Saturday, November 28, 2009
ಆ ದಶಕಕ್ಕೆ ಸ್ವಾಗತ
Friday, November 13, 2009
Tuesday, November 10, 2009
ಪ್ರಕಾಶ ಹೆಗಡೆಗೆ ಪುಸ್ತಕೋತ್ಸವ!
ಈ ಭಾನುವಾರ ಕನ್ನಡ ಸಾಹಿತ್ಯಪರಿಷತ್ತಿನಲ್ಲೊಂದು ಪುಸ್ತಕೋತ್ಸವವಿದೆ. ಇಟ್ಟಿಗೆ ಸಿಮೆಂಟು ಸೆಂಟಿಮೆಂಟು ಖ್ಯಾತಿಯ ಪ್ರಕಾಶ್ ಹೆಗಡೆಯವರ ಪುಸ್ತಕ ‘ಹೆಸರೇ ಬೇಡ’ ಸೇರಿದಂತೆ ಮೂರು ಪುಸ್ತಕಗಳು ಅಂದು ಬಿಡುಗಡೆಯಾಗಲಿವೆ. ಫೋಟೊಗ್ರಾಫರ್ ಶಿವು ಬರೆದ ‘ವೆಂಡರ್ ಕಣ್ಣು’ , ದಿವಾಕರ್ ಹೆಗಡೆಯವರ ನಾಟಕಗಳ ‘ಉದ್ಧಾರ ಮತ್ತು ಸಂತೆ’ ಕೂಡ ಅಂದು ಓದುಗರ ಕೈ ಸೇರಲಿವೆ. ಅವುಗಳಲ್ಲಿ ಎರಡು ಪುಸ್ತಕಗಳಿಗೆ ನಾನು ಮಾಡಿದ ಮುಖಪುಟಗಳು ಇಲ್ಲಿವೆ. ಅನಿಸಿಕೆ ಹೇಳಿ.
Friday, November 6, 2009
ಜಯಂತ ಕಾಯ್ಕಿಣಿ ಬರೆದ ಒಂದು ಹಳೇ ಕವಿತೆ
ಮೀನೇ ದೋಣಿ
----------------------
ಮೀನೊಂದು ಮಿಂಚಿ ಓಡಾಡಿದೆ
ಮನದ ಕಡಲಾಳಕೆ
ಅರಸುತ ಈಜಿದೆ ತೀರವ
ಹೃದಯದ ತೀರವ
ಯಾವ ನೀರ ನೀಲದಲ್ಲಿ
ಕಣ್ಣ ಬೆಂಕಿ ಉರಿಯಿತು
ಯಾವ ಸ್ವರದ ಕಂಪಿನಲ್ಲಿ
ಮಡಿಲ ಸ್ವಪ್ನ ತೆರೆಯಿತು
ತೆರೆದು ಪೂರಾ ತನಗೆ ತಾನೆ
ಅಂತರಾಳ ಅರಳಿತು
ಅಂತರ ಕಳೆಯಿತು
ರಾತ್ರಿಯಲ್ಲಿ ಯಾವ ಕಿರಣ
ಒಡಲ ಗಾಯ ನೀವಿತು
ಯಾವ ಹುರುಪು ಮೀನ ಮೈಯ
ಹೊಳಪಿನಲ್ಲಿ ಮರೆಸಿತು
ಚುಕ್ಕಿಗಾಳ ನಿಂತ ನೀರ
ಆಳವನ್ನು ಕಲಕಿತು
ಏನನು ಹಿಡಿಯಿತು?
ಧಮನಿ ಧಮನಿ ಮೀನ ದಾರಿ
ಪರವಶ ಧಾರೆ
ಮೀನೇ ದೋಣಿ ಮೀನೇ ಕಡಲು
ಆಕಾಶವೆ ಮೇರೆ
ಬೆಳದಿಂಗಳು ಎಂಥ ಜಾಲ
ಇಂಥ ಕಡೆಗೆ ಬೀಸಿತು
ಜೀವವೇ ಹೊಳೆಯಿತು
----------------------
ಮೀನೊಂದು ಮಿಂಚಿ ಓಡಾಡಿದೆ
ಮನದ ಕಡಲಾಳಕೆ
ಅರಸುತ ಈಜಿದೆ ತೀರವ
ಹೃದಯದ ತೀರವ
ಯಾವ ನೀರ ನೀಲದಲ್ಲಿ
ಕಣ್ಣ ಬೆಂಕಿ ಉರಿಯಿತು
ಯಾವ ಸ್ವರದ ಕಂಪಿನಲ್ಲಿ
ಮಡಿಲ ಸ್ವಪ್ನ ತೆರೆಯಿತು
ತೆರೆದು ಪೂರಾ ತನಗೆ ತಾನೆ
ಅಂತರಾಳ ಅರಳಿತು
ಅಂತರ ಕಳೆಯಿತು
ರಾತ್ರಿಯಲ್ಲಿ ಯಾವ ಕಿರಣ
ಒಡಲ ಗಾಯ ನೀವಿತು
ಯಾವ ಹುರುಪು ಮೀನ ಮೈಯ
ಹೊಳಪಿನಲ್ಲಿ ಮರೆಸಿತು
ಚುಕ್ಕಿಗಾಳ ನಿಂತ ನೀರ
ಆಳವನ್ನು ಕಲಕಿತು
ಏನನು ಹಿಡಿಯಿತು?
ಧಮನಿ ಧಮನಿ ಮೀನ ದಾರಿ
ಪರವಶ ಧಾರೆ
ಮೀನೇ ದೋಣಿ ಮೀನೇ ಕಡಲು
ಆಕಾಶವೆ ಮೇರೆ
ಬೆಳದಿಂಗಳು ಎಂಥ ಜಾಲ
ಇಂಥ ಕಡೆಗೆ ಬೀಸಿತು
ಜೀವವೇ ಹೊಳೆಯಿತು
Sunday, November 1, 2009
Subscribe to:
Posts (Atom)