Thursday, November 15, 2007
ಮದ್ಯಸಾರ- ಆರು
ಕುಡುಕನ ಮಾತಿವು ಏನು ಕೇಳುವಿರಿ
ವಚನದ ಸಾಲಲ್ಲ, ವಾಚನವೂ ಸರಿ ಇಲ್ಲ
ದಾಸರ ಪದವಲ್ಲ, ಉದಾಸರ ಪದವೆ ಎಲ್ಲ
ಭಜನೆ ತರಹದವಲ್ಲ, ವಿಭಜನೆ ವಿರಹದವು
*
ಹೆಂಡತಿಗೆ ಹೊಡೆಯುತ್ತೇವೆಂಬುದು ಹಸೀ ಸುಳ್ಳು
ದುಃಖವಾದಾಗ ಒಂದಿಷ್ಟು ಎಣ್ಣೆ ಹೊಡೆಯುವುದು ನಿಜ
ಪುಕಾರು ಮಾಡುವಿರೇಕೆ ನಡತೆ ಸರಿ ಇಲ್ಲೆಂದು
ಕುಡಿದಾಗ ಒಂದಿಷ್ಟು ಹೆಜ್ಜೆ ತಪ್ಪುವುದು ನಿಜ
*
ಮದ್ಯದ ಸೆಷನ್ನು ಯಾವತ್ತೂ ಅಪೂರ್ಣವೇ
ಮಧ್ಯದಲ್ಲೇ ಏಳಬೇಕು ತುಂಬಿದ್ದರೂ ಬಟ್ಟಲು
'ಕ್ವಾರ್ಟರ್' ಫೈನಲ್ಲೇ ಇಲ್ಲಿ ಕೊನೆಯ ರೌಂಡು
ಮುಗಿಸಲೇಬೇಕೀಗ ಸೇಫಾಗಿ ಮುಟ್ಟಲು
*
ಗುಂಡು ಹಾಕುವುದು ತಪ್ಪು
ಎಣ್ಣೆ ಹೊಡೆಯುವುದು ತಪ್ಪು
ಡ್ರಿಂಕ್ಸ್ ಮಾಡುವುದು ತಪ್ಪು
ನೈಂಟಿ ತಗಳುವುದು ತಪ್ಪು
ಮದ್ಯವನ್ನು ಕುಡಿಯುವುದೇ ಸರಿ!
*
ಒಂಟಿ ಬಾಳನೂ ಸವೆಸಿಬಿಡಬಹುದು
ತಪಿಸಲೊಂದು ಸಿಗದ ಪ್ರೇಮವಿದ್ದರೆ
ಇರಿಯುವ ದುಃಖವೂ ಹಿತವಾದ ನೋವು
ಎರಡೇ ಎರಡು ಪೆಗ್ಗು ಒಳಗೆ ಬಿದ್ದರೆ
(ಈ ಕುಡುಕನ ಪದಗಳನ್ನು ಮೆಚ್ಚಿ ಬರೆದ 'ಅವಧಿ' ಬ್ಲಾಗ್‌ಗೆ ಕೃತಜ್ಞತೆ)
Subscribe to:
Post Comments (Atom)
6 comments:
bareyuvudaare apara
innu mundhe idanne bareyali
emma manadangalakkoo
ondu bar tarali…
'bar bar' idanne bare
bar sigadiddarenante?
'bear'nalle ide sudhe...
kelu 'hani' mitra apara
'hani'gavanakke nee kotta artha
apara
kavyalokakke sannadenu ninna koduge?
hanigavana odida nantara ellaroo tapputtare hejje..
ಕುಡ್‌ದ್ರೆ ಮದ್ಯ, ಯಾರ್ ಬರಿಯಲ್ಲ ಪದ್ಯ?
ನಡೀತಿರ್‍ಲಿ ಈ ಪದ್ಯ-ಗದ್ಯ,ಮಧ್ಯ ಮದ್ಯ!
ಮಧ್ಯದಿಂದ ಶುರುಮಾಡಿದೆ ಮದ್ಯಸಾರ ಓದಲು. ಈಗ ಮಧ್ಯ ಮಧ್ಯ ಭೇಟಿ ಕೊಡಲೇಬೇಕಾಗಿದೆ. ಯಾಕೆಂದರೆ ನಾನೀಗ ಮಧ್ಯ 'ಮದ್ಯವ್ಯಸನಿ'
ಮಧ್ಯಸಾರ- ಆರು ....wow ಅಪಾರವಾದ ಕಾರ ಬಾರು
:-)
malathi S
ಮಾರಾಯಾ, ರಘು
ಮದ್ಯ ಕುಡೀದೇ ಹೀಗ್ ಬರೀತೀಯಲ್ಲ. ಪರವಾಗಿಲ್ಲ. "ಮದ್ಯ ಸಾರ’ ಹೀಗೆ ಸುರೀತಿರ್ಲಿ.
ನಾವಡ
Post a Comment