Wednesday, November 19, 2008

ಬಹುಮಾನ ಬಂತು!

ಛಂದ ಪುಸ್ತಕ ಆಯೋಜಿಸಿದ್ದ ಮುಖಪುಟ ವಿನ್ಯಾಸ ಸ್ಪರ್ಧೆಯ ಫಲಿತಾಂಶ ಇಲ್ಲಿದೆ. ಮೈಸೂರಿನ ಕಾವಾದ ಅಂತಿಮವರ್ಷದ ಕಲಾವಿದ್ಯಾರ್ಥಿ ಪ್ರವೀಣ್ ಹೆಗಡೆ ರಚಿಸಿದ ವಿನ್ಯಾಸ ಬಹುಮಾನಕ್ಕೆ ಆಯ್ಕೆಗೊಂಡಿದೆ. ಸ್ಪರ್ಧೆಯ ವಸ್ತುವಾಗಿದ್ದ ‘ಬಳ್ಳಾರಿ ಮತ್ತು ಬೆಂಗಳೂರಿನ ಬದುಕಿನ ಜೀವನಪ್ರೀತಿ’ಯನ್ನು ಈ ಮುಖಪುಟ ಸಮರ್ಥವಾಗಿ ಬಿಂಬಿಸುತ್ತಿದೆ. ಹೊಸತನ ಮತ್ತು ಕಣ್ಣಿಗೆ ಹಿತವಾಗುವ ದೃಷ್ಟಿಯಿಂದಲೂ ಇದು ಸಾಕಷ್ಟು ಅಂಕ ಗಳಿಸುತ್ತದೆ. ಬಣ್ಣಗಳ ಬಳಕೆಯಲ್ಲೂ ಗಮನ ಸೆಳೆಯುತ್ತದೆ ಎಂದು ಭಾವಿಸಿದ್ದೇವೆ.
ಈ ಸ್ಪರ್ಧೆಗೆ ಬಂದ ಪ್ರವೇಶಗಳ ಸಂಖ್ಯೆ ನಮಗೂ ಅಚ್ಚರಿ ತಂತು ಎಂದು ಈ ಮೊದಲೇ ಹೇಳಿದ್ದೇವೆ. ಗುಣಮಟ್ಟದ ದೃಷ್ಟಿಯಿಂದಲೂ ಇಲ್ಲಿನ ಮುಖಪುಟಗಳು ಒಂದಕ್ಕಿಂತ ಒಂದು ಬೆರಗು ಹುಟ್ಟಿಸುವಂತಿರುವುದನ್ನು ನೀವೂ ಹೇಳಿದ್ದೀರಿ. ಇವುಗಳಲ್ಲಿ ಒಂದನ್ನು ಆರಿಸುವುದು ನಿಜಕ್ಕೂ ಕಷ್ಟಕರವಾಗಿತ್ತು. ಆಕರ್ಷಕ ಮುಖಪುಟಗಳನ್ನು ಹುಡುಕಿದ್ದರೆ ಒಂದನ್ನು ಆರಿಸುವುದು ಅಸಾಧ್ಯವೇ ಆಗುತ್ತಿತ್ತೇನೊ. ಆದರೆ ವಸ್ತುವಿಗೆ ಹೊಂದುವ, ಹೊಸತನ ಹೊಂದಿರುವ ಅಂಶಗಳಿಗಾಗಿ ನೋಡತೊಡಗಿದಾಗ ಹತ್ತು ಹನ್ನೆರಡು ಮುಖಪುಟಗಳು ಮಾತ್ರ ಬಹುಮಾನ ಪಡೆಯಲು ಪೈಪೋಟಿ ನೀಡಿದವು ಎನ್ನಬಹುದು. ನೋಡಲು ಅದ್ಭುತವಾಗಿದ್ದ ಕೆಲ ವಿನ್ಯಾಸಗಳು ನಾವು ಸೂಚಿಸಿದ್ದ ಪುಸ್ತಕಕ್ಕೆ ಅಷ್ಟೊಂದು ಹೊಂದದ ಕಾರಣ ಕಡೆಯ ಸುತ್ತಿನಿಂದ ಹೊರಗುಳಿದವು.
ಈ ಸ್ಪರ್ಧೆಯ ಅತ್ಯಂತ ಸಂತೋಷದ ಸಂಗತಿಯೆಂದರೆ ವಿವಿಧ ಹಿನ್ನೆಲೆಯ, ವಿವಿಧ ವಯೋಮಾನದ, ವಿವಿಧ ಊರುಗಳ ಉತ್ಸಾಹಿಗಳು ಪಾಲ್ಗೊಂಡಿದ್ದು.(ಸುಮಾರು ೨೫೦ ಮುಖಪುಟಗಳು ಬಂದಿದ್ದವು) ಬಹುಮಾನ ಗಳಿಸಿದ ಮುಖಪುಟದ ಜತೆ ಕಡೆಯ ಕ್ಷಣದವರೆಗೆ ತೀವ್ರ ಸ್ಪರ್ಧೆಯಲ್ಲಿದ್ದ ಮುಖಪುಟವನ್ನು ರಚಿಸಿದ್ದು ೬ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ವಿನೀಶಾ(ಕೆಂಪು ಬಟ್ಟೆ ಹಿಡಿದು ಓಡುತ್ತಿರುವ ಮಕ್ಕಳ ರೈಲು)! ಹಾಗೇ ಕೊನೆಯ ಕ್ಷಣದವರೆಗೆ ಬಹುಮಾನಕ್ಕೆ ಪರಿಗಣಿಸಲ್ಪಟ್ಟ ಇನ್ನೊಂದು ಮುಖಪುಟ ವಿ ಎಂ ಮಂಜುನಾಥ್ ರಚಿಸಿದ ರೈಲು ನೋಡುತ್ತಿರುವ ಹುಡುಗಿಯದ್ದು.
ಬಹುಮಾನಿತ ಮುಖಪುಟವನ್ನು ಆಯ್ಕೆ ಮಾಡಿದ್ದು ಗಾರ್ಗಿ ಭುಯಾ(‘ಜಾನಕಿ ಕಾಲಂ’ ಮತ್ತು ‘ನಮ್ಮಮ್ಮ ಅಂದ್ರೆ ನಂಗಿಷ್ಟ’ ಪುಸ್ತಕಗಳಿಗೆ ಮುಖಪುಟ ವಿನ್ಯಾಸ ಮಾಡಿದ್ದ ಗಾರ್ಗಿ, ಜೆನಿಸಿಸ್ ಸಾಫ್ಟ್‌ವೇರ್‌ನಲ್ಲಿ ಡಿಸೈನ್ ಡೈರೆಕ್ಟರ್) ಮತ್ತು ಅಪಾರ. ಪುಸ್ತಕಗಳಿಗೆ ಮುಖಪುಟ ರಚಿಸುವುದು ಒಂದು ರೀತಿಯಲ್ಲಿ ಯಾರೂ ಗಮನಿಸದ ಕಲೆ. ಕನ್ನಡ ಪುಸ್ತಕ ಪ್ರಾಧಿಕಾರ ಪ್ರತಿ ವರ್ಷ ‘ಪುಸ್ತಕ ಸೊಗಸು’ ಎಂಬ ಬಹುಮಾನ ನೀಡುತ್ತದೆಯಾದರೂ ಅದು ಕಲಾವಿದನನ್ನು ಪರಿಗಣಿಸುವುದಿಲ್ಲ. ಆ ಬಹುಮಾನ ಮತ್ತು ಅದರ ಮೊತ್ತ ಪ್ರಕಾಶಕರಿಗೆ ದೊರೆಯುತ್ತದೆ. ಹೀಗಿರುವಾಗ ಇಂಥ ಒಂದು ವಿಶಿಷ್ಟ ಸ್ಪರ್ಧೆ ನಡೆಸಿದ ಖುಷಿ ಛಂದ ಪುಸ್ತಕಕ್ಕಿದೆ. ಇಷ್ಟೂ ದಿನ ನಮ್ಮೊಂದಿಗಿದ್ದು, ಮತ್ತೆ ಮತ್ತೆ ಈ ಬ್ಲಾಗಿಗೆ ಭೇಟಿ ನೀಡಿ, ಅಭಿಪ್ರಾಯ ತಿಳಿಸಿ, ಬೆನ್ನು ತಟ್ಟಿದ ನಿಮ್ಮೆಲ್ಲರಿಗೂ ಇದರಲ್ಲಿ ಪಾಲಿದೆ.
ಕಡೆಯ ಸುತ್ತಿನವರೆಗೂ ಸ್ಪರ್ಧೆಯಲ್ಲಿದ್ದ ಇತರ ಹನ್ನೊಂದು ವಿನ್ಯಾಸಕಾರರಿಗೆ ಪುಸ್ತಕ ಬಿಡುಗಡೆಯ ದಿನ ಒಂದು ಪುಟ್ಟ ನೆನಪಿನ ಕಾಣಿಕೆ ನೀಡಲಿದ್ದೇವೆ(ಆ ಮುಖಪುಟಗಳು ಕೆಳಗಿವೆ). ಬಹುಮಾನ ಪಡೆಯುವ ಮುಖಪುಟವನ್ನು ಮೊದಲೇ ಊಹಿಸಿದ ಜಿತೇಂದ್ರ ಅವರಿಗೂ ಅಭಿನಂದನೆಗಳು. ಗಮನ ಸೆಳೆದ ಎಲ್ಲಾ ಸ್ಪರ್ಧಿಗಳಿಗೆ ಛಂದ ಪುಸ್ತಕದ ಮುಂಬರುವ ಪುಸ್ತಕಗಳ ಮುಖಪುಟ ವಿನ್ಯಾಸ ಮಾಡುವ ಅವಕಾಶ ನೀಡುತ್ತೇವೆ. ಹಾಗೆಯೇ ಸ್ಪರ್ಧೆಗೆ ಬಂದ ಯಾವುದೇ ವಿನ್ಯಾಸವನ್ನು ಯಾರಾದರೂ ತಮ್ಮ ಪುಸ್ತಕವೊಂದಕ್ಕೆ ಬಳಸಲು ಬಯಸಿದರೆ ಕಲಾವಿದರ ಸಂಪರ್ಕ ವಿವರವನ್ನು ಸಂತೋಷದಿಂದ ಕೊಡುತ್ತೇವೆ. ಈ ಸ್ಪರ್ಧೆಯನ್ನು ಪ್ರತಿವರ್ಷ ನಡೆಸುವ ಉದ್ದೇಶ ಛಂದಪುಸ್ತಕಕ್ಕಿದೆ ಎಂಬ ಸಿಹಿ ಸುದ್ದಿ ತಿಳಿಸುತ್ತಾ, ಡಿಸೆಂಬರ್ ಕೊನೆಯಲ್ಲಿ ನಡೆಯುವ ಪುಸ್ತಕದ ಬಿಡುಗಡೆಗೆ ತಪ್ಪದೆ ಬನ್ನಿ ಎಂದು ಕರೆಯುತ್ತಾ ಈ ಒಡನಾಟವನ್ನು ಮುಗಿಸುತ್ತಿದ್ದೇವೆ. ನಮಸ್ಕಾರ.
-ವಸುಧೇಂದ್ರ


