ನಾನೂ ನಿಮ್ಮಂತೆಯೇ ಮುಗಿಯಿತು ಎಂದುಕೊಂಡಿದ್ದೆ. ಆದರೆ ಆಗ ಬರೆದು ಬಳಸದೆ ಉಳಿದಿದ್ದ ಈ ಪದ್ಯಗಳು ಮೊನ್ನೆ ಸಿಕ್ಕವು. ಸಿನಿಮಾದ ಡಿವಿಡಿಯಲ್ಲಿನ ಡಿಲೀಟೆಡ್ ಸೀನ್‌ಗಳಂತೆ ಓದಿಕೊಳ್ಳಬಹುದೇನೊ ಎನಿಸಿ ಇಲ್ಲಿ ಹಾಕುತ್ತಿರುವೆ. ನಿಜಕ್ಕೂ ಇದು ಕಡೆಯ ಕಂತು!
೧
ತುಸು ಜಾಸ್ತಿ ಆಗಿದೆ ಇಂದು
ಮೈಮೇಲೆ ಬಿದ್ದದ್ದಕ್ಕೆ ಸಾರಿ
ನಿಮ್ಮನ್ಯಾಕೆ ಅಳಿಸಲಿ ಹೇಳಿ
ನನ್ನೆದೆ ಮೇಲ್ ಬಿದ್ದುದ ತೋರಿ
೨
ಯಾರು ಪರೀಕ್ಷೆ ಮಾಡಿದರೇನು
ನೂರು ಪ್ರಶ್ನೆ ಹಾಕಿದರೇನು
ಚೂರೂ ಹೆದರುವುದಿಲ್ಲ ನಾನು
ಬಾರು ಎಲ್ಲಿದೆಯೆಂದು ಗೊತ್ತಿಲ್ಲವೇನು?
೩
ದ್ರೋಹದ ಬೆಂಕಿಯಲಿ ನಾನು
ಉರೀತಿರುವೆ ನಖಶಿಖಾಂತ
ಯಾರು ಕುಡೀತಿದ್ದರು ಹೀಗೆ
ಆಗಿದ್ದರೆಲ್ಲವೂ ಸುಖಾಂತ?
೪
ಪಾರು ಮಾಡೋ ಕೃಷ್ಣಾ
ಪಾರು ಮಾಡೋ
ನಿಯರೆಸ್ಟ್ ಬಾರಿನ
ದಾರಿ ತೋರೊ
೫
ಮೋರಿಯಲಿ ಬಿದ್ದವನ ಕಾಣಬಲ್ಲ ನಿಮಗೆ
ಕಾಣದು ಅವನ ನರಕ ಸದೃಶ ಹಗಲು
ಬೆಚ್ಚಿಸುವ ಥರಥರದ ದಿಗಿಲು
ಮತ್ತೀಗ ಅವನು ತೇಲುತಿರುವ ಮುಗಿಲು
೬
ನೀನು ಕೈ ಕೊಟ್ಟದ್ದೂ
ಒಳ್ಳೆಯದೇ ಆಯಿತು
ಇಲ್ಲದಿದ್ದರೆನಗೆ ಮದಿರೆಯ
ಪರಿಚಯವೇ ಆಗುತ್ತಿರಲಿಲ್ಲ
೭
ಆದಿಯೂ ಇಲ್ಲ ಅಂತ್ಯವೂ ಇಲ್ಲ
ನನ್ನದೊಂದು ವಿಚಿತ್ರ ವ್ಯಥೆ
ಮದ್ಯದಲ್ಲೇ ಶುರುವಾದದ್ದು
ಮದ್ಯದಲ್ಲೇ ಮುಗಿವುದೆ ಕತೆ?
4 comments:
Apaara,
Good ones.
I kindof miss you comment-ree.
Why aren't you posting them? They are really enjoyable.
-Tina
ಕಂತುಪಿತ,
ಮದ್ಯಕ್ಕಿಲ್ಲ ಇಂಥದ್ದೇ ಮಂತು
ಮದ್ಯಕ್ಕಿಲ್ಲ ಕೊನೆಯ ಕಂತು
ಅಳಿದೂ ಉಳಿಯುವ ಅಪಾರ
ಸಾಧ್ಯತೆಗೆ
ಒಂದೇ ದಾರಿ ಮದ್ಯಸಾರ
ಕೈಲಾಸಂ ಹೇಳಿದ್ದಾರೆ-
ಐ ಯಾಮ್ ವೆಲ್ ಪ್ರಿಸರ್ವ್ಡ್ ಇನ್ ಆಲ್ಕೋಹಾಲ್.
-ಜೋಗಿ
ಬಾರ ಬಾರ ಆವೊ, ಹಜಾರ ಬಾರ ಆವೊ
ಬಾರು ಕಾಯುತಿರುವದು, ಬಾರೊ ಬೇಗ ಬಾರೊ!
thumbaa chennagide...
adarallu "paaru maado " anthu wonderfull...
congrats,
-Ranjith.
Post a Comment