Monday, April 2, 2007

ಕರ್ಕಶ ನೆನಪು(ಪದ್ಯ ಎನ್ನಲೆ?)



ಕಾಡಿನಲ್ಲೆಲ್ಲೋ ನಡುಗಿದ
ಜಿಂಕೆ ಮರಿ ಎದೆಯ ಸದ್ದು
ಮಲಗಿರುವೆ ಬೆಚ್ಚಗೆ
ನೆನಪುಗಳನೆ ಹೊದ್ದು
ಎಲ್ಲಿದ್ದರೂ ಸುಖವಾಗಿರು




ನಡುರಾತ್ರಿ ಜತೆಯಾಗಿ ಕೇಳಿದ
ಹಾಡಿನ ವಿಷಾದ ರಾಗ
ಎಲ್ಲಿಂದ ತೇಲಿ ಬಂದು
ನಡುಗಿಸಿತು ಮನವ ಈಗ?




ಎಷ್ಟೊಂದು ಸಲೀಸಾಗಿ
ಹೊಳೆದಿತ್ತು ಹೆಸರದು ಅಂದು
ಏನೆಂದು ಕರೆಯುತಿರುವೆಯೊ
ಪುಟ್ಟ ಮಗಳನು ಇಂದು




ನಾನು ನೀನು ಆನು ತಾನು
ಜೇನು ಭಾನು ಕಾನು ಫೋನು
ಪದಕೆ ಇಲ್ಲದಿದ್ದರೂ ಅರ್ಥ
ಮಾತಾಡಿದ್ದಾದೀತೆ ವ್ಯರ್ಥ?




ಅವನ ಜತೆ ಬೆಚ್ಚಗೆ ನೀನು
ಮಲಗಿರುವೆ ಮನೆಯ ಒಳಗೆ
ಮಳೆಯ ರಾತ್ರಿ ನಡುಗುತ್ತಾ
ನಿಂತಿರುವೆ ನಾನು ಹೊರಗೆ
ಮಳೆ ಬರುತ್ತಲೇ ಇರಲಿ ಹೀಗೇ
ನನ್ನ ನಡುಕ ನಿನಗೆ ನಿನ್ನ
ನಡುಕ ನನಗೆ ಕೇಳಿಬರದಿರಲಿ

5 comments:

Sushrutha Dodderi said...

ಅಪಾರ,

ನಿಮ್ಮ ಬ್ಲಾಗ್ ನೋಡಿ ಖುಷಿಯಾಯ್ತು. 'ಮೇಷ್ಟ್ರ ಸೈ...' ಭಾವನಾದಲ್ಲೇ ಓದಿದ್ದೆ. ಅದಕ್ಕೆ ವರ್ಷದ ಅತ್ಯುತ್ತಮ ಕಥೆ ಪ್ರಶಸ್ತಿ ಸಿಕ್ಕಿದ್ದೂ ಗೊತ್ತಾಗಿತ್ತು. ಹಾಗೇ, ನಿಮಗೆ ಒಮ್ಮೆ ನಾನು 'ಯವನಿಕಾ'ದಲ್ಲಿ ಬೇಂದ್ರೆ ಕಾವ್ಯವಾಚನ ಕಾರ್ಯಕ್ರಮ ಆದಾಗ ಸಿಕ್ಕಿದ್ದೆ, ನೆನಪಿದೆಯಾ? ವಸುಧೇಂದ್ರ, ಜಯಂತ್ ಸರ್ ಜೊತೆ.. ಹ್ಮ್..

ಈ ಪುಟಾಣಿ ಕವನಗಳು ಒಂಥರಾ ಚೆನ್ನಾಗಿವೆ.

ಬ್ಲಾಗಿಸುತ್ತಿರಿ, ಥ್ಯಾಂಕ್ಸ್,

-ಸು

Unknown said...
This comment has been removed by the author.
Unknown said...
This comment has been removed by the author.
ಮಹೇಶ ಎಸ್ ಎಲ್ said...

ಕವಿತೆ ಗಳು ಚೆನ್ನಾಗಿ ಮುಡುಬಂಬಿವೆ

Chamaraj Savadi said...

Hi Raghu,
First time I went through your blog 'Apara', which is simply heart warming.

Best work done. Keep it up.

I shall post again after reading rest of the writings.

Chamaraj Savadi
Journalist
Prajavani
Bangalore