ವಿನೀಶಾ
ವಿ ಎಂ ಮಂಜುನಾಥ್

ಭಕ್ತವತ್ಸಲ


ಸೌಮ್ಯ ಕಲ್ಯಾಣ್‌ಕರ್

ರಾಮಕೃಷ್ಣ ಸಿದ್ರಪಾಲ


ದತ್ತಾತ್ರಿ ಎಂ ಎನ್


ರೇವಣ ಕುಮಾರ್


ಲಕ್ಷ್ಮೀಕಾಂತ


ಪ್ರದೀಪ್ ಅಣ್ಣಿಗೇರಿ


ಸುರೇಶ್ ಕೋಟ
ಶ್ರೀನಿಧಿ ಟಿ ಜಿ

48 comments:

Sushrutha Dodderi said...

Congratulations Praveen... :-)

ಜಿ ಎನ್ ಮೋಹನ್ said...

congrats
ಸ್ಪರ್ಧೆ ಐಡಿಯಾ ಚೆನ್ನಾಗಿತ್ತು. ಒಂದೇ ವಿಷಯವನ್ನ ಎಷ್ಟೊಂದು ಜನ ಹೇಗೆಲ್ಲಾ ಪ್ರವೇಶಿಸುತ್ತಾರೆ ಎಂಬುದರ ಪ್ರತ್ಯಕ್ಷ ದರ್ಶನವಾಯ್ತು. ಅದರಲ್ಲೂ ಎಷ್ಟೊಂದು ಮಂದಿ ಹೊಸಬರು. ಪ್ರತಿಯೊಂದರಲ್ಲೂ ಅವರ ಹೊಸ ಛಾಪು. ಖುಷಿಯಾಯ್ತು.

ಪ್ರವೀಣ್ ಮುಖಪುಟ ಬೇರೆಯದ್ದಕ್ಕಿಂತ ಚೆನ್ನಾಗಿದೆಯಾ? ಇನ್ನೂ ಗೊತ್ತಾಗ್ತಾ ಇಲ್ಲ. ನನಗನ್ನಿಸುತ್ತೆ. ನಿಮ್ಮ ಆಯ್ಕೆಯು ಬಗ್ಗೆಯೂ ಒಂದು ಚರ್ಚೆ ಮುಂದುವರಿಸಿದರೆ ಒಳ್ಳೆಯದೇನೋ. ಆಗ ಪ್ರತಿಯೊಬ್ಬರಿಗೂ ಇರುವ ಮುಖಪುಟದ ಬಗೆಗಿನ ನೋಟ ಹೊರಬರುತ್ತದೆ.
-ಜಿ ಎನ್ ಮೋಹನ್

ಸಂದೀಪ್ ಕಾಮತ್ said...

ಕಂಗ್ರಾಟ್ಸೂ...........

ವಿ.ರಾ.ಹೆ. said...

