1
ನಿನ್ನ ಮುದ್ದಿಸಿ ಮರಳುತಿದ್ದೆ
ಜೋರುಮಳೆಗೆ ಸಿಕ್ಕಿಬಿದ್ದೆ
ಒಳಗೂ ಒದ್ದೆ ಹೊರಗೂ ಒದ್ದೆ
ಕಣ್ಣ ತುಂಬ ಸುಖದ ನಿದ್ದೆ
2
ಬಟನ್‌ಗೆ ಸಿಲುಕಿದ ಕೂದಲು ಇಲ್ಲ
ಅಂಗಿ ಮೇಲೆ ನಿನ್ನ ತುಟಿಮುದ್ರೆ ಇಲ್ಲ
ನಾವು ಕೂಡಿದ್ದಾದರೂ ನಿಜವೆ ತಿಳಿಯುತಿಲ್ಲ
ಒಂದೇ ಸಾಕ್ಷಿ, ಆಗಿನಿಂದ ನಿದ್ರೆ ಇಲ್ಲ
3
ಬೀಡಾ ಹಾಕಿಕೊಂಡು ತುಟಿ ಕೆಂಪ ಮರೆಸಿದೆ
ಸೆಂಟು ಪೂಸಿಕೊಂಡು ಮೈಕಂಪನಳಿಸಿದೆ
ಗೆಳತಿ, ನಿನ್ನ ಕೂಡಿ ಮನೆಗೆ ಮರಳಿದವನು
ಎಷ್ಟು ನಟಿಸಿದರೂ ಕಣ್ಣ ಹೊಳಪನಡಗಿಸದಾದೆ
4
ನಾವು ಅಷ್ಟೊಂದು ಮೈ ಮರೆಯಬಾರದಿತ್ತು
ಈಗ ನೋಡು ಮೆಲುಕುಹಾಕಲು ಕೂತರೆ
ಕೂಟದ ಒಂದು ವಿವರವೂ ನೆನಪಾಗುತಿಲ್ಲ
ಈ ತುಟಿಯ ಗಾಯವೂ ಏನೂ ಹೇಳುತಿಲ್ಲ
Friday, August 8, 2008
Subscribe to:
Post Comments (Atom)
ಮಿ ತ್ರ ಕೂ ಟ
Blog Archive
-
►
08
(122)
-
►
Oct
(19)
- ಕೊನೆಯ ದಿನದ ಸುಗ್ಗಿ ಭಾಗ 2
- ಕೊನೆಯ ದಿನದ ಸುಗ್ಗಿ ಭಾಗ 1
- ಆ ಮುಖ ಈ ಮುಖ!
- ಇವು ಹೇಗಿವೆ?
- ಇನ್ನಷ್ಟು
- ಮತ್ತೆ ಬಂದವು ಮುಖಪುಟ
- ರೈಲು ಲೇಟು!
- ಮತ್ತಷ್ಟು ರೈಲುಗಳು!
- ಪುಟ ಪುಟವೂ ದಿವ್ಯ!
- ಮತ್ತಷ್ಟು! ಇನ್ನೆಷ್ಟು?!
- ಇನ್ನೂ ಐದು!
- ಇದು ಮಹಾನ್ ‘ಕವರ್’ ಡ್ರೈವ್!
- ಇದು ನಿಜಕ್ಕೂ ಅಚ್ಚರಿ!
- ಕೊನೆ ದಿನಾಂಕ ಸಮೀಪಿಸುತ್ತಿದೆ!
- ಪ್ರೀತಿಯ ದಾದಾ
- ಇನ್ನಷ್ಟು ಇನ್ನಷ್ಟು!
- ಇನ್ನಷ್ಟು ಮುಖಪುಟಗಳು
- ಮತ್ತಷ್ಟು ಹಂಪಿ ಎಕ್ಸ್ಪ್ರೆಸ್ಗಳು!
- ನಿಮ್ಮ ಮೇಲ್ ಬಂದಿಲ್ಲ
-
►
Oct
(19)
poorv`apara'(about me)
- apara
- bangalore, Karnataka, India
- original name Raghu, journalist , working in vijaya karnataka news paper, written a few short stories in kannada, interested in movies (watching and making), photography, music. designing book covers is one of my hobbies. education: Msc. agriculture
6 comments:
vah vah !
idu nijvagi vichitra koota !
- Harish Kera
hihi..! oLLe maja ide kanree..! :D
ವಿಚಿತ್ರ! ಕೂಟ!!
ಚೆನ್ನಾಗಿ ಬರೆದಿದ್ದೀರ.
ಅಪಾರ,ಕಣ್ಣಿಗೆ ಕಟ್ಟೋ ಹಾಗೆ ಬರೆಯೋದು ಅಂತಾರಲ್ಲ. ಇದೇ ಇರಬೇಕು :)
ಅಹಾ!
kavite chennagide Raghu... modalinantaha 'madhya-saara' minigavite baredare pettu...
Post a Comment