ಹೆಸರಾಂತ ಲೇಖಕ ರಾಮಚಂದ್ರ ಗುಹ ಬರೆದ ‘ಇಂಡಿಯಾ ಆಫ್ಟರ್ ಗಾಂಧಿ’ ಯನ್ನು ವಸಂತ ಪ್ರಕಾಶನ ಕನ್ನಡಕ್ಕೆ ತರುತ್ತಿದೆ. ಜಿ ಎನ್ ರಂಗನಾಥರಾವ್ ಅನುವಾದಿಸಿರುವ ಈ ಪುಸ್ತಕದ ಎರಡು ಸಂಪುಟಗಳು ಈ ಭಾನುವಾರ(೨೨ ಆಗಸ್ಟ್) ಬಿಡುಗಡೆಯಾಗಲಿವೆ. ಬೆಳಗ್ಗೆ ೧೦.೩೦ಕ್ಕೆ ನೃಪತುಂಗಾ ರಸ್ತೆಯ ಯವನಿಕಾ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಆರಂಭಕ್ಕೂ ಮುನ್ನ ಲಘು ಉಪಾಹಾರವಿದೆ.
