Tuesday, December 18, 2007

ಬ್ಲಾಗಿಲನು ತೆರೆದು...

ಯಾವ ಬ್ಲಾಗು ಅಪ್‌ಡೇಟಾಗಿದೆ? ಯಾವುದಾಗಿಲ್ಲ ಎಂದು ತಿಳಿಯದೆ ಎಲ್ಲಾ ಬ್ಲಾಗುಗಳನ್ನೂ ತೆರೆದು ನೋಡುವುದು ಪ್ರಯಾಸವೇ? ಇಲ್ಲೊಂದು ಉಪಾಯವಿದೆ. http://planetkannada.com/planet-kannada/subscriptions ಎಂಬ ತಾಣದಲ್ಲಿ ಕನ್ನಡದ ಬ್ಲಾಗುಗಳು ಅವು ಅಪ್‌ಡೇಟ್‌ ಆದ ಸಮಯಕ್ಕೆ ಅನುಗುಣವಾಗಿ ಪಟ್ಟಿಗೊಂಡಿರುತ್ತವೆ. ಈಗಷ್ಟೆ ಅಪ್‌ಡೇಟಾದ ಬ್ಲಾಗು ಎಲ್ಲಕ್ಕಿಂತ ಮೇಲೆ ಕಾಣುತ್ತದೆ. ಹೊಸ ಪೋಸ್ಟ್‌ನ ಶೀರ್ಷಿಕೆಯನ್ನೂ ಅಲ್ಲೇ ಓದಬಹುದು. ಅದನ್ನು ಕ್ಲಿಕ್ಕಿಸಿದರೆ ನೇರ ಆ ತಾಣಕ್ಕೇ ಹೋಗುವಿರಿ. ಚೆನ್ನಾಗಿಲ್ಲವೆ? ಹೇಳಿ. ನಾನಂತೂ ಈ ಲಿಂಕನ್ನು ನನ್ನ ಕಂಪ್ಯೂಟರಿನ ಫೇವರಿಟ್ಸ್‌ ಮೆನುನಲ್ಲಿ ಹಾಕಿಕೊಂಡಿದ್ದೇನೆ.
ಅಕಸ್ಮಾತ್‌ ನಿಮ್ಮ ಬ್ಲಾಗು ಅಲ್ಲಿ ಕಾಣುತ್ತಿಲ್ಲವೆ? ಅಲ್ಲೆ ಗೆಟ್ ಲಿಸ್ಟೆಡ್‌ ಅಂತಿರುವುದನ್ನು ಕ್ಲಿಕ್‌ ಮಾಡಿ ಪಟ್ಟಿಗೆ ಸೇರಿಕೊಳ್ಳಿ.

2 comments:

Anonymous said...

(sorry for not typing in kannada)
A better option is to use google reader. http://reader.google.com You can log-in with your google/blogger id and you can add all your favorite blogs by clicking add subscription. Then everytime there is an update on any of your blogs you will see them right there.

ಭಾವಜೀವಿ... said...

ಇದರ ಜೊತೆಗೆ http://www.baraha.com/kannada/index.php ವೂ ಸಹ ಉಪಯುಕ್ತ ಬ್ಲಾಗ್ ಹೆಬ್ಬಾಗಿಲು!
ಇದರಲ್ಲಿ ಹೆಚ್ಚಿನ ಎಲ್ಲಾ ಕನ್ನಡ ಬ್ಲಾಗ್‍ಗಳು ಅಪ್‍ಡೇಟ್ ಆದಾಗ ಅಲ್ಲದೆ ವಿಸ್ಮಯನಗರಿ ಹಾಗೂ ಏನ್‍ಗುರುನಲ್ಲಿ ಹೊಸ ಲೇಖನ ಪ್ರಕಟಗೊಂಡಾಗ ತಕ್ಷಣ ತೋರಿಸಲ್ಪಡುತ್ತದೆ..