Thursday, November 8, 2007

ದುಃಖಿತರ ದೀಪಾವಳಿ

ಮನೆಯ ದಾರಿಯಲೇ ಕಾದು ನಿಂತಿದೆ ಹಾಳು ಸಿಗ್ನಲ್ಲು ದೀಪ
ಹೊಸಿಲಲ್ಲಿ ನಿಂತು ಒಳಬರಲು ಅನುಮಾನಿಸುತಿದೆ ಮಣ್ಣ ದೀಪ
ಸ್ಟವ್‌ನೆದುರು ಬಿಕ್ಕುತಿರುವವಳ ಕಣ್ಣಲಿ ಕರಗುತಿದೆ ನೀಲಿ ದೀಪ
ಕಾಮಾಟಿಪುರದಲ್ಲೋ ನಖಶಿಖಾಂತ ಉರಿಯುತಿದೆ ಕೆಂಪು ದೀಪ


ದೀಪಗಳೆಲ್ಲ ಆರಿದಮೇಲೂ ಗೋಡೆ ಮೇಲೆ ಹೊಳೆದಿದೆ ಕಾಲದೀಪ
ಇರುಳ ಸದ್ದೊಂದಕೆ ಬೆಚ್ಚಿ ಎದ್ದಿದೆ ಒಂಟಿ ಹೆಂಗಸಿನ ಬ್ಯಾಟರಿದೀಪ
ಅರಿಯದ ದುಗುಡದಲಿ ಹೊಯ್ದಾಡುತಿರುವಾಗ ಮನದ ದೀಪ
ದುಃಖಿತರ ಮನೆ ಮೇಲೇಕೆ ಬೆಳಗಿದೆ ಚಂದ್ರನೆಂಬ ಆಕಾಶದೀಪ


ಸರಿಹೊತ್ತಿನ ಸಂದೇಶಕೆ ಹೊತ್ತಿಕೊಂಡಿದೆ ಮೊಬೈಲು ದೀಪ:
ಕೋರಲು ದೀಪಾವಳಿ ಶುಭಾಶಯ, ತೊಡೆಯಲು ಎಲ್ಲ ಶಾಪ

2 comments:

Anonymous said...

Deepa yavudadare enu
ellavannu belagali
ee deepada habba nimage
olleyadanne tarali

Sushrutha Dodderi said...

ನಿಜ... ಎಲ್ಲ ದೀಪಗಳೂ ಬೆಳಗಲಿ ಎಂದು ಶುಭವನ್ನು ಆಶಿಸುವುದಷ್ಟೇ ನಾವು ಮಾಡಬಹುದಾದ ಕೆಲಸ...