1
ಎಲ್ಲೋ ಒಮ್ಮೆ ಅಪರೂಪಕ್ಕೆ
ತೆರೆಯುತ್ತಣ್ಣ ಮನದ ರೆಕ್ಕೆ
ಕುಡಿದಾಗೆಲ್ಲ ತೇಲಾಡ್ಲಿಕ್ಕೆ
ಆಗಲ್ಲಣ್ಣ, ಅದೂ ಲಕ್ಕೇ
2
ಬೇಕಾಬಿಟ್ಟಿ ಕುಡಿತಾ ಹೋದ್ರೆ
ಬದುಕೇ ಸರ್ವನಾಶ
ಮನಸುಕೊಟ್ಟು ಕುಡಿದು ನೋಡಿ
ಶೀಷದಲ್ಲೂ ಈಶ
3
ಬೇಡ್ಕೊಂತೀನಿ ಬಾರಂಗಳದಲಿ
ನೆರೆದಿರುವ ಸಮಸ್ತ ಜನಕೆ
ಕುಡಿದು ಮಾಡದಿರಿ ಉಪದ್ರವ
ಕಳೆಯಬೇಡಿ ದ್ರವದ ಘನತೆ
4
ದೊಡ್ಡ ನೋವ ಹೀರಿಕೊಳುವ
`ದ್ರವ'ತಾರೆ ಹೆಂಡ
ಸಣ್ಣತನವ ಕಾರಿಕೊಳಲು
ಕುಡಿವನೆಂಥ ಭಂಡ?
5
ಬಿಟ್ಟು ಹೊರಟಾಗ ಮನ ಅರಚಿತ್ತು
ಎದೆಯ ತುಂಬೆಲ್ಲಾ ಕಾಟು ಚಿತ್ತು
ತಿರುಗಿ ಬಂದಾಗಾಕೆ ನಾ ಕುಡಿದು ಚಿತ್ತು
ಬಾಟಲೆದುರು ಪ್ರೇಮ ಯಕಃಶ್ಚಿತ್ತು
2 comments:
ನಿಮ್ಮ 'ಮದ್ಯಸಾರ'ದ ರೌಂಡು ಏರ್ತಾ ಇರೋಹಾಗೆ ನನಗೂ ಕಿಕ್ ಏರ್ತಾ ಇದೆ ರಘು! ನಾನೀಗ ನಿಮ್ಮ ಪದ್ಯ ವ್ಯಸನಿ.
raag dar'bar'i??
:-)
Malathi S
Post a Comment