Congratulations to Praveen.

But, ಮುಖಪುಟದಲ್ಲೂ, ಆಯ್ಕೆಯಲ್ಲೂ ಹೊಸತನದ ಕೊರತೆ ಕಾಣ್ತಾ ಇದೆ.

ಪುಸ್ತಕವೊಂದರ ಮುಖಪುಟಕ್ಕೆ ಬರೀ ಪುಸ್ತಕದೊಳಗಿನ ಸಾಹಿತ್ಯದ ವಸ್ತುವನ್ನೂ ಅಥವಾ ಅದರ ಅಂತರಾರ್ಥವನ್ನೋ ಬಿಂಬಿಸುವ ಜವಾಬ್ದಾರಿ ಮಾತ್ರ ಇರೋದಿಲ್ಲ ಎಂದು ನನ್ನಭಿಪ್ರಾಯ.

Anonymous said...

ಸ್ಪರ್ದಿಸಿದ ಎಲ್ಲರಿಗೂ ನನ್ನ ಅಭಿನಂದನೆಗಳು.. ಪ್ರಿಯ ವಸು ಹಾಗೂ ಅಪಾರ ಅವರೇ.. ಆಯ್ಕೆಯಾಗಿರುವ ಮುಖಪುಟಕ್ಕೂ ಹಾಗೂ ಬಳ್ಳಾರಿ-ಬೆಂಗಳೂರಿನ ಪರಿಸರದಲ್ಲಿನ ಜೀವನ ಪ್ರೀತಿಯ ಕತೆಗಳಿಗೂ ಹೇಗೆ ಹೋಲಿಕೆ ಅಂತ ತಿಳಿಸ್ತೀರಾ.. ಮುಂದಿನ ಯಾವುದಾದರೂ ಸ್ಪರ್ದೆಗೆ ಬಾಗವಹಿಸೋವಾಗ ನೀವು ತಿಳಿಸಿದ ಹೋಲಿಕೆಯಂತೆ ರಚಿಸಲು ಪ್ರಯತ್ಸಿಸಬಹುದು.

ನನ್ ಮನೆ said...
This comment has been removed by the author.
Anonymous said...

ಒಟ್ಟಿನಲ್ಲಿ ಸ್ಪರ್ಧೆ ಖುಶಿ ಕೊಟ್ಟಿತು.
ಅಪರೂಪದ ಆಹ್ವಾನ.
ಅಪಾರ ಪ್ರತಿಕ್ರಿಯೆಗಳು..
ಛಂದ ಚೆಂದ!
-ರಾಘವೇಂದ್ರ ಜೋಶಿ

ಸಂದೀಪ್ ಕಾಮತ್ said...
This comment has been removed by the author.
ಸಂದೀಪ್ ಕಾಮತ್ said...

Anonymous ರವರಿಗೆ ಬಂದ ಅನುಮಾನ ನನಗೂ ಬಂದಿತ್ತು !(ಅದನ್ನು ಅವರು ಹೆಸರು ಸಹಿತ ಹೇಳಿದ್ರೆ ಚೆನ್ನಾಗಿರ್ತಾ ಇತ್ತು)

ಬಳ್ಳಾರಿ-ಬೆಂಗಳೂರಿನ ಪರಿಸರದಲ್ಲಿನ ಜೀವನ ಶೈಲಿಗೂ ಮುಖಪುಟ ಚಿತ್ರಕ್ಕೂ ಏನು ಸಂಬಂಧ??

ಇನ್ನೊಂದು ವಿಚಾರ ತುಂಬಾ ಆಳವಾಗಿರೋ ವಿಚಾರ ನನ್ನಂಥ ಜನ ಸಾಮಾನ್ಯರಿಗೆ ಅರ್ಥ ಆಗೊಲ್ಲ.ಹಾಗಾಗಿ ಸರಳವಾಗಿ ನನ್ನಂಥ ಬೆಪ್ಪು ತಕ್ಕಡಿಗೂ ಅರ್ಥ ಆಗೋದನ್ನು ಉಪಯೋಗಿಸಿದರೆ ಚೆನ್ನಾಗಿರ್ತಾ ಇತ್ತು.ಅಷ್ಟಕ್ಕೂ ಇದು ’ಮುಖಪುಟ ’ ಸ್ಪರ್ಧೆ ಅಲ್ವ?? modern art competition ಅಲ್ವಲ್ಲ:(.

ಇದರ ಅರ್ಥ ಪ್ರವೀಣ್ ಚಿತ್ರ ಸರಿ ಇಲ್ಲ ಅಂತ ಅಲ್ಲ ನನ್ನಂಥ ಜನ ಸಾಮಾನ್ಯರಿಗೆ ಅರ್ಥ ಆಗಲ್ಲ ಅಂತ ಅಷ್ಟೆ.

"ಚಿತ್ರ ಅರ್ಥ ಆಗಿಲ್ಲ ಅಂದ್ರೆ ವಸುಧೇಂದ್ರರ ಕಥೆನೂ ಅರ್ಥ ಆಗಲ್ಲ ಕಣಯ್ಯ ನಿಂಗೆ ,ಸುಮ್ನೆ ಮುಚ್ಕೊಂಡಿರು" ಅಂದ್ರಾ??

Sorry ಹಾಗಿದ್ರೆ!

"Never Judge A Book By It's Cover Page"

Anonymous said...

Apara & Vasudhendra
At the outset congratulations for coming out with this novel concept.We could get a 'dekko' at Creative minds at work.
It must have been a difficult task for the judges to chose one among so many entries.
A hi5 to Gargi and Apara for chosing the winner
Hearty Congratulation to Praveen whose design is innovative. and congrats to Jitendra who chose the same pic as the judges
Apara, IT WILL BE NICE IF U EXPLAIN WHY THIS PARTICULAR DESIGN WAS CHOSEN.(just to see how a creative mind works thats all..:-))
Design by little Vineesha is cute.
Now we can visualise Vasudhendra's Hampi Express in the new 'garb'.
Also good wishes to those who made it to the last round.
Cheerios!!! to all those who masterminded this contest
:-)
malathi S

@ Sandeep: Many a times i have purchased a book just because i liked the coverpage.
Since I know how well Vasudhendra writes, the cover page actually does not matter to me :-)
I am by no means disheartening the people who entered the contest by making this statement.
All the bestin conducting many more such contests.

ನನ್ ಮನೆ said...

ಪ್ರವೀಣ್ ಹೆಗಡೆ ಹಾಗೂ ಪುಟ್ಟ ಬಾಲಕಿ ವಿನೀಶಾಗೆ ಅಭಿನಂದನೆಗಳು.

Anonymous said...

ಸಂದೀಪ್ ಕಾಮತ್ ಅವರೇ ನಿಮ್ಮ ಮಾತು ನಿಜ. ನನ್ನ ಹೆಸರು ಹಾಕಿಕೊಂಡೇ ಹಾಕಬಹುದಿತ್ತು. ಆದರೆ ಆಯ್ಕೆಯು ವಸ್ತು ನಿಷ್ಟ ಅನ್ನಿಸಲಿಲ್ಲ. ಅದಕ್ಕೆ ನನ್ನ ಹೆಸರು ಹಾಕಲು ಇಷ್ಟ ಪಡಲಿಲ್ಲ.

