ಬೀರು ವಿಸ್ಕಿ ಜಿನ್ನು ವೈನು
ಪರಮಾತ್ಮ ಒಬ್ನೆ ಹೆಸರು ಬೇರೆ
ಹೆಂಡ ಅಂದ್ರೆ ಇನ್ನೂ ವೈನು
ಕನ್ನಡ ಪದಗಳ ಅಮಲೇ ಬೇರೆ
*
ಅನುಭವದಿಂದಲೇ ಬರುವುದು ಎಲ್ಲ
ಸುರಿದ ಬೀರು ನೊರೆ ಉಕ್ಕದಿರುವುದು
ನೆನಪುಗಳ ಬಿರುಮಳೆಗೆ ಸಿಕ್ಕದಿರುವುದು
ಇತರರಿಗೆ ಕಾಣುವಂತೆ ಬಿಕ್ಕದಿರುವುದು
*
ಗುಂಡು ಎಣ್ಣೆ ತೀರ್ಥ
ಅಂದೋರೆಲ್ಲಾ ನಮ್ಮಂಥೋರೆ
ಪರ್ಮಾತ್ಮ ಅಂತ ಕರೆದೋನ್ ಮಾತ್ರ
ದೇವರಂಥಾ ಕುಡುಕ ಖರೇ
*
ಖುಷಿಗಾಗಿ ಇಲ್ಲಿಗೆ ಬಂದರೆ
ಪರವಾಗಿಲ್ಲ, ನಿನ್ನಷ್ಟಕ್ಕೆ ಕುಡಿ
ಕೇಕೆ, ಚೀರಾಟ ಬೇಡ, ನೆನಪಿರಲಿ
ನಿನದಲ್ಲ, ಬಾರು ದುಃಖಿತರ ಗುಡಿ
*
ಮದ್ಯಪಾನ ಒಂದು ಧ್ಯಾನ
ಕುಡಿಯಬೇಕು ಒಬ್ಬರೇ
ಸ್ವಗತವೈಭವದಲಿ ಮೈಮರೆತಿರೆ
ಗೆಳೆಯರು ತಾನೆ ಬಂದು ತಬ್ಬರೆ?
2 comments:
ಕುಡಿದು ನೀ ಬರೆದ ಮದ್ಯಸಾರ
ಆಗಿದ್ದೇನೆ ನಾ ನಿನಗೆ ಅಭಾರ
ಈ ಕವನ ಕೊಡುವ ಕಿಕ್ ನಿಜಕ್ಕೂ ಅಪಾರ
-ಜಿ ಎನ್ ಮೋಹನ್
without drinking u can ima'gin' so much?? kuDidre?? innoo de'wine'??ಎಷ್ಟೊಂದು addiction ಆಗಿ ಬಿಟ್ಟಿದೆ ಅಂದ್ರೆ ಕಛೇರಿಯಲ್ಲೂ ಮದ್ಯಸಾರದ udpadted version ಓದುವ ತವಕ. ಗಂಭೀರ ಪ್ರಭಾವ 'beer'taa idde nimma kavana.
Let the creative juice flow freely, LOL
Malathi S
Post a Comment