ಮೂರು ಮುಷ್ಠಿಯ ಬದುಕು ಪುಸ್ತಕದ ಫೋಟೊ ಗೆಳತಿ ಸೌಮ್ಯ ಕಲ್ಯಾಣ್‌ಕರ್ ತೆಗೆದದ್ದು, ಶಾಮಣ್ಣ ಪುಸ್ತಕದ್ದು ನಾನು ಗೋಕರ್ಣದಲ್ಲಿ ತೆಗೆದದ್ದು...ವಿಜಯ ವಿದ್ಯಾರ್ಥಿಯ ಚಿತ್ರ ಒಂದು ಸಣ್ಣ ಕಪ್ಪು ಬಿಳುಪು ರೇಖಾಚಿತ್ರವನ್ನು ಆಧರಿಸಿದ ಮರುರಚನೆ.
ನಮಸ್ಕಾರ...ಫೇಸ್‌ಬುಕ್ಕಿನೊಳಗೆ ಸಿಲುಕಿ ಇಷ್ಟು ದಿನ ಬ್ಲಾಗು ಅಪ್‌ಡೇಟು ಮಾಡದೆ ಸೋಮಾರಿಯಾಗಿ ಕುಳಿತಿದ್ದೆ. ಆಗಾಗ ನೆನಪಿಸುತ್ತಿದ್ದ ಹಿತೈಶಿಗಳನ್ನು ನೆನೆಯುತ್ತಾ ಬಹಳ ದಿನಗಳ ನಂತರ ಮತ್ತೆ ಬ್ಲಾಗಿಲು ತೆರೆದಿದ್ದೇನೆ...ಪ್ರೀತಿ ಇರಲಿ ಮೊದಲಿನಂತೇ... ಕಥಾಸಂಚಯ ಪುಸ್ತಕದ ಫೋಟೊ: ಸೌಮ್ಯ, ಹೂವಿನ ಸುಗ್ಗಿ ಮುಖಪುಟದ ರೇಖಾಚಿತ್ರ: ಪ ಸ ಕುಮಾರ‍್
ಮುಖಪುಟ ವಿನ್ಯಾಸಗಳ ನಡುವೆ ಈಚೆಗೆ ಕನ್ನಡಪ್ರಭಕ್ಕೆ ಪ್ರಕಟಣಾ ಜಾಹಿರಾತುಗಳನ್ನು ರೂಪಿಸುವ ಕೆಲಸವೊಂದು ಸಿಕ್ಕಿತು. ಹೊಸ ಅಂಕಣಗಳು ಶುರುವಾಗುವಾಗ ಓದುಗರಿಗೆ ಕುತೂಹಲ ಹುಟ್ಟುವಂತೆ ಐಡಿಯಾ ಮಾಡುವ ಈ ಕೆಲಸ ನನ್ನ ಮೆಚ್ಚಿನದು.(ಭಾವನಾ ಮತ್ತು ವಿಜಯಕರ್ನಾಟಕದಲ್ಲಿದ್ದಾಗಲೂ ಹಲವು ಬಾರಿ ಈ ಕೆಲಸ ಮಾಡಿದ್ದೆ.) ಈ ಸಲ ಐಡಿಯಾ ಜತೆಗೆ ವಿನ್ಯಾಸವನ್ನೂ ಮಾಡಿರುವುದು ವಿಶೇಷ. ನಿಮ್ಮ ಹೊಗಳಿಕೆ ಮತ್ತು ಹೊಗಳಿಕೆ-ಎರಡಕ್ಕೂ ಸ್ವಾಗತ!!!
ನೂರೆಂಟು ಮಾತು ಅಂಕಣಕ್ಕೆ
ಓದುಗರ ಸಂಖ್ಯೆ ಹೆಚ್ಚಿದ ವರದಿ ಬಂದಾಗ...
ವಕ್ರತುಂಡೋಕ್ತಿ ಅಂಕಣದತ್ತ ಗಮನ ಸೆಳೆಯಲು ತಪ್ಪಾಯ್ತು ತಿದ್ಕೋತೀವಿ ಅಂಕಣದ ಶುರುವಿಗೆ