ಈ ಮಾಡ್ರನ್ ಯುಗದಲ್ಲೂ ಇಂತಹ ಮುಖಪುಟ ಆಯ್ಕೆಯಾಗಿರುವುದು ಹಾಸ್ಯಾಸ್ಪದ.

ಈ ಹಿಂದೆ ನಮ್ಮ ಕರ್ನಾಟಕ ಸರ್ಕಾರಿ ಕಡತಗಳ ಮುಖಪುಟಗಳು ಹೀಗೆ ಬರುತ್ತಿದ್ದವು ಯಾಕೆಂದರೆ ಅವನ್ನು ಎಲ್ಲೂ ಮಾರುತ್ತಿರಲಿಲ್ಲ.. ಈಗಿನ ಕಾಲದಲ್ಲಿ Marketing Strategy ಕೂಡ ನೋಡಿ ಪುಸ್ತಕಗಳ ಮುಖಪುಟ ರಚಿಸಬೇಕು. ಅಂತದ್ರಲ್ಲಿ ಬುದ್ದಿಜೀವಿಗಳಿಗೆ ಮಾತ್ರ ಅರ್ಥವಾಗುವಂತ ಮುಖಪುಟ ಇದ್ರೆ ಪುಸ್ತಕ ಕೊಳ್ಳೋರು ಯಾರು?

ಬಹುಶಃ ವಸುದೇಂದ್ರಾವರ ಹೆಸರು ನೋಡಿ ಮಾತ್ರ ತೆಗೆದುಕೊಳ್ಳಬಹುದು.

ಇಂತಹ ಮುಖಪುಟ ಆಯ್ಕೆ ಮಾಡೋದಕ್ಕೆ ಅಪಾರರವರಂತ ಪ್ರತಿಭಾನ್ವಿತ ವಿನ್ಯಾಸಕಾರರ ಅಗತ್ಯವಿಲ್ಲ ಅಂತ ನನಗನಿಸುತ್ತೆ.

ಅಷ್ಟಕ್ಕೂ ಈ ಆಯ್ಕೆಯ ಮಾನದಂಡವೇನು ಅಂತ ಅರ್ಥಆಗ್ಲಿಲ್ಲ.

ಸಂದೀಪ್ ಕಾಮತ್ said...

ಅನಾಮಿಕರೇ marketing strategy ಯ ಬಗ್ಗೆ ನನಗೂ ನಿಮ್ಮ ಹಾಗೇಯೆ ಅಸಮಧಾನ ಇತ್ತು.

ಆದ್ರೆ ಕನ್ನಡ ಪುಸ್ತಕಗಳನ್ನು ಕೊಳ್ಳೋರು" ನನ್ನ ಥರ ಕಡಲೇಕಾಯಿಯನ್ನು ಅಥವಾ ಬಜ್ಜಿ ಬೋಂಡವನ್ನು ತಿಂದು ಅದನ್ನು ಕಟ್ಟಿ ಕೊಟ್ಟ ಕಾಗದದಲ್ಲಿ ಏನು ಬರೆದಿದೆ ಅಂಥ ಕುತೂಹಲದಿಂದ ಓದೋರು !".
ಇಂಥವರು ಪುಸ್ತಕ ಅಂಗಡಿಗಳಿಗೆ ಹೋಗಿ ವಸುಧೇಂದ್ರರ "ಹಂಪಿ ಎಕ್ಸ್ಪ್ರೆಸ್ " ಕೊಡಿ ಅಂತ ನೇರವಾಗಿ ಕ್ಯಾಶಿಯರ್ ನ ಕೇಳೋ ಅಂಥವರು .

ಆದರೂ ನೀವು ಹೇಳಿದ ಹಾಗೆ ಸ್ವಲ್ಪ ಮಾರ್ಕೆಟಿಂಗ್ ಗೂ ಮಹತ್ವ ಕೊಟ್ರೆ ಪ್ರಕಾಶಕರೂ ಸ್ವಲ್ಪ ಕಾಸು ಮಾಡಬಹುದೇನೋ !! ಏನು ಸಾಹಿತ್ಯದ ಸೇವೆ ಅಂದುಕೊಂಡ್ರು ದಿನದ ಕೊನೆಗೆ ಕಿಸೆಯಲ್ಲಿ ಸ್ವಲ್ಪ ಕಾಸು ಬಂದ್ರೇನೆ ಮಜಾ ಅಲ್ವ?

Sowmya said...

Congrats Praveen.....

nishu mane said...

ಪ್ರವೀಣ್ ಅವರ ಚಿತ್ರ ನನಗೂ ತುಂಬಾ ಇಷ್ಟವಾಯ್ತು. ಬಳಸಿರೋ ಬಣ್ಣಗಳು ಸ್ವಲ್ಪ ಬದಲಾದರೆ ಇನ್ನೂ ಚೆನ್ನಾಗಿರತ್ತೆ ಅನ್ನಿಸ್ತಿದೆ. ವಸುಧೇಂದ್ರ, ಅಪಾರ ಇಬ್ಬರಿಗೂ ತುಂಬಾ ಥ್ಯಾಂಕ್ಸ್, ಇಂಥದ್ದೊಂದು ಪ್ರಯತ್ನಕ್ಕೆ ಮತ್ತು ಅದನ್ನು ಹೀಗೇ ಮುಂದುವರೆಸುವ ಯೋಚನೆಗೆ.
-ಮೀರ.

nishu mane said...

ಪ್ರವೀಣ್ ಅವರ ಚಿತ್ರ ನನಗೂ ತುಂಬಾ ಇಷ್ಟವಾಯ್ತು. ಬಳಸಿರೋ ಬಣ್ಣಗಳು ಸ್ವಲ್ಪ ಬದಲಾದರೆ ಇನ್ನೂ ಚೆನ್ನಾಗಿರತ್ತೆ ಅನ್ನಿಸ್ತಿದೆ. ವಸುಧೇಂದ್ರ, ಅಪಾರ ಇಬ್ಬರಿಗೂ ತುಂಬಾ ಥ್ಯಾಂಕ್ಸ್, ಇಂಥದ್ದೊಂದು ಪ್ರಯತ್ನಕ್ಕೆ ಮತ್ತು ಅದನ್ನು ಹೀಗೇ ಮುಂದುವರೆಸುವ ಯೋಚನೆಗೆ.
-ಮೀರ.

nishu mane said...

ಪ್ರವೀಣ್ ಅವರ ಚಿತ್ರ ನನಗೂ ತುಂಬಾ ಇಷ್ಟವಾಯ್ತು. ಬಳಸಿರೋ ಬಣ್ಣಗಳು ಸ್ವಲ್ಪ ಬದಲಾದರೆ ಇನ್ನೂ ಚೆನ್ನಾಗಿರತ್ತೆ ಅನ್ನಿಸ್ತಿದೆ. ವಸುಧೇಂದ್ರ, ಅಪಾರ ಇಬ್ಬರಿಗೂ ತುಂಬಾ ಥ್ಯಾಂಕ್ಸ್, ಇಂಥದ್ದೊಂದು ಪ್ರಯತ್ನಕ್ಕೆ ಮತ್ತು ಅದನ್ನು ಹೀಗೇ ಮುಂದುವರೆಸುವ ಯೋಚನೆಗೆ.
-ಮೀರ.

