ಸ್ಪರ್ಧೆಯ ಅಂತಿಮದಿನ ಮುಗಿದು ಏಳು ದಿನಗಳು ಕಳೆದರೂ ಮುಂದೇನು ಎಂದು ತಿಳಿಸದೆ ಇದ್ದುದ್ದಕ್ಕಾಗಿ ಕ್ಷಮಿಸಿ. ಇಂದು ಸೇರಿಸಿರುವ ೧೪ ಮುಖಪುಟಗಳು ಕಡೆಯ ಕ್ಷಣದಲ್ಲಿ ನಮ್ಮನ್ನು ತಲುಪಿದ ಪ್ರವೇಶಗಳು. ಛಂದ ಪುಸ್ತಕದ ಈ ಮುಖಪುಟ ಸ್ಪರ್ಧೆಗೆ ಒಟ್ಟು ೬೫ ಕಲಾವಿದರು ೨೪೫ ಮುಖಪುಟಗಳನ್ನು ಕಳಿಸಿದ್ದಾರೆ! ಇಂಥ ಅಮೋಘ ಪ್ರತಿಕ್ರಿಯೆಯನ್ನು ನಾವಂತೂ ನಿರೀಕ್ಷಿಸಿರಲಿಲ್ಲ. ತೀರ್ಪುಗಾರರು ಇವುಗಳಲ್ಲಿ ಮೂವತ್ತನ್ನು ಶಾರ್ಟ್‌ಲಿಸ್ಟ್ ಮಾಡಿಕೊಡಲಿದ್ದಾರೆ. ಈ ಪಟ್ಟಿಯು ಇದೇ ಬ್ಲಾಗ್‌ನಲ್ಲಿ ಬರುವ ಮಂಗಳವಾರ (ನ.೧೧)ಪ್ರಕಟಗೊಳ್ಳುವುದು. ಕೆಲವು ದಿನ ನಿಮ್ಮ ಆಯ್ಕೆಗಾಗಿ ಅವಕಾಶ ನೀಡಿ, ನಂತರ ತೀರ್ಪುಗಾರರ ಆಂತಿಮ ಆಯ್ಕೆಯನ್ನು ಪ್ರಕಟಿಸೋಣ ಎಂದುಕೊಂಡಿದ್ದೇವೆ.
1 comment:
ನವೆಂಬರ್ ೧೧ ಯಾವ ವರ್ಷ?.. ಈ ವರ್ಷದ್ದು ಅರ್ದ ಮುಗಿದೊಯಿತು!! commented at 3PM nov 11 2008
Post a Comment