ಕೆಲವರಿಗೆ ಕೇಳಲು ಸಾಧ್ಯವಾಗುತ್ತಿಲ್ಲವೆಂದು ಕಮೆಂಟುಗಳು ಬರುತ್ತಿವೆ. ಈ ಲಿಂಕ್ ಪ್ರಯತ್ನಿಸಿ ನೋಡಿ.
Saturday, April 24, 2010
ಅಣ್ಣನ ಹುಟ್ಟುಹಬ್ಬ- ಕಾಡುವ ನೆನಪು
ರಾಜ್‌ಕುಮಾರ್ ಇಲ್ಲದೆ ಇನ್ನೊಂದು ವರ್ಷ ಕಳೆದಿದೆ. ಯಾಕೋ ದಿನದಿಂದ ದಿನಕ್ಕೆ ಅವರನ್ನು ಹೆಚ್ಚೆಚ್ಚು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎನಿಸುತ್ತದೆ. ಅವರ ನನ್ನ ಮನಸಿನ ಇಷ್ಟೊಂದು ಮುಖ್ಯ ಭಾಗವಾಗಿದ್ದರು ಎಂದು ಅರಿವಾಗುತ್ತಾ ಆಶ್ಚರ್ಯವೂ ಎನಿಸುತ್ತದೆ. ರಾಜ್‌ಕುಮಾರ್ ಎಂಬ ಚೇತನಕ್ಕೆ ಪ್ರೀತಿಯಿಂದ ನಮಿಸುತ್ತಾ ಇಲ್ಲಿ ಅವರ ರೇಡಿಯೊ ಸಂದರ್ಶನವೊಂದನ್ನು ಕೊಟ್ಟಿದ್ದೇನೆ. ಒಂದುಗಂಟೆ ಅವಧಿಯ ಈ ಲಿಂಕ್‌ನಲ್ಲಿ ಎರಡು ಸಂದರ್ಶನಗಳಿವೆ. ಎರಡನೇಯದರಲ್ಲಿ ರಾಜ್ ಗೋಕಾಕ್ ಚಳವಳಿಯ ನೆನಪುಗಳನ್ನು ಸ್ವಾರಸ್ಯವಾಗಿ ಹಂಚಿಕೊಂಡಿದ್ದಾರೆ. ಅವರಲ್ಲಿರುವ ಮುಗ್ದತೆಯನ್ನೂ ಈ ಮಾತುಗಳಲ್ಲಿ ಕಾಣಬಹುದು. ಜೇನುಗಳು ಕಡಿದು ಎಲ್ಲರ ಮೂತಿ ಆಂಜನೇಯನ ಥರ ಆಗಿದ್ದು, ಸಾಗರದಲ್ಲಿ ಮಳೆಯ ನಡುವೆಯೂ ಸೇರಿದ ಕೊಡೆ ಹಿಡಿದು ಸೇರಿದ್ದ ಜನಸಾಗರ.....ಕೊನೆಯಲ್ಲಿ ವಾದ್ಯಗಳ ನೆರವಿಲ್ಲದೆ ರಾಜ್ ಹಾಡಿರುವ ಹಾಡುಗಳನ್ನೂ ಕೇಳಿ ಆನಂದಿಸಿ.
Subscribe to:
Post Comments (Atom)
3 comments:
ಅಪಾರ,
ಒಂದು ತಾಸು ನಿರಂತರವಾಗಿ ಅಣ್ಣಾವ್ರ ಮಾತುಗಳನ್ನು ಕೇಳಿದೆ. ಸಂತೋಷದಿಂದ ಕಣ್ಣಲ್ಲಿ ನೀರು ಬಂತು. ಆ ವಿನಯ, ಆ ಮುಗ್ಧತೆ, ಆ ಪ್ರಾಮಾಣಿಕತೆ, ಆ ಕನ್ನಡಪ್ರೇಮ - ಒಂದಿಷ್ಟಾದರೂ ನಮಗೆ ಒಲಿಯಲಿ. ಇಂತಹ ಒಳ್ಳೆಯ ಧ್ವನಿಸುರಳಿಯನ್ನು ಕೇಳಿಸಿದ್ದಕ್ಕೆ ನಿನಗೆ ನೂರು ವಂದನೆಗಳು.
ವಸುಧೇಂದ್ರ
I couldnt find the link, apara.
Guru
Apaara avare,
Link kaanistilla.....
Sandhya, Sec'bad
Post a Comment