Anonymous said...

ಪ್ರವೀಣ್‍ರವರಿಗೆ ಅಭಿನಂದನೆಗಳು.
ಆದರೆ ನನಗೂ ಸ್ಂದೀಪ್ ಹಾಗೆ ಈ ಮುಖಪುಟ ಇಷ್ಟ ಆಗಲಿಲ್ಲ. ಖಂಡಿತ ಈ ಮುಖಪುಟವನ್ನು ಸ್ವಲ್ಪ ಆಳವಾಗಿ ನೋಡಿದಾಗ ಅದರಿಲ್ಲಿರೊ ಹಲವು ಭಾವಾರ್ಥಗಳು ತಿಳಿಯಬಹುದು ಆದರೆ ಪುಸ್ತಕದ ಅಂಗಡಿಯಲ್ಲಿ ಇದಕ್ಕೆ ಕೇವಲ ಮುಖಪುಟದಿಂದ ಇನ್ನೊಬ್ಬರನ್ನು ಸೆಳೆಯುವ ಶಕ್ತಿಯಿಲ್ಲ ಅನ್ನೋದು ನನ್ನ ಅನಿಸಿಕೆ.

Anonymous said...

ಪ್ರವೀಣ ಅವರಿಗೆ ಅಭಿನಂದನೆಗಳು. ಮೂಲ ಎಲ್ಲಿಯದೇ ಇರಲಿ ಬಾಳಿ ಬದುಕುವ ಛಲವನ್ನು , ಒಂದೇ ಗೆರೆಯಲ್ಲಿ ಬೀಜ ಮೊಳೆತು ಚಿಗುರುತ್ತಿರುವಂತೆ ಚಿತ್ರಿಸಿದ್ದಾರೆ ಎನಿಸುತ್ತದೆ.

ಸಂದೀಪ್ ಕಾಮತ್ said...

"ಮೂಲ ಎಲ್ಲಿಯದೇ ಇರಲಿ ಬಾಳಿ ಬದುಕುವ ಛಲವನ್ನು , ಒಂದೇ ಗೆರೆಯಲ್ಲಿ ಬೀಜ ಮೊಳೆತು ಚಿಗುರುತ್ತಿರುವಂತೆ ಚಿತ್ರಿಸಿದ್ದಾರೆ ಎನಿಸುತ್ತದೆ"

ಇದು ಓದಿದ ಮೇಲೆ ಸ್ವಲ್ಪ ಸ್ವಲ್ಪ ಅರ್ಥ ಆಗ್ತಾ ಇದೆ :)

Anonymous said...

OLLeya prayatna, oLLeya Ayke. mukha puTa kaNNIge hitavAgide. adu yavattU vaachyavAgirabAradu ennuvudu nanna anisike.
Praveen avarige abhinandane.

Vande,
Chetana Teerthahalli

Anonymous said...

ನನ್ಗೂ ಇಷ್ಟವಾಗಲಿಲ್ಲ.ಒಳಗಿನ ಕತೆ ಬರೆದ ವಸುಧೇಂದ್ರ ಅವರಿಗೂ, ಛಂದ ಪುಸ್ತಕದವರಿಗೂ ಹಿಡಿಸಿತು ಅಂದ ಮೇಲೆ ನಾನ್ ಎನ್ ಹೇಳೊದು :(
ಆದ್ರೆ ಮುಖಪುಟ ನೋಡಿ ಇದು ಯಾರದ್ದೂ ಎಂದು ನೋಡುವ ನನ್ನ ಕಣ್ಣಿಗೆ ಬುಕ್ ಅಂಗಡೀಲಿ ಇದು ಕಣ್ಣಿಗೆ ಬಿಳೊದು ಡೌಟೇ,ಹಾಗಂತ ಗ್ಯಾರಂಟೀಯೂ ಇಲ್ಲ. ಪುಸ್ತಕ ಕೈಯಲ್ಲಿ ಹಿಡಿದ ಮೇಲೆ ಗೊತ್ತಾಗುತ್ತೆ. ಮುಖಪುಟಕ್ಕೆ ಉಪಯೋಗಿಸೋ ಪೇಪರ್ರು, ಬೈನ್ಡಿನ್ಗು , ಹಿಂದು ಗಡೆ ಪೇಜು, .... ಟೋಟಲ್ ಔಟ್ ಲುಕ್ ಹೇಗಿರುತ್ತೇನೊ ?
ಹಾಗಂತ ಪ್ರವೀಣ್ ಅವರೇ ಬೇಜಾರಗಬೇಡಿ. ನಿಮ್ಮ ಚಿತ್ರ ಚೆನ್ದವಿದೆ. ಶುಭಾಶಯಗಳು. :) ಎಲ್ಲರ ಟೇಸ್ಟು ಒನ್ದೇ ತರಹ ಇರ್ರೋಲ್ಲವಲ್ಲಾ .

ನಾವಡ said...

