ಗೆಳೆಯರೆ, ಕೆಲಸ ಶುರು ಮಾಡಿದ್ರಾ?
ನಿಮ್ಮ ಸ್ಪೂರ್ತಿಗೆಂದು ಪುಸ್ತಕದಲ್ಲಿನ ಎರಡು ಪದ್ಯಗಳನ್ನು ಇಲ್ಲಿ ಕೊಡಲಾಗಿದೆ. (ಕ್ಲಿಕ್ ಮಾಡಿದರೆ ಚಿತ್ರ ದೊಡ್ಡದಾಗುವುದು). ಓದಿ ಹೊಸ ರೀತಿಯ ವಿನ್ಯಾಸ ಮಾಡಿ.
ಮತ್ಮೊಮ್ಮೆ ನೆನಪು ಮಾಡುವುದೇನೆಂದರೆ: ಈ ಪದ್ಯಗಳು ನಿಮ್ಮ ಸ್ಫೂರ್ತಿಗೆ ಮಾತ್ರ. ಅವಕ್ಕೇ ಚಿತ್ರ ಬರೆಯಬೇಕು ಎಂಬ ಕಟ್ಟುನಿಟ್ಟಿನ ನಿಯಮವೇನಿಲ್ಲ. ಒಟ್ಟಾರೆ ನಿಮ್ಮ ವಿನ್ಯಾಸ ಪುಸ್ತಕಕ್ಕೆ ಸೂಕ್ತ ಎನಿಸುವಂತಿದ್ದರೆ ಸಾಕು. ನವಿರಾದ ಮಕ್ಕಳ ಪದ್ಯಗಳಿರುವ ಪುಸ್ತಕವೊಂದಕ್ಕೆ ಮುಖಪುಟ ಹೇಗಿದ್ದರೆ ಚೆಂದ ಎಂದು ಆಲೋಚಿಸಿ ಅಷ್ಟೇ. ಅಲ್ಲಿ ಚಂದ್ರ ಇಲ್ಲದಿದ್ದರೂ ಚಿಂತೆ ಇಲ್ಲ.
ಇದು ಸ್ಪರ್ಧೆ ಎಂಬುದು ನೆನಪಿರಲಿ. ಹಾಗಾಗಿ ನಿಮ್ಮದು ಬರೀ ಸುಂದರ ಮುಖಪುಟವಾದರೆ ಸಾಲದು. ಇತರರಿಗಿಂತ ಎಷ್ಟು ಹೊಸ ರೀತಿಯ ಆಲೋಚನೆ ಎಂಬುದಕ್ಕೂ ಅಂಕವಿರುತ್ತದೆ.
ಅಂದಮೇಲೆ ಹರಿಯಗೊಡಿ ನಿಮ್ಮ ಸೃಜನಶೀಲತೆಯನ್ನು ಮನಬಂದಂತೆ. ಒಂದು ಅನನ್ಯ ಮುಖಪುಟ ಮಾಡಿ ಕಳಿಸಿ.
ಕಾಯುತ್ತಿದ್ದೇವೆ....
2 comments:
ಕ್ಲಿಕ್ ಮಾಡಿದ್ರೆ ಸಣ್‌ದಾಗ್ತಾ ಇದೆಯಲ್ಲ ಸಾರ್! ಮಕ್ಕಳ ಪದ್ಯ ಅಂತ ಹಿಂಗ್ ಮಾಡಿದ್ರೆ ಹೆಂಗೆ?!
oh sorry,sariyaagide. eega gottathu !
Post a Comment