Sunday, April 20, 2008

ಕಾಮೆಂಟ್‌ ರೀ

ಇದು ಮುದುಕರ ಮದುವ ಸೀಸನ್ನು ಅನಿಸುತ್ತೆ. ನೀವೇ ನೋಡಿ. ಅತ್ತ ಫ್ರಾನ್ಸ್ ಅಧ್ಯಕ್ಷ ಸರ್ಕೋಜಿ, ಜರ್ಮನಿಯ ಮಾಜಿ ಛಾನ್ಸಲರ್ ಹೆಲ್ಮಟ್ ಕೋಹ್ಲ್, ಇತ್ತ ಸಲ್ಮಾನ್ ರಶ್ದಿ, ಮತ್ತೆ ರಷ್ಯಾದ ಅಧ್ಯಕ್ಷ ಪುಟಿನ್ ಎಲ್ಲಾ ಖ್ಯಾತನಾಮ ಮುದುಕರೂ(ಎಲ್ಲರೂ ಫಿಫ್ಟಿ ಪ್ಲಸ್) ಬಾಸಿಂಗ ಕಟ್ಟಿಕೊಂಡು ಕುಣಿಯುತ್ತಿದ್ದಾರೆ. ಎಲ್ಲರೂ ಹುಡುಕಿಕೊಂಡಿರುವ ಹುಡುಗಿಯರು ಮಾತ್ರ ಅವರ ಅರ್ಧದಷ್ಟು ವಯಸ್ಸಿನವರು ಎಂಬುದು ಮತ್ತೊಂದು ವಿಶೇಷ. ಸುಲಗ್ನ ಸಾವಧಾನ ಅಂತ ನಂಬಿಕೊಂಡು ಈಗಿನ ಹುಡುಗರು ವಯಸ್ಸು ಮೀರುತ್ತಿದ್ದರೂ ಸಾವಧಾನದಿಂದ ಬ್ಯಾಚಲರ್‌ಗಳಾಗೇ ಉಳಿಯುತ್ತಿದ್ದರೆ ಈ ಮುದುಕರು ಮದುವೆ ಮೇಲೆ ಮದುವೆ ಆಗಿ ಹೊಟ್ಟೆ ಉರಿಸುತ್ತಿದ್ದಾರೆ!
*
ಮುದುಕರ ಮದುವೆ ಸುದ್ದಿ ನಂತರ ಈಗ ರವಿಶಾಸ್ತ್ರಿಯ ಪುತ್ರೋತ್ಸವ ಸುದ್ದಿಯ ಕಡೆ ಬರೋಣ. ನಮ್ಮ ನಾಗದೇವತೆಯ ಅನುಗ್ರಹದಿಂದಾಗಿ ಕೊನೆಗೂ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ರವಿಶಾಸ್ತ್ರಿಗೆ ಈ ವಯಸ್ಸಿನಲ್ಲಿ ಮಗುವಾಗಿದೆ ಅಂತ ವಾರದ ಕೆಳಗೆ ಓದಿದೆವು. ಹೆರಿಗೆ ಕೋಣೆಯೊಳಕ್ಕೆ ನುಗ್ಗಿದ ಶಾಸ್ತ್ರಿ ಮಗುವನ್ನು ನೋಡುತ್ತಿದ್ದಂತೆ ಆನಂದದಿಂದ ಮಾಡಿದ ಕಾಮೆಂಟು ಏನಿರಬಹುದು?
-‘ವಾಟ್ ಎ ಬ್ಯೂಟಿಫುಲ್ ಡೆಲಿವರಿ!’
*
ಟ್ವೆಂಟಿ ಟ್ವೆಂಟಿ ಹಬ್ಬ ಶುರುವಾಗಿದೆ. ಕಿಂಗ್ ಖಾನ್, ಕಿಂಗ್‌ಫಿಶರ್‌ಗಳಂಥ ಬಿಗ್ ಶಾಟ್‌ಗಳು (ಮಲ್ಯರನ್ನು ಬೇಕಾದ್ರೆ ‘ಮಗ್’ ಶಾಟ್ ಅನ್ನಿ ತಪ್ಪಿಲ್ಲ)ಕಣಕ್ಕಿಳಿದ ಕಾರಣ ಆಟ ಬೊಂಬಾಟವಾಗಿದೆ. ಬೆಂಗಳೂರಲ್ಲಂತೂ ಕ್ರೀಡಾಂಗಣ ‘ವೈನಾ’ಗಿ ಸಿಂಗಾರಗೊಂಡಿತ್ತು ಅಂತ ಸುದ್ದಿ. ಬೌಂಡರಿ, ಸಿಕ್ಸು ಹೊಡೆದಾಗ ಕುಣಿಯುವ ಲಲನೆಯರ ಮೈಮೇಲಿನ ಬಟ್ಟೆಯೂ ಟ್ವೆಂಟಿ ಪರ್ಸೆಂಟ್ ಮೀರುವಂತಿಲ್ಲ ಎಂಬ ನಿಯಮ ಇದ್ದಂತಿದೆ. ಚೆಂಡಿಗಾದರೂ ಒಂದು ಬೌಂಡರಿ ಅಂತ ಇದೆ, ಇಂಥ ರೋಚಕತೆಗೆ ಯಾವ ಬೌಂಡರಿ ಎಂದು ಕೇಳುತ್ತಿದ್ದಾರೆ ಮಿಸ್ ಸೋಸಿಲಿ!
*
ನಾರಾಯಣ ಹೃದಯಾಲಯದವರು ಜೇಬಿನೊಳಗೇ ಇಟ್ಟುಕೊಂಡು ತಿರುಗಬಲ್ಲ ಹೃದಯ ಕಂಡುಹಿಡಿದಿದ್ದಾರಂತೆ. ಕಳಕೊಂಡು ‘ಚೋರಿಯಾಗಿದೆ ನನ್ನ ದಿಲ್’ ಅಂತ ಪೊಲೀಸರಿಗೆ ಕಂಪ್ಲೇಂಟ್ ಕೊಟ್ರೆ ಅವರು ಹುಡುಕೋದ್ ಬಿಟ್ಟು ‘ಮದ್ವೆ ಮಾಡಿಸ್ತಿವಿ ಬಿಡಿ’ ಅಂತ ಕುಂತರೆ ಮಾತ್ರ ಕಷ್ಟ!

