




ವಿಜಯಕರ್ನಾಟಕದ ಪರ್ತಕರ್ತ, ಗೆಳೆಯ ರಾಧಾಕೃಷ್ಣ ಭಡ್ತಿ ಈ ಭಾನುವಾರ ತಮ್ಮ ಐದು ಪುಸ್ತಕಗಳನ್ನು ಹೊರತರುತ್ತಿದ್ದಾರೆ. ‘ನೀರು-ನೆರಳು’ ಎಂಬ ಹೆಸರಿನ ಅವರ ಅಂಕಣ ಬರಹಗಳೇ ಈಗ ಪುಸ್ತಕರೂಪದಲ್ಲಿ ಬರುತ್ತಿವೆ. ಅಂಕಣಕಾರರಾಗಿದ್ದ ಭಡ್ತಿ ಈಗ ಪುಸ್ತಕಕಾರರಾಗಿ ಭಡ್ತಿ ಹೊಂದಿದ್ದಾರೆ. ಜಗತ್ತನ್ನು ಹೊತ್ತಿ ಉರಿಸಬಲ್ಲ ಜನಪ್ರಿಯ ಸಂಗತಿಗಳನ್ನೆಲ್ಲ ಕೈಬಿಟ್ಟು ತಣ್ಣಗೆ ನೀರಿನ ಬಗ್ಗೆ ಬರೆಯುತ್ತಾ ಆರು ವರ್ಷ ಪೂರೈಸಿರುವ ಅವರ ಏಕಾಗ್ರತೆ ಮೆಚ್ಚುವಂಥದ್ದು. ಭಾನುವಾರ ಬೆಳಗ್ಗೆ ಗಾಯನ ಸಮಾಜದ ಎದುರಿರುವ ಕುವೆಂಪುಕಲಾಕ್ಷೇತ್ರದಲ್ಲಿ ಈ ಕಾರ್ಯಕ್ರಮ. ಬನ್ನಿ.
ಈ ಮುಖಪುಟಗಳಲ್ಲಿ ಮೇಘಮೇದಿನಿ ಪುಸ್ತಕದ ಕಲಾಕೃತಿ ಬಿಕೆಎಸ್ ವರ್ಮಾ ಅವರದು. ಇತರ ಪುಸ್ತಕಗಳಿಗೆ ಬಳಸಿರುವ ಫೋಟೊಗಳು ಸಂಗ್ರಹಚಿತ್ರಗಳು.
1 comment:
ಒಂದಕ್ಕಿಂತ ಒಂದು ಚೆನ್ನಾಗಿದೆ.. ಸೂಪರ್...
Post a Comment