ಪ್ರೀತಿಯ ಕವಿ ಎಚ್‌ಎಸ್‌ವಿಯವರ ಹೊಸ ಕವಿತೆಗಳು ಅಚ್ಚಿಗೆ ರೆಡಿಯಾಗಿವೆ. ಮುಖಪುಟ ಇಲ್ಲಿದೆ. ಕವಿಯ ಭಾವಚಿತ್ರ: ಎ ಎನ್ ಮುಕುಂದ್. ಚಿತ್ರದ ಮೇಲೆ ಕ್ಲಿಕ್ ಮಾಡಿ ದೊಡ್ಡದು ಮಾಡಿಕೊಂಡು ನೋಡಿ ಚೆನ್ನಾಗಿದೆ ಅಂತ ಹೇಳಿ ಆಯ್ತಾ?!!!
ಕುಂವೀ ಅವರ ಶಾಮಣ್ಣ(ಮತ್ತೆ ಕುಳಿತು ಹೇಳಿದ ಕತೆ) ಹಾಗೂ ಕಡಿದಾಳು ಶಾಮಣ್ಣನವರ ಆತ್ಮಕತೆ(ನಿರೂಪಣೆ: ಅಕ್ಷತಾ). ಇಬ್ಬರು ಶಾಮಣ್ಣರ ಪುಸ್ತಕಗಳಿಗೂ ಒಟ್ಟೊಟ್ಟಿಗೇ ಮುಖಪುಟ ಮಾಡಬೇಕಾಯಿತು. ನಿಮಗಾಗಿ ಇಲ್ಲಿವೆ. ಕುಂವೀ ಶಾಮಣ್ಣದ ಫೋಟೊ ಗೋಕರ್ಣದಲ್ಲಿ ತೆಗೆದದ್ದು.
ರಾಮಚಂದ್ರದೇವ ಅವರ ಈ ಪುಸ್ತಕದ ಮುಖಪುಟ ಹೇಗಿದೆ ಹೇಳಿ. ಇದರೊಂದಿಗೆ ಇನ್ನೂ ನಾಲ್ಕು ಪುಸ್ತಕಗಳು ಈ ಭಾನುವಾರ(೨೦ಮಾರ್ಚಿ) ಬಿಡುಗಡೆಯಾಗುತ್ತಿವೆ. ಬಸವನಗುಡಿಯ ವರ್ಲ್ಡ್ ಕಲ್ಚರ್ ಸಂಸ್ಥೆ ಸಭಾಂಗಣದಲ್ಲಿ. ಬನ್ನಿ.