ನಾನೇನೂ ಹುಟ್ಟುತ್ತಲೇ ಹೀಗಿರಲಿಲ್ಲ
ಪರಿಸ್ಥಿತಿಯ ಒತ್ತಡಕೆ ಸಿಲುಕಿ ಹೀಗೆ
ಸಂಭಾವಿತನಾಗಿರುವೆ ಅಷ್ಟೆ
ತೀಟೆ ತಿನುವ ಕೈಗಳನು
ಅಡಗಿಸಿರುವೆ ಸಫಾರಿ ಜೇಬಿನಲಿ
ಬೇಟೆ ಹುಡುಕೋ ಕಣ್ಗಳನು
ಕಪ್ಪು ಕನ್ನಡಕದ ಮರೆಯಲಿ
ವಿಧಿ ಇಲ್ಲದೆ ಸುಮ್ಮನಿರುವೆ
ಕತ್ತಲಾಗಲೆಂದು ಕಾಯುತಿರುವೆ
ಹಣ್ಣು ಹಣ್ಣು ಮುದುಕನ ಕಣ್ಣು ಕೀಳಬಲ್ಲೆ
ಹಾಲು ಕುಡಿವ ಪಾಪುವ ರೇಪು ಮಾಡಬಲ್ಲೆ
ಎಂಥ ನಿರ್ಗತಿಕನನೂ ಮತ್ತೆ ದೋಚಬಲ್ಲೆ
ಜೀವದ ಗೆಳೆಯನ ಜೀವಕೂ ಕೈಯ ಚಾಚಬಲ್ಲೆ
ತಡೆಯುತಿರುವುದು ಸಿಕ್ಕಿ ಬೀಳುವ ಒಂದೇ ಭಯಕೆ
ಅದಕಾಗೇ ಧರಿಸಿರುವೆ ಸಂಭಾವಿತ ಹಗಲು ವೇಷ
ರಾತ್ರಿಯಾದರೆ ಹೆಡೆ ಎತ್ತುವವು ಹಾವಿನಂಥ ಬಯಕೆ
ಸುಪಾರಿ ಯಾಕೆ ಬೇಕು ನನ್ನ ಸ್ಥಾಯಿಭಾವ ದ್ವೇಷ
ಎಂಥ ನಿರ್ಜನ ರಾತ್ರಿ ತಾರೆಯೂ ಇಲ್ಲದ ಆಕಾಶ
ಒಬ್ಬಳೇ ನಿಂತಿರುವಳು ಸಿಕ್ಕೀತೆ ಇಂಥ ಅವಕಾಶ
ಎಲೆ ಹೆಣ್ಣೆ ಕಾಣುತಿರುವುದೆ ನನ್ನ ಕೈಯ ಚಾಕು
ಕೊಲೆಯೊ ರೇಪೊ ಹೇಳು ಮೊದಲು ಏನು ಬೇಕು?
ಓ ನಿನ್ನ ಕೈಲೂ ಉಂಟೆ ಗುಂಡು ತುಂಬಿದ ಗನ್ನು
ಹಾಗಾದರೆ ನಮ್ಮ ಪಾಡಿಗೆ ನಾವು ಹೋಗಬೇಕಿನ್ನು
ಮತ್ತೆ ಸಿಗೋಣ, ಒಬ್ಬರ ಬಳಿ ಮಾತ್ರ ಇದ್ದಾಗ ಬಾಕು
ಬರಲೆ? ಬೆಳಗ್ಗೆ ಬೇಗ ಎದ್ದು ಆಫೀಸಿಗೆ ಹೋಗಬೇಕು
3 comments:
ಅಪಾರ ಅವರೇ,
ನಿಮ್ಮ ಈ ಕವನ ಅಪರಂಪಾರವೇ ಆಗಿದೆ.
ಚೆನ್ನಾಗಿ ಬರೆಯುತ್ತೀರಿ;
ನಿಮ್ಮ ಲಹರಿ ಸಾಗಲಿ
ಯಾರೆಲ್ಲರ ಮನಗಳು ಗರಿಗೆದರಲಿ
-ರೈಟರ್ ಶಿವರಾಂ
ನನ್ನಬ್ಲಾಗ್ ರೋಲ್ ಗೆ ಸೇರ್ಪಡೆ ಮಾಡಿರುವೆ ನೋಡಿ
http://ritertimes.com
ಮದ್ಯಸಾರದಿಂದ ನಮ್ಮನ್ನು ವಂಚಿತರನ್ನಾಗಿ ಮಾಡಿದ ನೋವನ್ನು ಮರೆಯುವುದಕ್ಕೆ ಈ ಕವನಗಳು ಸಹಕಾರಿಯಾಗಿವೆ. ಅಪಾರವಾಗಲಿ ನಿಮ್ಮ ಈ ಕೆಲಸ.
http://uniquesupri.wordpress.com/
Raghu, you are better poet can write much better than this. Bit disappointed.
Post a Comment