


ಜೋಗಿಯವರ ಹೊಸ ಕಾದಂಬರಿ ಬರುತ್ತಿದೆ. ಹೆಸರು: ಮಾಯಾಕಿನ್ನರಿ. ಬಿಡುಗಡೆ ಈ ಭಾನುವಾರ. ಮುಖಪುಟ ಇವತ್ತು ರೆಡಿಯಾಯಿತು. ಮುಖಪುಟ ರೆಡಿಯಾದ ನೆಮ್ಮದಿಯಲ್ಲಿ ಈಗ ಜೋಗಿ ಕಾದಂಬರಿ ಬರೆಯಲು ಕೂತಿದ್ದಾರೆ! ಬಿಸಿಬಿಸಿ ಕಾದಂಬರಿಯ ಜತೆಗೆ ಅವರ ಇನ್ನೆರಡು ಪುಸ್ತಕಗಳೂ ಅಂದು ಪ್ರಕಟಗೊಳ್ಳುತ್ತಿವೆ. ಪ್ರಕಾಶಕರು ಅಂಕಿತ. ಅಂದಮೇಲೆ ವಾಡಿಯಾ... ಬೆಳಗ್ಗೆ ೧೦.೩೦...ಇತ್ಯಾದಿ ವಿವರ ನಿಮಗೆ ಗೊತ್ತೇ ಇದೆ ಬಿಡಿ!