

ಜಯಂತ ಕಾಯ್ಕಿಣಿಯವರ `ಶಬ್ದತೀರ' ಅಂಕಣ ಬರಹ ಸಂಗ್ರಹಕ್ಕೆ ಪುಸ್ತಕ ಪ್ರಾಧಿಕಾರದ `ಪುಸ್ತಕ ಸೊಗಸು' ಬಹುಮಾನ(ಮೂರನೇ ಸ್ಥಾನ) ಬಂದಿದೆ. ಪುಸ್ತಕದ ಒಪ್ಪ ಓರಣಗಳನ್ನು (ಮುಖಪುಟ, ಒಳಪುಟ ವಿನ್ಯಾಸ, ಕಾಗದ ಗುಣಮಟ್ಟ ಇತ್ಯಾದಿ)ಪರಿಗಣಿಸಿ ನೀಡಲಾಗುವ ಬಹುಮಾನವಿದು. ಶಬ್ದತೀರದ ವಿನ್ಯಾಸ ನನ್ನದಾದರೂ ಕಾಯ್ಕಿಣಿಯವರ ಕಾಣಿಕೆಯೇ ಹೆಚ್ಚು. ರೇಖಾಚಿತ್ರ ನೀಡಿದ ಇಕ್ಬಾಲ್ ಅವರಿಗೆ ಥ್ಯಾಂಕ್ಸ್.
ಮೊದಲ ಸ್ಥಾನ ಗಳಿಸಿದ 'ಪಕ್ಷಿ ಪ್ರಪಂಚ' ಹಾಗೂ ಎರಡನೇ ಸ್ಥಾನ ಗಳಿಸಿದ `ಚಾಚಾ ನೆಹರೂ ಮತ್ತು...' ಪುಸ್ತಕಗಳ ಮುಖಪುಟಗಳನ್ನೂ ಇಲ್ಲಿ ಕೊಟ್ಟಿದ್ದೇನೆ. ನಾಲ್ಕನೇ ಬಹುಮಾನ ಗಳಿಸಿದ `ಗುಬ್ಬಿಯ ಸ್ವರ್ಗ' (ಭಾಗೀರಥಿ ಹೆಗಡೆ ಕವಿತಾ ಸಂಗ್ರಹ)ಪುಸ್ತಕದ ಮುಖಪುಟ ನಿಮಗೇನಾದರೂ ಸಿಕ್ಕರೆ ದಯವಿಟ್ಟು ನನಗೆ ಇ ಮೇಲ್ ಮಾಡಿ:
raghuapara@gmail.com . ಇವುಗಳ ಜತೆ ಸೇರಿಸುತ್ತೇನೆ.