Wednesday, August 13, 2008

ಅಪ್ಪಿ -ತಪ್ಪಿ

ಅಷ್ಟಲಕ್ಷ್ಮಿಯರನ್ನೆಲ್ಲಾ
ನೀವಾಳಿಸಿ ಎಸೆದ ಮೇಲೆ
ನನ್ನ ಇಷ್ಟಲಕ್ಷ್ಮಿ
ಮೂಡಿಬರುತಾಳೆ

ಥಳುಕಿಲ್ಲ ಬಳುಕಿಲ್ಲ
ಕತ್ತಲೊಳಗಿಂದ ತೇಲಿಬರುತಿರುವ
ನಿರಾಭರಣೆಯ
ಸೊಗಸೇ ಬೇರೆ

ಬಂದಳೆ ನಿಂದಳೆ
ತಬ್ಬಿದಳೆ ನನ್ನ ಸವರಿದಳೆ ಬೆನ್ನ
(ಅವಳ ಪರಿಮಳ ಅದೆಷ್ಟು ಚೆನ್ನ)
ಸುತ್ತ ಆವರಿಸಿದ ದಿವ್ಯ ಕತ್ತಲೂ ಉನ್ಮತ್ತ

ನನ್ನ ಎದೆಯಲ್ಲಿ ಬಿಟ್ಟ
ಅವಳ ಕಣ್ಣುಗಳಿಗದೇ ಕತ್ತಲು
ಅವಳ ಹೆಗಲ ಮೇಲೆ ಮುಚ್ಚಿದ
ನನ್ನ ಕಣ್ಣುಗಳಿಗೂ ಅದೇ ಕತ್ತಲು

ಬೆನ್ನ ಸಂತೈಸುತ್ತಿರುವ ಅವಳ
ಕಣ್ಣೊಳಗಿರಬಹುದು ಪ್ರೇಮದ ಬೆಳಕು
ಅಪ್ಪುಗೆಯಿಂದ ಹೊರಬಂದು
ಪರೀಕ್ಷಿಸುವ ಧೈರ್ಯವುಂಟೆ ನನ್ನಲಿ

ಮಿಸುಕಿದರೆ ಕರಗೀತು ಅಲುಗಿದರೆ ನಲುಗೀತು
ಉಸಿರಾಡಿದರೂ ಕಲಕೀತು ಈ ನನ್ನ ಜೀವದ ಚಿತ್ರ
ಹೇಗೆ ವಿವರಿಸಲಿ ಹೇಳು ನಿನಗೆ
ಕಳೆದುಕೊಳುವ ನೋವನ್ನು ಮಿತ್ರ

ಈ ಅದ್ಭುತ ಕ್ಷಣವೀಗ
ಜಾರಿ ಹೊರಬಿದ್ದಿದೆ ಕಾಲಚಕ್ರದಿಂದ
ಸೊಗಸಾದ ಒಂದು ಮೌನಬಿಂಬವಾಗಿ
ತೂಗಿದೆ ಅಂತರಿಕ್ಷದಲ್ಲಿ

ಇನ್ನು ಕೂಗದಿರಲಿ ಕೋಳಿ
ಆಗದಿರಲಿ ನಾಳೆ
ನನ್ನ ಪ್ರಾರ್ಥನೆಯೊಂದೆ:
ನಿನ್ನೊಲುಮೆ ನಮಗಿರಲಿ ತಂದೆ
ಕೈಹಿಡಿದು ನಡೆಸದಿರು ಮುಂದೆ!

8 comments:

Anonymous said...

ನಮಸ್ತೇ,

ಬರುವ ಸೋಮವಾರ ಹದಿನೆಂಟನೆ ತಾರೀಖು ಸಂಜೆ ಆರು ಗಂಟೆಗೆ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ ನನ್ನ ಪುಸ್ತಕ ‘ಭಾಮಿನಿ ಷಟ್ಪದಿ’ ಬಿಡುಗಡೆಯಾಗಲಿದೆ.

ಅವತ್ತು ಪ್ರೊ. ವಿವೇಕ್ ರೈ, ಜಿ.ಪಿ.ಬಸವ ರಾಜು ಅವರು ವೇದಿಕೆಯಲ್ಲಿರುತ್ತಾರೆ. ಗೆಳತಿ, ಬರಹಗಾರ್ತಿ ಟೀನಾ ಪುಸ್ತಕದ ಬಗ್ಗೆ ಮಾತನಾಡುತ್ತಾಳೆ. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ಅವತ್ತು ನೀವು ಇರುತ್ತೀರಿ.

ನಿಮ್ಮೆಲ್ಲರ ಸ್ನೇಹ- ಪ್ರೀತಿಗಳ ಸವಿಯನ್ನು ಈ ಒಂದು ವರ್ಷದಿಂದ ಉಣ್ಣುತ್ತಲೇ ಬಂದಿದ್ದೇನೆ. ನಿಮಗೆಲ್ಲರಿಗೂ ನಾನು ಋಣಿ.
ನೀವು ‘ಸೋಮವಾರ’ ಇತ್ಯಾದಿ ಯಾವ ನೆವವನ್ನೂ ಹೇಳದೆ ಅಂದಿನ ಕಾರ್ಯಕ್ರಮಕ್ಕೆ ಬಂದರೆ ನನಗೆ ಬಹಳ ಬಹಳ ಖುಷಿಯಾಗುತ್ತದೆ. ನೀವೆಲ್ಲರೂ ಖಂಡಿತ ಬರಲೇಬೇಕು.
ಇದು ನನ್ನ ಪ್ರೀತಿಪೂರ್ವಕ ಒತ್ತಾಯ.

ಕಾದಿರುತ್ತೇನೆ.

ವಂದೇ,
ಚೇತನಾ ತೀರ್ಥಹಳ್ಳಿ

Anonymous said...

ondu maduveyagi.
idella problemm irolla !
- kera

ಅಂತರ್ವಾಣಿ said...

ರಘು ಅವರೆ,
ಬಹಳ ಇಷ್ಟವಾಯಿತು ನಿಮ್ಮ ಕವನ. :)

Anonymous said...

saaladu. -sudhanva

ಆಲಾಪಿನಿ said...

ಹರೀಶ್ ಸಲಹೆಗೆ ನನ್ನದೂ ಒಂದು ಸಹಿ....

sunaath said...

"ಅಮೃತಂತ ಬಾಯಿ ಚಪ್ಪರಿಸತಾವ,
ಕೇಳಿ ಕಣ್ಣ ಮಿಟಕತದ ರಾತ್ರಿ."
-ಅಂಬಿಕಾತನಯದತ್ತ

mruganayanee said...

"ಸುತ್ತ ಆವರಿಸಿದ ದಿವ್ಯ ಕತ್ತಲೂ ಉನ್ಮತ್ತ"
lovely....
ಬಹಳ ಕಮ್ಮಿ ಮಾತನಾಡುವವರ ಒಳಗೆ ಭಾವನೆಗಳು ಓತಪ್ರೋತವಾಗಿ ಹರಿಯುತ್ತಿರುತ್ತವಂತೆ... ಹೌದಾ..

Karnataka Best said...

ಯಾಕೋ ಕವಿತೆ ಇಷ್ಟ ಆಯಿತು