Monday, October 20, 2008

ರೈಲು ಲೇಟು!

ತಡವಾಗಿದೆ, ಟ್ರೈನು ಮಿಸ್ ಆಗುತ್ತೆ ಎಂಬ ಆತಂಕದಲ್ಲಿದ್ದರೆ ಒಂದು ನಿಮಿಷ ನಿಲ್ಲಿ. ಹಂಪಿ ಎಕ್ಸ್‌ಪ್ರೆಸ್ ತಡವಾಗಿ ಆಗಮಿಸುತ್ತಿದ್ದು ನಿಮಗೆ ಇನ್ನು ಸ್ಪಲ್ಪ ಸಮಯಾವಾಕಾಶ ದೊರೆತಿದೆ. ಖುಷಿಯ ವಿಷಯವಲ್ಲವೆ?
ಹೌದು. ಬರುತ್ತಲೇ ಇರುವ ಮುಖಪುಟಗಳು, ಎಳೆಯರಿಂದ ಗೆಳೆಯರವರೆಗೆ ಎಲ್ಲರೂ ತೋರುತ್ತಿರುವ ಉತ್ಸಾಹ, ಇನ್ನೊಂದಿಷ್ಟು ಸಮಯ ಬೇಕು ಎಂಬ ಒತ್ತಾಯಗಳ ಕಾರಣ ಕಡೆಯ ದಿನಾಂಕವನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. ಈಗ ನಿಮಗೆ ಇನ್ನೂ ಹತ್ತು ದಿನ ಟೈಮ್ ಇದೆ. ಛಂದ ಮುಖಪುಟ ಸ್ಪರ್ಧೆಗೆ ನಿಮ್ಮ ವಿನ್ಯಾಸ ಕಳಿಸಲು ಹೊಸ ಕಡೆಯ ದಿನಾಂಕ: ಅಕ್ಟೋಬರ್ ೩೦. ಮತ್ತೊಂದು ವಿಸ್ತರಣೆ ಇಲ್ಲವೇ ಇಲ್ಲ ಎಂದು ಈಗಲೇ ಸ್ಪಷ್ಟಪಡಿಸುತ್ತಾ ನಿಮಗೆಲ್ಲಾ ಬೆಸ್ಟ್ ಆಫ್ ಲಕ್ ಹೇಳುತ್ತಿದ್ದೇವೆ.

8 comments:

Anonymous said...

ಈಗ ಅಲ್ಲಿ ಕಾಣ್ತಿರೋ ಮುಖಪುಟಗಳಲ್ಲಿ ಯಾವುದನ್ನು ಆಯ್ಕೆ ಮಾಡುವುದು ಎಂಬ ಗಲಿಬಿಲಿಯಲ್ಲಿ ನಿರ್ಣಾಯಕರು ಇದ್ದಾರೆ ಅಸ್ನುತ್ತೆ.. ನೀವ್ ಮತ್ತೆ ಇನ್ನು ೧೦ ದಿನಗಳ ಸಮಯ ಕೊಟ್ಟರೆ ಹೆಂಗೆ.. ಇದರ ಬದಲು ಮತ್ತೊಂದು ಪುಸ್ತಕ ಬರೆದು ಮತ್ತೊಂದು ಸ್ಪರ್ಧೆ ಏರ್ಪಡಿಸಬಹುದಲ್ವಾ?

Unknown said...

Dhanyavadagalu Raghu...creativity is all about hiding things...bye

Anonymous said...

ಪುಸ್ತಕದ ವಸ್ತುವಿನ ಬಗ್ಗೆ ಇನ್ನೂ ಹೆಚ್ಚಿನ ಸಾಲುಗಳಲ್ಲಿ ಹೇಳಿದ್ದರೆ
ಚೆನ್ನಾಗಿರ್ತಿತ್ತು.

ಶ್ರೀನಿಧಿ.ಡಿ.ಎಸ್ said...