ಪ್ರವೀಣರಿಗೆ ಅಭಿನಂದನೆಗಳು.
ಗಾರ್ಗಿ ಮತ್ತು ಅಪಾರ ಆರಿಸಿದ ಮುಖಪುಟ ಅರ್ಥವತ್ತಾಗಿದೆ. ಆರಿಸಿಕೊಂಡ ಬಣ್ಣಗಳೂ ಅದಕ್ಕೆ ಒಪ್ಪುವಂತವೇ. ನನಗನ್ನಿಸಿದಂತೆ ಆಯ್ಕೆಯಾದ ಮುಖಪುಟದಲ್ಲಿ ಒಂದು ಪ್ರಗತಿಯ ನೆಲೆಯಿದೆ. ಬಳ್ಳಾರಿಯಂಥಲ್ಲಿ ಬಿದ್ದ ಬೀಜ ಅಲ್ಲಿನ ಪರಿಸರದ ಅಂಶಗಳನ್ನು ಹೀರಿಕೊಂಡೇ ಬೆಂಗಳೂರಿನಂಥ ಮತ್ತೊಂದು ನೆಲೆಯಲ್ಲೂ ಹದಗೊಂಡು ಚಿಗಿತು ನಿಂತದ್ದು ಜೀವನ ಪ್ರೀತಿಯಿಂದಲೇ. ಅದು ಇಂದಿನ ನಮ್ಮೆಲ್ಲರ ಬದುಕಿನ ನೆಲೆಗಳೂ (ಎಲ್ಲರೂ ಹಳ್ಳಿಗಳಲ್ಲಿ ಹುಟ್ಟಿ ನಗರಗಳಲ್ಲಿ ಬದುಕು ಅರಳಿಸಿಕೊಂಡವರದ್ದು)ಸಹ. ಅದರಲ್ಲೂ ಆಕಾಶದತ್ತ ಮುಖಮಾಡಿ ಅರಳಿರುವ ಚಿಗುರುಗಳು ಪ್ರಗತಿಯ ನೆಲೆಯನ್ನು ಸೂಚಿಸುತ್ತೇವೆ. ದೊಡ್ಡ ಗಿಡ ಬಿಟ್ಟು, ಹೂವು-ಕಾಯಿ-ಹಣ್ಣನ್ನೂ ತುಂಬಿ ಮರ ಚಿತ್ರಿಸಿದ್ದರೆ ಬದುಕಿನ ಕೊನೆಯ ಹಂತ ಎನ್ನಬಹುದಿತ್ತೇನೋ? ಆದರೆ ಅದು ಬರಿಯ ಚಿಗುರು...ಅಲ್ಲಿಗೆ ಹೊಸ ನಿರೀಕ್ಷೆಗಳತ್ತ ಮತ್ತೆ ಬದುಕು ಮುಖ ಮಾಡಿದೆ, ಮುಖಾಮುಖಿಯಾಗಲು ಸಿದ್ಧವಾಗಿದೆ ಎಂದು ನನ್ನ ಅನಿಸಿಕೆ. ಅದಕ್ಕೆ ಚಿಗುರಿನ ಪರಿಧಿಗೆ ಬಳಸಿದ ನೀಲಿ-ತಿಳಿ ನೀಲಿ ಬಣ್ಣ ಸಹ ನಿರೀಕ್ಷೆ-ಆಗಸವನ್ನು ಹೇಳುವಂಥದ್ದು ಎಂಬುದು ನನ್ನ ಭಾವನೆ.
ಜೀವನಪ್ರೀತಿಯನ್ನು ಚೆನ್ನಾಗಿ ಅರ್ಥೈಸಬಲ್ಲದು ಎಂಬುದು ನನ್ನ ಅನಿಸಿಕೆ. ಬದುಕು ಚೆನ್ನಾಗಿ ಅರಳಬೇಕೆಂದರೆ ಜೀವನಪ್ರೀತಿಯೇ ಪ್ರಮುಖ ದ್ರವ್ಯ.
ನಮಗೊಂದು ಸಮಸ್ಯೆ ಇದೆ. ಮಾಡ್ರನ್ ಯುಗದಲ್ಲಿ ಒಂದಿಷ್ಟು ಕಲಸು ಮೇಲೋಗರ ಮಾಡಿದರೆ-ಅಬ್ಬರದಿಂದ ಚಿತ್ರಿಸಿದರೆ-ಅರ್ಥವಾಗದಿದ್ದರೂ ಪರವಾಗಿಲ್ಲ-ಕಣ್ಣಿಗೆ ಸೊಗಸೆನ್ನುವ ಬಣ್ಣಗಳಿದ್ದರೆ ಚೆಂದ ಎನ್ನುವ ಸ್ಥಿತಿಯಿದೆ. ಆದರೆ ಈ ಮುಖಪುಟ ಸರಳವಾಗಿಯೇ ಇದೆ, ಅರ್ಥವೂ ಇದೆ.
ಅಂದ ಹಾಗೆ ಇದು ಸುಮ್ಮನೆ ಟೀಕಿಸುವುದಕ್ಕಲ್ಲ. ನನಗನ್ನಿಸಿದ ಹಾಗೆ ಹೀಗೆ ಕಥೆ-ಕವನ ಪುಸ್ತಕ ಓದೋವವರು ಯಾರೂ ರಸಪ್ರಶ್ನೆಗಳ ಪುಸ್ತಕದಂತೆ ಮುಖಪುಟವಿರಬೇಕು (ಅಂದರೆಒಂದು ತಾಜಮಹಲ್ ಚಿತ್ರ, ದಿಲ್ಲಿಯ ಕೆಂಪುಕೋಟೆ, ವಿಜಾಪುರದ ಗೋಲ್ ಗುಂಬಜ್...ಇತ್ಯಾದಿ) ಎಂದು ಬಯಸಿರಲಾರರು. ಜತೆಗೆ ನಮಗೆ ಅರ್ಥವಾಗದ್ದು ಚೆನ್ನಾಗಿಲ್ಲವೆಂದೇನೂ ಅಲ್ಲ ಎಂಬುದು ಅನಿಸಿಕೆ. ಯಾಕೆಂದರೆ ಅದಕ್ಕೆ ಬುದ್ಧಿಜೀವಿಗಳನ್ನೋ, ಪ್ರಕಾಂಡ ಬುದ್ಧಿವಂತಿಕೆಯನ್ನೋ, ವ್ಯಂಗ್ಯವನ್ನೋ ಬೆರಸಿ ಹೇಳುವ ಅಗತ್ಯವಿಲ್ಲವಲ್ಲವೇ?
ಅಂದ ಹಾಗೆ ಉಳಿದ ಮುಖಪುಟಗಳನ್ನೂ ಟೀಕಿಸುತ್ತಿಲ್ಲ. ಆದರೆ ಬಹುಪಾಲು ಚಿತ್ರಗಳಲ್ಲಿ ಈ ಪ್ರಗತಿ ಕಾಣಿಸೋದಿಲ್ಲ. ಒಂದು ನೆಲೆಗೆ ಮಾತ್ರ ಮುಖ ಮಾಡಿದ್ದಾರೆ ಎನಿಸುತ್ತದೆ. ಅದರಲ್ಲೂ ಆರನೇ ತರಗತಿಯ ವಿನಿಶಾಳ ಪ್ರಯತ್ನವನ್ನು ನಾವೆಲ್ಲರೂ ಶ್ಲಾಘಿಸಲೇಬೇಕು. ಈ ಎಲ್ಲವೂ ಮುಖಪುಟ ಹಾಗೂ ಕಾಮೆಂಟ್ಸ್ ಗಳನ್ನು ನೋಡಿದಾಗ ಅನಿಸಿದ್ದೇ ಹೊರತು ಬೇರೇನೋ ಇಲ್ಲ. ವೃಥಾ ಟೀಕಿಸುವ ಉದ್ದೇಶವಂತೂ ಅಲ್ಲ. ಕಲಾವಿದ ಪ್ರವೀಣ ನನ್ನ ಅನಿಸಿಕೆಯನ್ನೂ ತೆಗೆದು ಹಾಕಬಹುದೇನೋ ? ಆದರೆ ಇದು ನನ್ನ ಅನಿಸಿಕೆ ಮಾತ್ರ
ನಾವಡ

ನಾವಡ said...

