Monday, April 2, 2007

ಚಿಟ್ಟೆ ಆಯೀ ಹೈ(ಪ್ರೇಮಸೂತ್ರ)


ಅದೃಷ್ಟ

ಎಷ್ಟೋ ಹೊತ್ತು
ಬರೀ ಸೂರ್ಯಕಾಂತಿ ಹೂವನೇ
ನೋಡಿದ ಬಳಿಕ ಕಂಡ
ಹಳದಿ ಚಿಟ್ಟೆ
ಯಾತಕೋ ಸರಕ್ಕನೆ
ನೀನು ತಿರುಗಿದಾಗ
ಕಂಡ ನುಣುಪು ಬಿಳಿ ಹೊಟ್ಟೆ


ಚಡಪಡಿಕೆ

ಮುಸ್ಸಂಜೆ ಹೊತ್ತಲ್ಲಿ
ಕಣ್ಣಿಂದ ಒಳತೂರಿದ
ಚಿಟ್ಟೆ ನೀನು
ಈ ನಡು
ರಾತ್ರಿ ವೇಳೆ ಮೈತುಂಬಿ
ಫಡಫಡಿಸುವೆ ಏನು?


ಕೂಡು

ಮಾತು ಕತೆ ಒಂದೂ ಬೇಡ
ಸುಮ್ಮನೆ ಬಂದು ಕೂಡು
ಮಿಸುಕಾಡದೆ ಮಧುವ
ಹೀರೊ ಚಿಟ್ಟೆಯ
ಒಮ್ಮೆ ನೋಡು

2 comments:

ಮಹೇಶ ಎಸ್ ಎಲ್ said...

ಸೂತ್ರಗಳು ಚೆನ್ನಾಗಿವೆ

dinesh said...

ಸರಕ್ಕನೆ ತಿರುಗಿದಾಗ ಕಂಡದ್ದು..ಉತ್ತಮ ಹನಿಗಳು..

~~~~~~ಮೀ ನ ಹೆ ಜ್ಜೆ