ಒಂದು ಯೋಚನೆ:

ಕೆಲ ಚಿತ್ರಗಳು ಚೆನ್ನಾಗಿವೆ, ಕೆಲ ಫಾಂಟುಗಳು- ಕೆಲವು ಜೋಡಣೆಗಳು ಚೆನ್ನಾಗಿವೆ, ಹೀಗಿರುವ ಅವೆರಡನ್ನೂ ಮಿಕ್ಸ್ ಮಾಡಿ ಅತ್ಯುತ್ತಮ ಮುಖಪುಟ ರಚಿಸಬಾರದೇಕೆ?

ನನ್ ಮನೆ said...

ಶ್ರೀನಿಧಿ ನೀ ಹೇಳ್ದಂಗೆ ಮಾಡಿದ್ರೆ.. ಅದರಲ್ಲಿ ಸ್ಪರ್ಥೆ ಅನ್ನೋದು ಎಲ್ಲಿ ಇರುತ್ತೆ? ಒಂದು ಮುಖಪುಟದಲ್ಲಿ ಎಲ್ಲವೂ ಚೆನ್ನಾಗಿರಬೇಕು. ಆಗ ಅದು ಉತ್ತಮ ಮುಖಪುಟವಾಗುತ್ತದೆ.

ಆಲಾಪಿನಿ said...

ಅದೇ... ಶ್ರೀನಿಧಿಗೆ ನಾನೂ ಅದನ್ನೇ ಹೇಳಬೇಕು ಅಂತಿದ್ದೆ... ಸ್ಪರ್ಧೆ ಅನ್ನೋದನ್ನೆ ಮರೆಸಿಬಿಟ್ಟಿವೆ ಇಲ್ಲಿರೋ ಕವರ್‌ಪೇಜ್‌ಗಳೆಲ್ಲವೂ. ನೀವು ಹೇಳಿದ್ರಲ್ಲಿ ತಪ್ಪಿಲ್ಲ ಶ್ರೀನಿಧಿ ನನಗೂ ಹಾಗೇ ಅನ್ನಿಸಿದ್ದು. ನೀವು ಹೇಳಿಬಿಟ್ರಿ ನಾ ಹೇಳದೇ ಸುಮ್ಮನಿದ್ದೆ. ಯಾಕೆಂದ್ರೆ ಸ್ಪರ್ಧೆ ಅಂತ ನನಗೆ ನೆನಪಿನಲ್ಲಿತ್ತು... :)

ಆಲಾಪಿನಿ said...

ಅದೇ... ಶ್ರೀನಿಧಿಗೆ ನಾನೂ ಅದನ್ನೇ ಹೇಳಬೇಕು ಅಂತಿದ್ದೆ... ಸ್ಪರ್ಧೆ ಅನ್ನೋದನ್ನೆ ಮರೆಸಿಬಿಟ್ಟಿವೆ ಇಲ್ಲಿರೋ ಕವರ್‌ಪೇಜ್‌ಗಳೆಲ್ಲವೂ. ನೀವು ಹೇಳಿದ್ರಲ್ಲಿ ತಪ್ಪಿಲ್ಲ ಶ್ರೀನಿಧಿ ನನಗೂ ಹಾಗೇ ಅನ್ನಿಸಿದ್ದು. ನೀವು ಹೇಳಿಬಿಟ್ರಿ ನಾ ಹೇಳದೇ ಸುಮ್ಮನಿದ್ದೆ. ಯಾಕೆಂದ್ರೆ ಸ್ಪರ್ಧೆ ಅಂತ ನನಗೆ ನೆನಪಿನಲ್ಲಿತ್ತು... :)

chetana said...

idoLLe yashasvi spardheyAgi hOytu. nange yAva bageya cvr pg gaLu barabahudu annO kutUhalavittu. eega, nimma Aykeya bagge kutUhala!
- Chetana