ದಯವಿಟ್ಟು ಕ್ಷಮಿಸಿ. ಒಂದು ಹೇಳಲು ಮರೆತಿದ್ದೆ. ಆ ಚಿತ್ರದಲ್ಲಿ ಪ್ರತಿ ಚಿತ್ರಕ್ಕಿರುವ ಚೌಕಟ್ಟೂ ಸಹ ನಮ್ಮ ನಮ್ಮ ನೆಲೆಯ ಪರಿಧಿಯನ್ನು ಹೇಳುತ್ತದೆ. ಆ ಚಿಗುರು ಸಹ ತನ್ನ ನೆಲೆಯಲ್ಲೇ ಹೊಸ ನಿರೀಕ್ಷೆಗಳತ್ತ ಮುಖ ಮಾಡಿದೆ. ಉಳಿದ ವೈಟ್ ಸ್ಪೇಸ್ ನಮಗೆ ಎಟುಕದ ಉಳಿದ ಜಗತ್ತು (ದಿವ್ಯಾಕಾಶ) ಎಂದು ಅರ್ಥೈಸಬಹುದು ಎನಿಸುತ್ತದೆ. ನಮಗೆ ಅರ್ಥವಾಗಿಲ್ಲ ಎನ್ನುವುದಷ್ಟೇ ಕೇವಲ ಟೀಕಿಸುವುದಕ್ಕೆ ಅರ್ಹತೆ ಆಗಬಾರದು ಎನ್ನುವುದು ನನ್ನ ಕಾಳಜಿ. ಮತ್ತೊಂದು ಮನವಿಯೆಂದರೆ ದಯವಿಟ್ಟು ಇಲ್ಲಿಯೂ ಜಾತಿ ಬಣ್ಣ ಕಟ್ಟಲು ಹೋದರೆ ಬರೀ ಮುಖಪುಟದ್ದಲ್ಲ ; ನಮ್ಮೆಲ್ಲರ ಚಿತ್ರಗಳೇ ಬಣ್ಣಗೆಡುತ್ತವೆ !

ಗಿರೀಶ್ ರಾವ್, ಎಚ್ (ಜೋಗಿ) said...

ಈ ಸ್ಪರ್ಧೆಯಿಂದಾದ ಮೂರು ಮಹತ್ವದ ಅನುಕೂಲಗಳಿವು-
1. ಕತೆ ಓದಿ ಕಲಾವಿದರು ಚಿತ್ರ ರಚಿಸುತ್ತಾರೆ ಎಂಬ ಭ್ರಮೆ ತೊಲಗಿತು.
2. ಕತೆಗೂ ಅದರ ಪರಿಸರಕ್ಕೂ ಮುಖಪುಟಕ್ಕೂ ಸಂಕಲನದ ಶೀರ್ಷಿಕೆಗೂ ಸಂಬಂಧ ಇರಬೇಕು ಎಂಬ ವಾದ ಮಗುಚಿ ಬಿತ್ತು.
3. ಅಬ್ ಸ್ಟ್ರಾಕ್ಟ್ ಪೇಂಟಿಂಗು, ನವ್ಯ ಕಲೆ ಇವೆಲ್ಲ ಮುಖಪುಟದ ಚಿತ್ರದಲ್ಲಿರಬೇಕು ಎಂಬ ನವ್ಯರ ಕಾಲದಿಂದ ನಾವು ಹೊರಬಂದಿದ್ದೇವೆ.

ನನಗೆ ವೈಯಕ್ತಿಕವಾಗಿ ಈ ಮುಖಪುಟ ಇಷ್ಟವಾಗಲಿಲ್ಲ. ವಸುಧೇಂದ್ರರ ಕತೆ ನಂಗಿಷ್ಟ ಆಗೋದರಿಂದ ಇದನ್ನೂ ಕ್ರಮೇಣ ಮೆಚ್ಚಿಕೊಳ್ಳಬಹುದೇನೋ. ಆದರೆ, ತುಂಬಾ ಹಿಂದೆಯೇ ಅಕ್ಷರ ಪ್ರಕಾಶನ ಇಂಥ ಪ್ರಯೋಗ ಮಾಡಿತ್ತು ಎಂದು ನೆನಪು.
-ಜೋಗಿ

ಸಂದೀಪ್ ಕಾಮತ್ said...

ಪ್ರಕಾಶಕರ ಬಳಿ ಸ್ವಲ್ಪ ಕಾಸು ಜಾಸ್ತಿ ಇದ್ರೆ ಎರಡು ಮೂರು ಮುಖಪುಟ ಉಪಯೋಗಿಸಿ ಮುದ್ರಿಸ್ಬಹುದೇನೋ!

’ನಿಮಗೆ ಇಷ್ಟ ಬಂದದ್ದು ಸಿಲೆಕ್ಟ್ ಮಾಡಿ ’ ಅನ್ನೋ ಹಾಗೆ.
.
.
.
ತಮಾಷೆಗಂದೆ ಉಗಿಬೇಡ್ರಪ್ಪ!

Anonymous said...

@ ನಾವಡ
ವಿನ್ಯಾಸಕ್ಕೆ ನೀವು ಕೊಟ್ಟಿರುವ ಇಂಟರ್ ಪ್ರೆಟೆಶನ್ ತುಂಬಾನೇ ಇಷ್ಟ ಆಯ್ತು.

:-)

ಮಾಲತಿ ಎಸ್.

Pramod P T said...

ಅಭಿನಂದನೆಗಳು ಪ್ರವೀಣ್.
ನಿಮ್ಮ ಕವರ್ ಪೇಜ್ ಡಿಸೈನ್ ನನಗಿಷ್ಟವಾಯ್ತು.

ಆದರೆ ಉಳಿದ 11 ರಲ್ಲಿ 3-4ರ ಆಯ್ಕೆ ತುಂಬಾ ನಿರಸವಾಗಿದೆ.

Chaitanya Hegde said...

Praveenanige congrats, hageye navadarige thanks. avara intrepretationalli mukaputa mattastu "chanda' enisitu...

Chaitanya Hegde

Datta3 said...

congrats praveen....
uttamavaada mukhaputa...

@apara
apara avre ondu chikka doubt......
ಕಡೆಯ ಸುತ್ತಿನವರೆಗೂ ಸ್ಪರ್ಧೆಯಲ್ಲಿದ್ದ ಇತರ ಹನ್ನೊಂದು ವಿನ್ಯಾಸ antha kottidderalla adralli 6ne mukhaputa prasad avre vinyasa maadidda....?
mattomme check maadi...!

Aashitha said...

Congrats praveen..:)

siGnal ToweR said...

V.R.CARPENTER

EE mukhaputa hostenannu heluttilla adru idnnu ayke madida teeprugararu mattomme yochisa bahudittu annisuttade. idu ella reetiyimdloo dodda hodeta. neevella serikondo Praveen anno kalavidana kriyashilteynnu kondiddiri enisuttde. munde heegagadante nodikolli. nanage nimma bagge kalaji mattu gourava iruv karnakke heluttiddene.

Shreenidhi Odilnala said...

praveenge congratulations... yarige bahumana sigabahudu anno sahaja kuthuhala ittu. pravin cover page binnavagide. apara avru e ondu sparde nadistha irodrinda avru thirpugararagi iddudara badalu bereyavru iddiddare chennagirthitthu annodu nanna anisike.hosa prayatna, munde jariyallirali... vandanegalu.
-srinidhi odilnala

apara said...

