
ಲತಾ ಮಂಗೇಶ್ಕರ್ ಜೀವನವನ್ನು ಕುರಿತ ಪುಸ್ತಕ ‘ಹಾಡುಹಕ್ಕಿಯ ಹೃದಯಗೀತೆ ’ ಬರುವ ಮಂಗಳವಾರ(೨೭ನೇ ತಾರೀಖು) ಸಂಜೆ ೬ ಗಂಟೆಗೆ ಅನಾವರಣಗೊಳ್ಳುತ್ತಿದೆ. ವಿಜಯ ಕರ್ನಾಟಕದ ಸುದ್ದಿ ಸಂಪಾದಕರಾದ ವಸಂತ ನಾಡಿಗೇರ ಬರೆದಿರುವ ಈ ಪುಸ್ತಕದ ಬಿಡುಗಡೆಗೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಬರುತ್ತಿರುವುದು ವಿಶೇಷ. ಐದುಗಂಟೆಗೇ ಬಂದರೆ ಉಪಾಹಾರವೂ, ಚಂದ್ರಿಕಾ ಗುರುರಾಜ್ ಅವರ ಕಂಠದಲ್ಲಿ ಲತಾ ಹಾಡಿದ ಹಾಡುಗಳನ್ನು ಕೇಳುವ ಭಾಗ್ಯವೂ ಸಿಕ್ಕುತ್ತದೆ. ಮರೆಯದೆ ಬನ್ನಿ. ಸ್ಥಳ: ಆನಂದರಾವ್ ಸರ್ಕಲ್ ಬಳಿ ಇರುವ ಕೆಇಬಿ ಇಂಜಿನಿಯರುಗಳ ಸಂಘದ ರಜತ ಮಹೋತ್ಸವ ಭವನ.(ರೇಸ್‌ಕೋರ್ಸ್ ಅಡ್ಡರಸ್ತೆ).