ಯಾಸಕ್ಕೆ ಅನುಕೂಲವಾಗುತ್ತದೆ ಅನಿಸುತ್ತದೆಯೆ?
ಹಾಗಾದರೆ ಈ ಬ್ಲಾಗ್‌ ನೋಡುತ್ತಿರಿ.

Wednesday, December 2, 2009

ಇನ್ನೆರಡು ಮುಖಪುಟಗಳು


ಬಸವನಗುಡಿಯ ವರ್ಲ್ಡ್‌‌ಕಲ್ಚರ್‌ ಸಂಸ್ಥೆಯಲ್ಲಿ ಈ ಭಾನುವಾರ ಬೆಳಗ್ಗೆ ಬಿಡುಗಡೆಯಾಗಲಿರುವ ವಿಶ್ವೇಶ್ವರ ಭಟ್‌ರ ಎರಡು ಪುಸ್ತಕಗಳ ಮುಖಪುಟಗಳು ಇಲ್ಲಿವೆ. ನೋಡಿ ಅನಿಸಿಕೆ ತಿಳಿಸಿ.