ದತ್ತಾತ್ರಿ, ನೀವು ಹೇಳಿದ್ದು ಸರಿ. ೬ನೇ ಮುಖಪುಟದ ವಿನ್ಯಾಸ ಮಾಡಿದ್ದು ನೀವು; ಪ್ರಸಾದ್ ಅಲ್ಲ. ಕಣ್ತಪ್ತಿನಿಂದ ಇಷ್ಟು ದೊಡ್ಡ ತಪ್ಪು ಆಗಬಾರದಿತ್ತು. ದಯವಿಟ್ಟು ಕ್ಷಮಿಸಿ. ಈಗ ಸರಿಪಡಿಸಿದ್ದೇವೆ.
srinidhi, ಈ ಸ್ಪರ್ಧೆಯನ್ನು ನಡೆಸಿದ್ದು ಛಂದಪುಸ್ತಕ; ನಾನಲ್ಲ. ಛಂದದ ಬ್ಲಾಗ್ ಇರದ ಕಾರಣ ನನ್ನ ಬ್ಲಾಗಲ್ಲಿ ಮುಖಪುಟಗಳನ್ನು ಪ್ರದರ್ಶಿಸಬೇಕಾಯ್ತು ಅಷ್ಟೇ.
-ಅಪಾರ

Anonymous said...

navadare,
nimma interpetation nodi nange doubt bandu bittitu.
-Illi nadedaddu Art competationno or Cover page design competationno!!??
-hage nodidre cover page annodu vandu pustakakke astu avashave?
-cover pagena mula uddesha enu?

Anonymous said...

Dear sir
Please visit my blog
http://rishyashringa.blogspot.com/

ರಾಧಾಕೃಷ್ಣ ಆನೆಗುಂಡಿ. said...

ನನಗಂತೂ ಇಷ್ಟವಾಗಲಿಲ್ಲ

Anonymous said...

ee mukhaputa apaararante idhe. adhe reethi adda, udda patti janakke bejaaru bandide. aadru antahadde mukaputakke prize sikkiddu nijjakku besarada sanganthi...
ravi

HARISHCHANDRA SHETTY said...

g.n.mohan nimma maathu sari
aaike sariyagilla...oduganige
arthavaagabeku...apaara avara mukaputa da copy agide hosathana villa.
idu gambira vishaya.
sparde idea thumbane channagitthu.

harini
kudla

Unknown said...

I WOULD LIKE TO CONGRADULATE SRI.HEGDE FOR HAVING WON IN THE CONTEST.
And,i felt very happy when i read about the cover page contest organised by Sri.Vasudhendra.I have seen many publishers who give least attention to the cover page designs of their books.Fortunately,your concern is commendable.

ಎಚ್. ಆನಂದರಾಮ ಶಾಸ್ತ್ರೀ said...

ಏನೋ ಹೊಸತರ ಬಯಕೆ ಹೀಗೆಲ್ಲ ಆಡಿಸುತ್ತೆ, ಮಾಡಿಸುತ್ತೆ.
ಸಹಜವೇ.
ಇರುವುದೆಲ್ಲವ ಬಿಟ್ಟು ಇನ್ನೊಂದನರಸುತ್ತ ಸಾಗಲದೆ ಮಾನವ.
-ಎಚ್‌. ಆನಂದರಾಮ ಶಾಸ್ತ್ರೀ

ಆಲಾಪಿನಿ said...

ಬಹುಮಾನ ಪಡೆದ ಕವರ್‍ ಪೇಜ್ ಬಗ್ಗೆ ನನಗೇನು ಹೇಳಬೇಕು ತೋಚತಿಲ್ಲ. ಆದ್ರೆ ಲುಕ್‌ವೈಸ್ ಫೀಲ್‌ವೈಸ್ ಇನ್ನುಳಿದ ಕೆಲ ಮುಖಪುಟಗಳತ್ತ ಗಮನಹರಿಸಿದ್ದರೆ ಚೆಂದವಿತ್ತು.

Anonymous said...

" ಹಂಪಿ ಎಕ್ಸ್ ಪ್ರೆಸ್ " ಅಂದರೆ, ರೈಲು ಗಾಡಿಯದೇ ಚಿತ್ರವಿರಬೇಕೆಂದು ನನಗೆ ಅನ್ನಿಸಿಲ್ಲ. ಬಳ್ಳಾರಿಯಿಂದ ಬೆಂಗಳೂರಿನವರೆಗಿನ ಜೀವನದ ಪ್ರತೀ ಹಂತವನ್ನು ರೈಲು ಬೋಗಿಗೆ ಹೋಲಿಸಿ, ಪುಸ್ತಕಕ್ಕೆ ಈ ಹೆಸರು ಇಟ್ಟಿದ್ದಾರೆ ಎನಿಸುತ್ತದೆ. ಒಂದೊಂದು ಡಬ್ಬಿ ಒಂದೊಂದು ಕಥೆ ಹೇಳುತ್ತಿರಬಹುದು! ಇದೆಲ್ಲಾ ನನ್ನ ಅನಿಸಿಕೆಯಷ್ಟೇ!

Anonymous said...

ನಮಸ್ಕಾರ
ನಾನು ನಿಮ್ಮ ಬ್ಲಾಗ್ ಓದುಗ. ನಾನೊಂದು ಬ್ಲಾಗ್ ತೆರೆದಿದ್ದೇನೆ. ದಯವಿಟ್ಟು ಓದಿ, ಹರಸಿ.
ನಿಮ್ಮ ಕಾಲ್ಗುಣದಿಂದ ನನ್ನ ಮನೆಗೆ ಮಂಗಳವಾಗಲಿ.
-ರಿಶಿ
risyashringaa@gmail.com
rishyashringa.blogspot.com

Anonymous said...

ಡಿಸೈನೂ ಚೆನ್ನಾಗಿದೆ.ಹುಡುಗನೂ ಚೆನ್ನಾಗಿದಾನೆ. ಹ ಹ ಹ

.....ಭವಿಷ್ಯ

Anonymous said...

It is sad that so many better covers are ignored for the prize. It would have been good if judges given bit more rational details on why that has been chosen.

When one conduct a competition, it is important to recognise that yong minds will work hard to produce some beautiful art work. Awarding prizes for non deserved cover means insulting those who have really done well. Look at the depth of some of the covers posted in this coloum. I am saden by the fact that judges tried to ignore all those beautiful and meaningfull cover.

-ashok hegde

ನವಿಲುಗರಿ ಹುಡುಗ said...

devraaane nanage gulganjiyashtu ishtavaagalilllaaaa

jana neev tilkodniro tara ashtondu buddivantralla sir.arta madkolloke...

praveen congratz

ಶಿವಪ್ರಕಾಶ್ said...

ನಾನು ಪುಸ್ತಕ ಓದಿದ್ದೇನೆ.
ಪುಸ್ತಕ ಇಷ್ಟವಾಯಿತು.
ಮುಖಪುಟ ಇಷ್ಟ ಆಗ್ಲಿಲ್ಲ.. ( ಅಥವಾ ನನಗೆ ಅರ್ಥವಗ್ಲಿಲ್ವೋ :( ? )