Friday, July 4, 2008

ಶಪಿತನ ಹಾಡು 10

23
ನಾವು ತುಟಿ ಹತ್ತಿರ ತಂದಾಗಲೆಲ್ಲಾ
ಗೇಟು ಕಿರ್ ಎಂದು ನೀ ಬೆಚ್ಚಿ ಓಡುತ್ತಿದ್ದೆ
ಎದ್ದು ನಾನು ಮನೆಗೆ ಬಂದರೆ ಇಲ್ಲಿ
ತುಟಿಪಿಟಿಕ್ಕೆನ್ನದ ವ್ಯರ್ಥ ಏಕಾಂತ

24
ಅಂದು ನೀ ಬರಲೇಬೇಕಿತ್ತು ಬರಲಿಲ್ಲ
ಕಾದೇ ಕಾದೆ ಜೋರು ಮಳೆ ಬಂತು
ಜನರೆಲ್ಲ ಓಡಿ ಓಡಿ ತಪ್ಪಿಸಿಕೊಂಡರು
ನಾ ನೆನೆದು ನೆನೆದು ತಪ್ಪಿಸಿಕೊಂಡೆ

25
ಮಿತ್ರರು ನನ್ನನು ಮಿಡಿಸಲಾರರು
ಶತ್ರುಗಳು ನನ್ನನು ಕೆಡಿಸಲಾರರು
ಸಾಧ್ಯವೆ ಹಿಟ್‌ವಿಕೆಟ್ ಆಗುವನ ಗೆಲ್ಲಿಸೋದು
ಆತ್ಮಹತ್ಯೆಗಿಳಿದವನ ಕೊಲ್ಲಿಸೋದು?

1 comment:

ವಿನಾಯಕ ಭಟ್ಟ said...

ನಿಮ್ಮ ನೈಂಟಿ ಹನಿಗಳ ಪುಸ್ತಕ ಓದಿದೆ. ಅದ್ಭುತವಾಗಿದ್ದವು, ನೈಂಟಿಗಿಂತ ಹೆಚ್ಚು ಮತ್ತೇರಿಸುವಂತಿದ್ದವು...
ಬ್ಲಾಗಿಸಿದ ಕವನಗಳೂ ಚೆನ್ನಾಗಿವೆ. ಇದನ್ನು ನೋಡಿದರೆ ಇನ್ನೊಂದು ಕವನ ಪುಸ್ತಕದ ತಯಾರಿ ಇದ್ದಂತಿದೆ. ಬೇಗ ಬರಲಿ.