3 comments:

Anonymous said...

ಮುದುಕರ ಮದುವೆ! ಅದಕ್ಕೇ ಇರ್ಬೇಕು ಅಂಗಡಿಗಳಲ್ಲಿ ವಯಾಗ್ರ ಸಿಗ್ತಾನೇ ಇಲ್ಲ! ಮುದುಕ್ರೆಲ್ಲಾ ಎಲ್ಲಾ ವಾಗ್ರ ತಗೊಂಡು ಮನೆಗಳಲ್ಲಿ ಸ್ಟಾಕ್ ಮಾಡ್ಕೊಂತಾ ಅವ್ರೆ ಅಂತ ಕಾಣುತ್ತೆ!

Anonymous said...

Hello. This post is likeable, and your blog is very interesting, congratulations :-). I will add in my blogroll =). If possible gives a last there on my blog, it is about the SBTVD, I hope you enjoy. The address is http://sbtvd.blogspot.com. A hug.

ರಾಧಾಕೃಷ್ಣ ಆನೆಗುಂಡಿ. said...

ಇದು ದುರಂತ ಮುದುಕರ ಮದುವೆ ಕಾಡಿದೆ ನಿಮಗೆ. ಮಗ ಪ್ರದಾನ ಮಂತ್ರಿಯಾಗಲಿ ಎಂದು ಮಾಜಿ ಪ್ರಧಾನಿಯೊಬ್ಬರು ಮಗನಿಗೆ ಎರಡನೆ ಮದುವೆ ಮಾಡಲು ಹೊರಟಿದ್ದಾರಂತೆ