ಅವರಿಗೆ ಥ್ಯಾಂಕ್ಸ್. ಇಲ್ಲಿ ಅದರ ವಿವರಗಳಿವೆ.
ವಿಭಾ ಸಾಹಿತ್ಯ ಪ್ರಶಸ್ತಿ
ಕನ್ನಡದ ಪ್ರತಿಭಾನ್ವಿತ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ `ವಿಭಾ ಸಾಹಿತ್ಯ ಪ್ರಶಸ್ತಿ'ಯನ್ನು ಈ ವರ್ಷದಿಂದ ಆರಂಭಿಸಲಾಗಿದೆ. ಇದಕ್ಕಾಗಿ ಯಾವುದೇ ವಯಸ್ಸಿನ ನಿರ್ಬಂಧವಿಲ್ಲದೇ ಕನ್ನಡದ ಕವಿ/ಕವಯಿತ್ರಿಯರ ಕವಿತೆಗಳ ಹಸ್ತಪ್ರತಿಯನ್ನು ಆಹ್ವಾನಿಸಲಾಗಿದೆ. ಹಸ್ತಪ್ರತಿಯಲ್ಲಿ ಕನಿಷ್ಟ ೩೦ ಕವಿತೆಗಳಿರಬೇಕು.
ಪ್ರಶಸ್ತಿಯು ರೂ. ೫೦೦೦/- ನಗದು ಬಹುಮಾನವನ್ನು ಒಳಗೊಂಡಿರುತ್ತದೆ.
ಪ್ರಶಸ್ತಿ ವಿಜೇತ ಹಸ್ತಪ್ರತಿಯನ್ನು ಗದುಗಿನ ಲಡಾಯಿ ಪ್ರಕಾಶನದಿಂದ ಪ್ರಕಟಿಸಿ, ೨೭-೯-೨೦೧೦ ರಂದು ವಿಭಾ ಹುಟ್ಟಿದ ದಿನವೇ ಬಿಡುಗಡೆಗೊಳಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭ ಕೂಡ ಆಯೋಜಿಸಲಾಗುವುದು.
ಹಸ್ತಪ್ರತಿ ಕಳುಹಿಸಲು ಕೊನೆಯ ದಿನಾಂಕ: ೧೫ ಜುಲೈ ೨೦೧೦.
ಹಸ್ತಪ್ರತಿಯನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡಬೇಕಾಗಿ ವಿನಂತಿ.
ಪ್ರಕಾಶ ಮತ್ತು ಸುನಂದಾ ಕಡಮೆ,
ಸಂಚಾಲಕರು, `ವಿಭಾ ಸಾಹಿತ್ಯ ಪ್ರಶಸ್ತಿ'
ನಂ. ೯೦, ನಾಗಸುಧೆ, ಕಾಳಿದಾಸನಗರ,
ವಿದ್ಯಾನಗರ ವಿಸ್ತರಣೆ, ಹುಬ್ಬಳ್ಳಿ-೫೮೦೦೩೧.
ದೂರವಾಣಿ:೦೮೩೬-೨೩೭೬೮೨೬, ೯೮೪೫೭೭೯೩೮೭.
4 comments:
ಸುನಂದಾ ಮತ್ತು ಪ್ರಕಾಶ,
ಎಷ್ಟೊಂದು ಒಳ್ಳೆಯ ಕೆಲಸ ಮಾಡುತ್ತಿದ್ದೀರ. ನಿಮ್ಮ ಈ ಕೆಲಸಕ್ಕೆ ಒಳ್ಳೆಯ ಪ್ರತಿಕ್ರಿಯೆ ದೊರಕಲಿ. ಉತ್ತಮ ಕವಿತೆಗಳು ನಿಮಗೆ ದಕ್ಕಲಿ.
ಪ್ರೀತಿಯಿಂದ,
ವಸುಧೇಂದ್ರ
commendable!!!
:-)
malathi S
ಹೆಸರು ಕೇಳುತ್ತಲೇ ಗೆಳತಿಯಾಗಿಸ್ಕೊಂಡಿದ್ದ ಹುಡುಗಿ ವಿಭಾ. ಅವಳ ನೆನಪಲ್ಲಿ ಸುನಂದಾ ಮತ್ತು ಪ್ರಕಾಶರು ಈ ಕೆಲಸ ಕೈಗೆತ್ತಿಕೊಂಡಿರೋದು ಬಹಳ ಖುಷಿ ಅನಿಸುತ್ತಿದೆ.
ನಲ್ಮೆ,
ಚೇತನಾ
vibha wavelength ge samipaviruva kavitegalu sigali. anthavarige prashasti dorakuvantagali.
Mahipalreddy munnur
9611365002
sedam-dist:gulbarga.
Post a Comment