ಖುಷಿಯ ವಿಷಯವೆಂದರೆ ಈ ಪದ್ಯಗಳೆಲ್ಲಾ ಪುಟ್ಟ ಪುಸ್ತಕ ರೂಪದಲ್ಲಿ ಬರುತ್ತಿವೆ. ಪ್ರಕಟಿಸುತ್ತಿರುವುದು ಗೆಳೆಯ ವಸುಧೇಂದ್ರ. ಪ ಸ ಕುಮಾರ್ ಕವಿತೆಗಳಿಗೆ ಮತ್ತಷ್ಟು ನಶೆ ಏರಿಸುವಂಥ ಅದ್ಭುತ ರೇಖಾಚಿತ್ರಗಳನ್ನು ಕೊಟ್ಟಿದ್ದಾರೆ.(ಸೆರೆ ನನ್ನದು ಗೆರೆ ಅವರದು!) ಮುಖಪುಟಕ್ಕೆ ಬಳಸಿಕೊಂಡಿರುವ ಅವರದೊಂದು ಚಿತ್ರದಲ್ಲಿ ಕುಡುಕನೊಬ್ಬ ಬಾಟಲಿಗಳ ರಾಶಿಯ ಮೇಲೇ ಕಲ್ಪಿಸಲಾಗದ ಸುಖದಲ್ಲಿ ಮಲಗಿಕೊಂಡಿದ್ದಾನೆ! (ಗೆಳೆಯನೊಬ್ಬ ಅದನ್ನು 'ಸೆರೆ'ಶಯ್ಯೆ ಅಂದ. ಮತ್ತೊಬ್ಬರು 'ಶೀಷಶಾಯಿ' ಎಂದರು. ನೀವು 'ಶೀಷಾಸನ' ಅಂದರೂ ಹೊಂದುತ್ತೆ!).
ಇಷ್ಟು ದಿನ ಬ್ಲಾಗಿಗೆ ಬಂದು ಈ ಪದ್ಯಗಳನ್ನು ಓದಿದ ನಿಮಗೆಲ್ಲರಿಗೂ ವಂದನೆಗಳು. ಮುಂದಿನ ಭಾನುವಾರ 13ನೇ ತಾರೀಖು ಬೆಳಗ್ಗೆ 10.30ಕ್ಕೆ ಬಸವನಗುಡಿಯ ವರ್ಲ್ಡ್ ಕಲ್ಚರ್ ಇನ್ಸ್ಟಿಟ್ಯೂಟ್‌ನಲ್ಲಿ ಇತರ ಎರಡು ಪುಸ್ತಕಗಳೊಂದಿಗೆ ಮದ್ಯಸಾರವೂ ಬಿಡುಗಡೆಯಾಗಲಿದೆ. ಬಿಡುವು ಮಾಡಿಕೊಂಡು ಬನ್ನಿ.
ಯಾವ ಮಾಯದಲ್ಲೊ
ಮುಗಿದುಹೋಯ್ತಲ್ಲ
ಇಡೀ ಬಾಟಲ್ ವಿಸ್ಕಿ
ಅರೆ ಇಸ್ಕಿ!
2 comments:
Well then 'three cheers'
for the book da...........
:-)
MS
aparare,
madya saara ottayawagi munduwaresOdu bEDa.
Adare, matte bareyuva tuDita ShuruvAdare avoid mADabeDi annOdu nanna ottAya!
bareetiri, please...
- Chetana
Post a Comment