ಈಗ ಇಲ್ಲಿ ಹಾಕಿರುವ ಐದು ವಿನ್ಯಾಸಗಳೂ ಸೇರಿದರೆ ಇದುವರೆಗೆ ಒಟ್ಟು ೪೫ ಮುಖಪುಟಗಳನ್ನು ನೋಡಿದ್ದೀರಿ. ಛಂದ ಪುಸ್ತಕದ ಇನ್‌ಬಾಕ್ಸ್‌ನಲ್ಲಿ ಇನ್ನೂ ಮೂವತ್ತು ಕಾದುಕೂತಿವೆ. ಸಂತಸದ ಸುದ್ದಿಯೇನೆಂದರೆ ಇಂದು ಮುಗಿಯಬೇಕಿದ್ದ ಗಡುವನ್ನು ವಿಸ್ತರಿಸಲಾಗಿದೆ. ಯಾವುದೇ ಕಾರಣಕ್ಕೆ ನೀವು ನಿಮ್ಮ ವಿನ್ಯಾಸವನ್ನು ಪೂರ್ಣಗೊಳಿಸಲಾಗದಿದ್ದಲ್ಲಿ, ಚಿಂತಿಸಬೇಕಿಲ್ಲ. ಮುಂದಿನ ಐದು ದಿನ ನಿಮಗೆ ಅವಕಾಶವಿದೆ. ಮಾಡಿ ಕಳಿಸಿ. ಜನವರಿ ೫ನೇ ತಾರೀಖಿನೊಳಗೆ ನಮ್ಮನ್ನು ತಲುಪುವ ಎಲ್ಲ ವಿನ್ಯಾಸಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದು. ಹೊಸ ವರ್ಷದ ಶುಭಾಶಯಗಳು.
~ಛಂದಪುಸ್ತಕ
5 comments:
ಕಳೆದ ವರ್ಷದ ರೀತಿಯ "ಬಣ"ಗುಡುವ ಅ"ಭೂತ"ಪೂರ್ವ ತೀರ್ಪನ್ನು ಈ ವರ್ಷವೂ ನಿರೀಕ್ಷಿಸಬಹುದೇ?!!!
ಅನಾನಿಮಸ್ ಆಗದೆ ನಿಮ್ಮ ಮುಖ ಸ್ಪಲ್ಪ ತೋರಿಸಿದ್ರೆ ಈ ಸಲ ನಿಮ್ಮನ್ನೇ ತೀರ್ಪುಗಾರರನ್ನಾಗಿ ಮಾಡಬಹುದಾ ಅಂತ ಯೋಚಿಸಬಹುದಾಗಿತ್ತು...
~ಅಪಾರ
ಈ ಸಲ ತೀರ್ಪುಗಾರರಿಗೆ ಆಯ್ಕೆಗಳು ಕೊಂಚ ಕಡಿಮೆ ಇದ್ದಂತಿವೆ. ಅದ್ಯಾಕೆ ಇಂಗ್ಲಿಷ್ ಮುಖಪುಟಗಳೂ ಬರ್ತಿವೆಯಲ್ಲಾ ?
- ಹರೀಶ್ ಕೇರ
ಅಲ್ಲಾ ಬಾಸ್ , ಕನ್ನಡ ಪುಸ್ತಕಕ್ಕೆ ಇಂಗ್ಲೀಶ್ ಮುಖಪುಟ ವಿನ್ಯಾಸ ಮಾಡಿದ್ದಾರಲ್ಲ? ಅವನ್ನೂ ಕೂಡ ಪರಿಗಣನೆಗೆ ತಗೊಂಡಿದ್ದೀರಲ್ಲ! disqualify ಮಾಡಿ ಅವುಗಳನ್ನೆಲ್ಲಾ.
ಇದೇನಾದ್ರೂ ಲವಲVK ತರ ಹೊಸ ಪ್ರಯೋಗನಾ ಮತ್ತೆ ಅಂತ ಭಯವಾಗ್ತಿದೆ.
ಹರೀಶ್, ವಿರಾಹೆ
ಸ್ಪರ್ಧೆಯ ಸುದ್ದಿ ಹಿಂದೂ ಪತ್ರಿಕೆಯಲ್ಲೂ ಪ್ರಕಟವಾಗಿತ್ತಲ್ಲ, ಆಗ ಕೆಲವರು ಕನ್ನಡ ಫಾಂಟ್ ಇಲ್ಲ, ಸದ್ಯಕ್ಕೆ ಇಂಗ್ಲಿಷ್ ಫಾಂಟ್ ಬಳಸಬಹುದೆ ಎಂದರು. ಹಾಗಾಗಿ ಶೀರ್ಷಿಕೆ ಇಂಗ್ಲಿಷ್‌ನಲ್ಲಿರುವ ಕೆಲವು ಮುಖಪುಟಗಳು ಬಂದಿವೆ.
~ಅಪಾರ
Post a Comment