Tuesday, December 4, 2007

ದಾ ರು ಬೇಂದ್ರೆ?!!

ನನ್ನ ನಾನು ಮರೆಯುವಂತೆ
ಮದ್ಯವನ್ನು ಕುಡಿದೆನು
ತನ್ನ ತಾನು ಅರಿಯುವಂಥ
ವಿದ್ಯೆಯನು ಹಿಡಿದೆನು

~ ದ ರಾ ಬೇಂದ್ರೆ

ನನ್ನ ಇಷ್ಟದ ಕವಿ ದ ರಾ ಬೇಂದ್ರೆ ಕೂಡ ಮದ್ಯದ ಕುರಿತು ಪದ್ಯ ಬರೆದಿದ್ದಾರೆಂಬ ವಿಷಯ ತಿಳಿದು ಒಂದು ಫುಲ್‌ ಬಾಟಲು ಕುಡಿದಷ್ಟೇ ಖುಷಿಯಾಯಿತು. ಮದ್ಯದ ಪದ್ಯಗಳನ್ನು ಕೆಲಸವಿಲ್ಲದ ಕುಡುಕರು ಮಾತ್ರ ಬರೆಯುತ್ತಾರೆ ಎಂಬ ಕೀಳರಿಮೆಯನ್ನು ತೊಡೆದ ಈ 'ಮದ್ಯ' ಎಂಬ ಕವಿತೆಯನ್ನು ಹುಡುಕಿ ಕೊಟ್ಟಿದ್ದು ಸುಧನ್ವಾ. ಮೇಲಿರುವುದು ಪದ್ಯದ ಕೊನೆಯ ನಾಲ್ಕು ಸಾಲುಗಳು.

3 comments:

Anonymous said...

Daru bendre?? so ur writings on 'gundu' is justified eh?? Do hurry up. we r all waiting for Round 10.
:-)
malathi S

Unknown said...

kannadada varakavi da ra bendre yavaru gundina bagge kavithe barediddare ennuvudannu nodi nanagu lekhakarashte ascharyavagide. adare, adarondigiruva avara commentu - madyada padyagalannu kelasavillada kudukaru mathra bareyuthare emba kilarime idarondige duravayithu - embudu kannadada mathorva mahaan kavi haagu hendkuduka rathna emba apoorva pathrada srushtikartha sri g p rajarathnam avarige aada ghora apamana athava lekhakarige gpr avara bagge agnana endu nanna anisike.

ravi chandar

apara said...

ರವಿಚಂದರ್
ನೀವು ಹೇಳಿರುವುದು ಸರಿ. ಕೆಲಸವಿಲ್ಲದ ಕುಡುಕರು ಎಂದಾಗ ನಾನು ನನ್ನನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೆ ಅಷ್ಟೆ. ರಾಜರತ್ನಂ ಪದ್ಯಗಳು ನನಗೂ ತುಂಬಾ ಇಷ್ಟ. ಅವನ್ನು ಓದಿದ ಸ್ಫೂರ್ತಿಯಿಂದಲೇ ಇವನ್ನು ಬರೆಯುತ್ತಿದ್ದೇನೆ. ಮೈ ಮರೆವಿನಿಂದಾದ ತಪ್ಪನ್ನು ಮರೆತುಬಿಡಿ
~ಅಪಾರ