Sunday, September 28, 2008

ಶುರು ಮಾಡಿದ್ರಾ?

ಮೂರು ದಿನ ಆಯ್ತು. ಏನಾದ್ರೂ ಐಡಿಯಾ ಹೊಳೀತಾ?
ಕೆಲವರು ಕೇಳುತ್ತಿದ್ದಾರೆ, ಫೋಟೋಶಾಪಲ್ಲೇ ಮಾಡಬೇಕಾ ಅಂತ. ಹಾಗೇನಿಲ್ಲ. ನೀವು ಬಿಳಿಹಾಳೆಯ ಮೇಲೆ ನಿಮ್ಮ ವಿನ್ಯಾಸವನ್ನು ಪೂರ್ಣಗೊಳಿಸಿ ಅದನ್ನು ಸ್ಕ್ಯಾನ್ ಮಾಡಿ ಕಳಿಸಿದರೂ ನಡೆಯುತ್ತೆ.
ಬಳ್ಳಾರಿಯ ಹಾಗೂ ಬೆಂಗಳೂರಿನ ಪರಿಸರದಲ್ಲಿ ನಡೆಯಬಹುದಾದ ಸನ್ನಿವೇಶಗಳು ವಸುಧೇಂದ್ರರ ಕತೆಗಳಲ್ಲಿವೆ ಎಂದು ಈಗಾಗಲೆ ಹೇಳಿದ್ದೇವೆ. ಅವೆರಡೂ ಲೋಕಗಳನ್ನು ಬೆಸೆಯುವ ಕತೆಗಳಾದ್ದರಿಂದಲೇ ಪುಸ್ತಕಕ್ಕೆ ‘ಹಂಪಿ ಎಕ್ಸ್‌ಪ್ರೆಸ್’ ಎಂಬ ಹೆಸರು. ಆದರೂ ಪುಸ್ತಕದಲ್ಲಿರುವ ಒಂದು ಕತೆಯನ್ನಾದರೂ ಓದಿದರೆ ಒಂದಿಷ್ಟು ಐಡಿಯಾ ಬರಬಹುದಾಗಿತ್ತು ಎಂಬುದು ಕೆಲವರ ಅನಿಸಿಕೆ. ಅಂಥವರಿಗಾಗಿ ಸಂಕಲನದಲ್ಲಿ ಇರುವ ಸೀಳುಲೋಟ ಎಂಬ ಕತೆಯ ಲಿಂಕ್ ಇಲ್ಲಿದೆ. ಓದಿ.
ಬೆಸ್ಟ್ ಆಫ್ ಲಕ್.

6 comments:

ಸಂದೀಪ್ ಕಾಮತ್ said...

ಐಡಿಯಾ ಬರ್ತಾ ಇಲ್ಲ :(
ಇನ್ನೊಂದು ಕಥೆ ಹಾಕಿ ;p

ಆಲಾಪಿನಿ said...

ಅಪಾರ ಸಿಕ್ಕಾಪಟ್ಟೆ ದೊಡ್ಡವರಾಗಿದ್ದಾರೆ. ಕಣ್ಣಿಗೆ ಹಿಡಿಸದಷ್ಟು. i mean will u reduce the font size of ‘ಅಪಾರ’...?

Anonymous said...

ಬಹಳ ಜನರ ಬೆದರಿಕೆಯ ನಂತರ ವಿಧಿಯಿಲ್ಲದೆ ಬ್ಲಾಗ್‌ ಮಾಸ್ಟ್‌ನಲ್ಲಿನ ಅಪಾರ ಎಂಬುದರ ಗಾತ್ರ ಕಡಿಮೆ ಮಾಡಿದ್ದೇನೆ!
ಈಗ ಸಂತೋಷನಾ?!ಛೇ!(ಸ್ಮೈಲಿ ಸಿಗ್ತಿಲ್ಲ)
~ಅಪಾರ

Anonymous said...

:-) @ Sandeep Kamath
i second him for innondu kathe....
bedarisuvavara deseyinda 'apaara' eega kaNNigeTakuvantaagiddaare.
:-)

Anonymous said...

ಶ್ರೀದೇವಿ,
ನನಗಂತೂ ಇಷ್ಟ ಆಯ್ತು.

ಅಪಾರ,
ಬಹುಶಃ XHTML ಪುಸ್ತಕ ಕೊಳ್ಳುವ ಸಮಯ. ವೆಬ್ ಪುಟದ ಡಿಸೈನ್ ಎಲಿಮೆಂಟ್ಸ್ ಚೆನ್ನಾಗಿದೆ. ಕೂಡಿಸಬೇಕಷ್ಟೆ :-)

Anonymous said...

ಕಾಂಟೆಸ್ಟಿನಲ್ಲಿ ನಾನೂ ಭಾಗವಹಿಸುವೆ :-)
ಒಂದು ಐಡಿಯ ಇದೆ.

ಮತ್ತೊಂದು ವಿಷಯ. ಮೊಬೈಲ್ ನಂಬರುಗಳನ್ನ ಪಬ್ಲಿಕ್ ಆಗಿ ಪೋಸ್ಟ್ ಮಾಡುವುದು not a good idea!